AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ರಸ್ತೆಗಳಿಗೆ ಹೆದ್ದಾರಿ ಭಾಗ್ಯ ನೀಡಿದ ಸರ್ಕಾರ; ಆತಂಕಗೊಂಡ ಚಿತ್ರದುರ್ಗ ಜನರು

ರಾಷ್ಟ್ರೀಯ ಹೆದ್ದಾರಿ 4, ರಾಷ್ಟ್ರೀಯ ಹೆದ್ದಾರಿ 13 ಹಾಗೂ ರಾಷ್ಟ್ರೀಯ ಹೆದ್ದಾರಿ 150ಎ ಜಿಲ್ಲೆಯನ್ನು ಹಾದು ಹೋಗಿವೆ. ಅಷ್ಟೇ ಅಲ್ಲದೆ ಅನೇಕ ರಾಜ್ಯ ಹೆದ್ದಾರಿಗಳು ಜಿಲ್ಲೆಯಲ್ಲಿವೆ. ಅದರ ಜೊತೆ ಜೊತೆಗೆ ಈಗ 11 ರಸ್ತೆಗಳು ರಾಜ್ಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶಿಸಿದೆ.

11 ರಸ್ತೆಗಳಿಗೆ ಹೆದ್ದಾರಿ ಭಾಗ್ಯ ನೀಡಿದ ಸರ್ಕಾರ; ಆತಂಕಗೊಂಡ ಚಿತ್ರದುರ್ಗ ಜನರು
ಹೆದ್ದಾರಿ
sandhya thejappa
|

Updated on: Mar 27, 2021 | 3:56 PM

Share

ಚಿತ್ರದುರ್ಗ: ಅನೇಕ ಹೆದ್ದಾರಿಗಳು ಕೋಟೆನಾಡು ಚಿತ್ರದುರ್ಗ ಜಿಲ್ಲೆಯನ್ನು ಹಾದು ಹೋಗಿವೆ. ಹೀಗಾಗಿ ಹೆದ್ದಾರಿಗಳ ಜಿಲ್ಲೆ ಎಂಬ ಹಣೆಪಟ್ಟಿಯನ್ನೂ ಚಿತ್ರದುರ್ಗ ಪಡೆದಿದೆ. ಆದರೆ ಹೆದ್ದಾರಿಗಳು ನಿತ್ಯ ನರಕ ಸೃಷ್ಟಿಸುವ ಹೆಮ್ಮಾರಿಗಳಾಗಿ ಪರಿಣಮಿಸಿವೆ. ಇದೇ ವೇಳೆ ಇನ್ನುಳಿದ 11 ರಸ್ತೆಗಳಿಗೆ ಹೆದ್ದಾರಿ ಭಾಗ್ಯ ಸಿಕ್ಕಿದ್ದು, ಜನರಲ್ಲಿ ಖುಷಿಗಿಂತ ಹೆಚ್ಚಿನ ಆತಂಕ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿ 4, ರಾಷ್ಟ್ರೀಯ ಹೆದ್ದಾರಿ 13 ಹಾಗೂ ರಾಷ್ಟ್ರೀಯ ಹೆದ್ದಾರಿ 150ಎ ಜಿಲ್ಲೆಯನ್ನು ಹಾದು ಹೋಗಿವೆ. ಅಷ್ಟೇ ಅಲ್ಲದೆ ಅನೇಕ ರಾಜ್ಯ ಹೆದ್ದಾರಿಗಳು ಜಿಲ್ಲೆಯಲ್ಲಿವೆ. ಅದರ ಜೊತೆ ಜೊತೆಗೆ ಈಗ 11 ರಸ್ತೆಗಳು ರಾಜ್ಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶಿಸಿದೆ. ಇದು ಜಿಲ್ಲೆಯ ಜನರಲ್ಲಿ ಖುಷಿಗಿಂತ ಹೆಚ್ಚಿನ ಆತಂಕವನ್ನು ಮೂಡಿಸಿದೆ. ಹೀಗಾಗಿ ಜನರ ಪ್ರಾಣ ನುಂಗುತ್ತಿರುವ ಹೆದ್ದಾರಿಗಳಂತೆ ನೂತನ ರಾಜ್ಯ ಹೆದ್ದಾರಿಗಳಾಗದಿರಲಿ. ವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಆಗಲಿ ಎಂಬುದು ಜನರ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ 9601 ಕಿಲೋಮೀಟರ್ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 515 ಕಿಲೋಮೀಟರ್ ಹೆದ್ದಾರಿ, 362 ಕಿಲೋಮೀಟರ್ ಜಿಲ್ಲಾ ಮುಖ್ಯ ರಸ್ತೆ ಭಾಗ್ಯ ಸಿಕ್ಕಿದೆ. ಚಿತ್ರದುರ್ಗ ತಾಲೂಕಿನ ತುರುವನೂರು ರಸ್ತೆ, ಹೊಸದುರ್ಗ ತಾಲೂಕಿನ ಜಾನಕಲ್ಲು ಮಾರ್ಗ, ಚಳ್ಳಕೆರೆ ತಾಲೂಕಿನ ಪರಶುರಾಂಪುರ ಮಾರ್ಗ, ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಮಾರ್ಗ, ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಮಾರ್ಗ, ಹಿರಿಯೂರಿ ತಾಲೂಕಿನ ಆದಿವಾಲಾ ಗ್ರಾಮದ ಮಾರ್ಗವಾಗಿ ಸಾಗುವ ಶಿರಾ ರಸ್ತೆ ಸೇರಿದಂತೆ 11 ರಸ್ತೆಗಳು ರಾಜ್ಯ ಹೆದ್ದಾರಿಗಳಾಗಲಿವೆ. ಈ ಯೋಜನೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಸೇರಿದಂತೆ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದಲೂ ರಸ್ತೆಗಳ ಅಭಿವೃದ್ಧಿ ಯೋಜನೆ ಸಹಕಾರಿ ಆಗಲಿದೆ ಎಂದು ಡಿಸಿ ಕವಿತಾ ಮನ್ನಿಕೇರಿ ಹೇಳಿದರು.

ಜಿಲ್ಲೆ ಸಂಪೂರ್ಣ ಹೆದ್ದಾರಿಗಳ ಜಿಲ್ಲೆಯಾಗುವತ್ತ ದಾಪುಗಾಲಿಟ್ಟಿದೆ. ಆದರೆ ಹೆದ್ದಾರಿಗಳ ನಿರ್ಮಾಣ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನರ ಪ್ರಾಣ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಹೆದ್ದಾರಿಗಳು ಹೆಮ್ಮಾರಿಗಳಾಗುವ ಬದಲು ಅಭಿವೃದ್ಧಿಯ ಮೂಲಕ ದಾರಿಗಳಾಗಲಿ ಎಂಬುದು ದುರ್ಗದ ಜನರ ಆಗ್ರಹವಾಗಿದೆ.

ಇದನ್ನೂ ಓದಿ

ಕಳಪೆ ಗುಣಮಟ್ಟದ ಮನೆ ನಿರ್ಮಾಣವಾಗಿದೆ: ಚಾಮರಾಜನಗರ ಪೌರ ಕಾರ್ಮಿಕರ ಆರೋಪ

ಸಿಡಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ರಾಜ್ಯದ ನಾಚಿಕೆ ಪಡುವ ಸ್ಥಿತಿ ನಿರ್ಮಿಸಿದೆ; ನೈತಿಕ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಿದ ಜೆಡಿಎಸ್