ಹುಂಡಿ ಒಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ, ಸ್ಥಳೀಯರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ

ಚಿಕ್ಕಮಗಳೂರು: ದೇವಾಲಯದ ಹುಂಡಿ ಒಡೆಯಲು ಬಂದ ಕಳ್ಳನಿಗೆ ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಲುಹೊಳೆ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಗ್ರಾಮದ ಹುಲ್ಲೆ ಕಲ್ಲೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಹೊಡೆಯಲು ಬಂದಿದ್ದ ಕಳ್ಳ ತನ್ನ ಕೆಲಸದಲ್ಲಿ ನಿರತನಾಗಿದ್ದ. ಮಚ್ಚು ಹಾಗೂ ಸುತ್ತಿಗೆಯಲ್ಲಿ ಹುಂಡಿಯನ್ನ ಒಡೆಯುವ ವೇಳೆ ಶಬ್ದ ಕೇಳಿ ಗ್ರಾಮಸ್ಥರು ಇಡೀ ದೇವಾಲಯವನ್ನ ಸುತ್ತುವರಿದಿದ್ದಾರೆ. ಯಾಕಂದ್ರೆ, ಈ ದೇವಾಲಯದಲ್ಲಿ ಹಿಂದೊಮ್ಮೆಯೂ ಕಳ್ಳತನವಾಗಿತ್ತು. ಹಾಗಾಗಿ ಊರಿನ ಜನ ಕೂಡ ಅಲರ್ಟ್ […]

ಹುಂಡಿ ಒಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ, ಸ್ಥಳೀಯರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ
Ayesha Banu

|

Jun 10, 2020 | 3:10 PM

ಚಿಕ್ಕಮಗಳೂರು: ದೇವಾಲಯದ ಹುಂಡಿ ಒಡೆಯಲು ಬಂದ ಕಳ್ಳನಿಗೆ ಸ್ಥಳೀಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಲುಹೊಳೆ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಗ್ರಾಮದ ಹುಲ್ಲೆ ಕಲ್ಲೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಹೊಡೆಯಲು ಬಂದಿದ್ದ ಕಳ್ಳ ತನ್ನ ಕೆಲಸದಲ್ಲಿ ನಿರತನಾಗಿದ್ದ. ಮಚ್ಚು ಹಾಗೂ ಸುತ್ತಿಗೆಯಲ್ಲಿ ಹುಂಡಿಯನ್ನ ಒಡೆಯುವ ವೇಳೆ ಶಬ್ದ ಕೇಳಿ ಗ್ರಾಮಸ್ಥರು ಇಡೀ ದೇವಾಲಯವನ್ನ ಸುತ್ತುವರಿದಿದ್ದಾರೆ. ಯಾಕಂದ್ರೆ, ಈ ದೇವಾಲಯದಲ್ಲಿ ಹಿಂದೊಮ್ಮೆಯೂ ಕಳ್ಳತನವಾಗಿತ್ತು. ಹಾಗಾಗಿ ಊರಿನ ಜನ ಕೂಡ ಅಲರ್ಟ್ ಆಗಿದ್ದರು.

ದೇವಾಲಯದಲ್ಲಿ ಹುಂಡಿ ಒಡೆಯುವ ಶಬ್ದ ಕೇಳಿದ ಕೂಡಲೇ ದೇವಾಲಯವನ್ನ ಸುತ್ತುವರೆದು ಕಳ್ಳನನ್ನ ಹಿಡಿದಿದ್ದಾರೆ. ಎರಡನೇ ಬಾರಿ ದೇವಾಲಯದ ಹುಂಡಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳ ಸ್ಥಳೀಯರ ಕೈಗೆ ಸಿಕ್ಕಿ ಗೂಸಾ ತಿಂದಿದ್ದಾನೆ. ಹುಂಡಿ ಕಳ್ಳನನ್ನ ಹಿಡಿದ ಸ್ಥಳೀಯರು ಅವನನ್ನ ಊರಿನ ಹೆಬ್ಬಾಗಿಲ ಕಂಬಕ್ಕೆ ಕಟ್ಟಿ ಥಳಿಸಿ, ಕಡೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada