ಚಿಕ್ಕಮಗಳೂರು: ಹುಲಿಯ ಉಗುರು, ಕೋರೆ ಹಲ್ಲು, ಚರ್ಮ ಮಾರಲು ಯತ್ನಿಸಿದ ಇಬ್ಬರ ಬಂಧನ

ಹುಲಿಯ ಚರ್ಮ, ಉಗುರನ್ನ ಮನೆಯ ಅಲಂಕಾರಕ್ಕೆ ಬಳಸಿದರೆ ಅದರ ಮೂಳೆ ಸೇರಿದಂತೆ ಕೆಲ ಭಾಗಗಳನ್ನ ಲೈಂಗಿಕ ಶಕ್ತಿ ವೃದ್ಧಿಯ ಔಷಧಿಗೆ ಬಳಸುವ ಒಂದು ದೊಡ್ಡ ಜಾಲವೇ ಸದ್ದಿಲ್ಲದೇ ಕಾರ್ಯಾಚರಣೆ ಮಾಡುತ್ತಿದೆ.

  • ಪ್ರಶಾಂತ್
  • Published On - 19:00 PM, 2 Mar 2021
ಚಿಕ್ಕಮಗಳೂರು: ಹುಲಿಯ ಉಗುರು, ಕೋರೆ ಹಲ್ಲು, ಚರ್ಮ ಮಾರಲು ಯತ್ನಿಸಿದ ಇಬ್ಬರ ಬಂಧನ
ಇಬ್ಬರು ಬಂಧನ

ಚಿಕ್ಕಮಗಳೂರು: ಚೀನಾದಲ್ಲಿ ಹುಲಿಯ ಯಾವುದೇ ಭಾಗ ಕೊಟ್ಟರು ಲಕ್ಷಾಂತರ ರೂಪಾಯಿ ಕೊಡುತ್ತಾರೆ. ಅದಕ್ಕಾಗಿಯೇ ಬದುಕಿದ್ದಾಗ ಹುಲಿಯನ್ನು ಕಂಡರೆ ಕಾಲಿ ಬುದ್ಧಿ ಹೇಳುವ ಜನ ಸತ್ತಾಗ ಲಕ್ಷಾಂತರ ರೂಪಾಯಿಗೆ ಮಾರುವುದಕ್ಕೆ ಮುಂದಾಗುತ್ತಾರೆ. ಹುಲಿಯ ಚರ್ಮ, ಉಗುರನ್ನ ಮನೆಯ ಅಲಂಕಾರಕ್ಕೆ ಬಳಸಿದರೆ ಅದರ ಮೂಳೆ ಸೇರಿದಂತೆ ಕೆಲ ಭಾಗಗಳನ್ನ ಲೈಂಗಿಕ ಶಕ್ತಿ ವೃದ್ಧಿಯ ಔಷಧಿಗೆ ಬಳಸುವ ಒಂದು ದೊಡ್ಡ ಜಾಲವೇ ಸದ್ದಿಲ್ಲದೇ ಕಾರ್ಯಾಚರಣೆ ಮಾಡುತ್ತಿದೆ. ಹುಲಿಯ ಯಾವುದೇ ಭಾಗ ಸಿಕ್ಕರೂ ಈ ತಂಡ ಚುರುಕಾಗುತ್ತದೆ. ಅದಕ್ಕಾಗಿ ಎಷ್ಟು ಬೇಕಾದರೂ ಹಣ ಕೊಡುವವರು ಇದ್ದಾರೆ. ಹೀಗಾಗಿಯೇ ಪ್ರಾಣಿಗಳ ಬೇಟೆಗಾರರ ಸಂಖ್ಯೆಯೂ ಹೆಚ್ಚುತ್ತಿದೆ.

ಇಬ್ಬರು ಬಂಧನ
ಇದೀಗ ಪಶ್ಚಿಮ ಘಟ್ಟಗಳ ಭದ್ರಾ ಹುಲಿ ಅಭಯಾರಣ್ಯದ ಕಾಫಿನಾಡಲ್ಲೂ ಹುಲಿ ಬೇಟೆಗಾರರ ಜಾಡು ಹರಡಿದೆಯಾ ಎಂಬ ಅನುಮಾನ ದಟ್ಟವಾಗಿದೆ. ಏಕೆಂದರೆ 2017ರಲ್ಲಿ ಹುಲಿ, ಜಿಂಕೆಯನ್ನ ಕೊಂದು ಅದರ ಮೂಳೆಗಳನ್ನ ಸಾಗಿಸುವಾಗ ಲಕ್ಷಾಂತರ ಮೌಲ್ಯದ ಮಾಲು ಸಮೇತ ಸಿಕ್ಕಿಬಿದ್ದಿದ್ದರು. ಇದೀಗ ಮತ್ತೆ ಹುಲಿಯ ಉಗುರು, ಹಲ್ಲು, ಕೋರೆ ಹಲ್ಲು, ಚರ್ಮ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಪಿಐ ಸತ್ಯನಾರಾಯಣ ನೇತೃತ್ವದ ಪೊಲೀಸ್ ತಂಡ ಕಾಫಿನಾಡಿನಲ್ಲಿ ಬಂಧಿಸಿದ್ದಾರೆ. ಅಲ್ಲದೇ ಆರೋಪಿಗಳಿಂದ 10 ಲಕ್ಷ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

ಆನೆ ಇದ್ದರು ಸಾವಿರ, ಸತ್ತರು ಸಾವಿರ. ಇದೀಗ ಹುಲಿ ಕೂಡ ಅದೇ ಸಾಲಿಗೆ ಸೇರಿದೆ. ಅದಕ್ಕಿಂತ ಜಾಸ್ತಿ ಎಂದರೆ ತಪ್ಪಿಲ್ಲ. ಯಾಕೆಂದರೆ ವ್ಯಾಘ್ರನ ಕಣ ಕಣದಲ್ಲೂ ಆ ಮಟ್ಟಿಗಿನ ತಾಕತ್ತಿದೆಯಂತೆ. ಅರಣ್ಯದಲ್ಲಿ ಏಕಾಂಗಿಯಾಗಿ ಬದುಕುವ ಹುಲಿರಾಯ ಹೆಣ್ಣು ಹುಲಿ ಸಿಕ್ಕಾಗ ಸಂತಾನೋತ್ಪತ್ತಿಗಾಗಿ ಗಂಟೆಗೆ ಕನಿಷ್ಠ 20-25 ಬಾರಿ ದೈಹಿಕ ಸಂಪರ್ಕ ನಡೆಸುತ್ತದೆ. ಆ ವಿಚಾರದಲ್ಲಿ ಪ್ರಕೃತಿಯ ಸೃಷ್ಟಿಯಲ್ಲಿ ಬೇರೆ ಯಾವ ಪ್ರಾಣಿಗೂ ಆ ಪ್ರಮಾಣದ ತಾಕತ್ತಿಲ್ಲ.

ಹುಲಿಯ ಉಗುರು

ಪೂರ್ವಜರು ಹುಲಿ ಚರ್ಮ, ಹಲ್ಲು, ಉಗುರುಗಳನ್ನ ಮನೆ ಅಲಂಕಾರಕ್ಕೆ ಬಳಸುತ್ತಿದ್ದರು. ಉಗುರನ್ನ ಕೊರಳಿಗೆ ಕಟ್ಟಿಕೊಂಡರೆ ಭಯವಾಗುವುದಿಲ್ಲ ಮತ್ತು ಅದರ ಚರ್ಮದ ಮೇಲೆ ಕೂತರೆ ಒಳ್ಳೆಯದು ಅಂತೆಲ್ಲಾ ಮೂಢನಂಬಿಕೆಯಲ್ಲಿದ್ದರು. ಆದರೆ ಕಲಿಯುಗದ ಜನ ಹುಲಿಯನ್ನ ನೋಡುತ್ತಿರುವ ದೃಷ್ಟಿಯೇ ಬೇರೆ. ಹುಲಿ ಗಂಟೆಗೆ 20-25 ಬಾರಿ ದೈಹಿಕ ಸಂಪರ್ಕ ನಡೆಸುತ್ತದೆ ಎಂದರೆ ಪುರುಷರ ಕಿವಿ ನೆಟ್ಟಗಾಗುತ್ತದೆ. ಆದರೆ ಅದರ ವಸ್ತುಗಳಿಂದ ತಯಾರದ ಔಷಧಿಯಲ್ಲೂ ಅದೇ ಶಕ್ತಿ ಇರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಚೀನಾದಲ್ಲಿ ವಿವಿಧ ಕಾರಣಗಳಿಂದ ಅದನ್ನ ಹೆಚ್ಚಾಗಿ ಬಳಸುವುದರಿಂದ ದುಡ್ಡಿನ ಆಸೆಗಾಗಿ ಹುಲಿಯನ್ನ ಭೇಟೆಯಾಡುವವರ ದೊಡ್ಡ ಜಾಲವೇ ಅಲ್ಲಲ್ಲಿ ಕಾರ್ಯಾಚರಣೆ ಮಾಡುತ್ತಿದೆ.

ಜಿಂಕೆ ಕೊಂಬು

ಸಿಪಿಐ ಸತ್ಯನಾರಾಯಣಇದನ್ನೂ ಓದಿ

ಮೈಸೂರಿನಲ್ಲಿ ಬೋನಿಗೆ ಬಿತ್ತು 8 ವರ್ಷದ ಹೆಣ್ಣು ಹುಲಿ: ಆದರೆ ಜನರಲ್ಲಿ ಹೆಚ್ಚುತ್ತಿದೆ ಆತಂಕ

‘ಓರ್ವ ಮುಸ್ಲಿಂ ಆಗಿ ಸಿದ್ದರಾಮಯ್ಯರನ್ನು ಬೈದರೆ ಜನ ತುಳಿದು ಹಾಕುತ್ತಾರೆ.. ಅವರು ಹುಲಿ, ಮಹಾನ್ ವ್ಯಕ್ತಿ’