ಪಕ್ಕದ ರಾಜ್ಯದಲ್ಲಿ ಹಸಿರು ಶಾಲು ಹಾಕ್ತೀರಿ! ನಮ್ಮ ರಾಜ್ಯದಲ್ಲಿ ಕೇಸರಿ ಶಾಲು ಧರಿಸಿ ವಂಚಿಸ್ತಿದ್ದೀರಿ- ಸಿ.ಟಿ.ರವಿ ವಿರುದ್ಧ ವ್ಯಂಗ್ಯವಾಡಿದ ಮೀಗಾ

ನೀವು ಹಸಿರು ಶಾಲು ಧರಿಸಿದ್ದಕ್ಕೆ ನಮಗೆ ಸಂತಸವಾಗುತ್ತಿದೆ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿಸಿ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಗೆ ಸಚಿನ್ ಮೀಗಾ ಆಗ್ರಹಿಸಿದ್ದಾರೆ.

ಪಕ್ಕದ ರಾಜ್ಯದಲ್ಲಿ ಹಸಿರು ಶಾಲು ಹಾಕ್ತೀರಿ! ನಮ್ಮ ರಾಜ್ಯದಲ್ಲಿ ಕೇಸರಿ ಶಾಲು ಧರಿಸಿ ವಂಚಿಸ್ತಿದ್ದೀರಿ- ಸಿ.ಟಿ.ರವಿ ವಿರುದ್ಧ ವ್ಯಂಗ್ಯವಾಡಿದ ಮೀಗಾ
ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಸಿರು ಶಾಲು ಹಾಕಿಕೊಂಡಿದ್ದಕ್ಕೆ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ವ್ಯಂಗ್ಯ ಮಾಡಿದ್ದಾರೆ. ಪಕ್ಕದ ರಾಜ್ಯಕ್ಕೆ ಹೋಗಿ ಹಸಿರು ಶಾಲು ಹಾಕಿಕೊಳ್ಳುತ್ತೀರಿ. ನಮ್ಮ ರಾಜ್ಯದಲ್ಲಿ ಕೇಸರಿ ಶಾಲು ಧರಿಸಿ ವಂಚಿಸುತ್ತಿದ್ದೀರಿ ಎಂದು ವ್ಯಂಗ ಮಾಡಿದ್ದಾರೆ.

ಚಿಕ್ಕಮಗಳೂರು ಜನರಿಗೆ ಕೇಸರಿ ಶಾಲು ತೋರಿಸಿ ಗೆಲುವು ಸಾಧಿಸಿದ್ದೀರಿ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ನೀವು ಗೆದ್ದಿದ್ದೀರಿ. ಗೋಸುಂಬೆ ತರ ಬಣ್ಣ ಬದಲಿಸಿ ರಾಜಕೀಯ ಮಾಡ್ತಿದ್ದೀರಿ. ನಮ್ಮಲ್ಲೂ ಹಸಿರು ಶಾಲು ಧರಿಸಿ ರೈತರಿಗೆ ನ್ಯಾಯ ಕೊಡಿಸಿ. ನಮ್ಮ ಜಿಲ್ಲೆಯಲ್ಲಿ ಮಳೆಯಿಂದಾಗಿ ನೂರಾರು ಜನ ಮನೆ ಕಳೆದುಕೊಂಡಿದ್ದಾರೆ. ನೀವು ಹಸಿರು ಶಾಲು ಧರಿಸಿದ್ದಕ್ಕೆ ನಮಗೆ ಸಂತಸವಾಗುತ್ತಿದೆ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿಸಿ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಗೆ ಸಚಿನ್ ಮೀಗಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಚಿವ ಸಿ.ಪಿ.ಯೋಗೇಶ್ವರ್ ನೀಡಿದ್ದ ರಾಜ್ಯದಲ್ಲಿರುವುದು ಮೂರು ಪಕ್ಷಗಳ ಸರ್ಕಾರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ