ಚಿತ್ರದುರ್ಗ: ಉತ್ತರಾಧಿಕಾರಿ ನೇಮಕಕ್ಕೆ ಸಮಿತಿ ರಚಿಸಿ: ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ

ನಮ್ಮ ಮಠದ ಅಭಿವೃದ್ದಿಗೆ ಹಣದ ಅವಶ್ಯಕತೆ ಇದೆ. 19 ಕೋಟಿ ರೂ. ತಂದು ಕೊಡಲಿ, ರಶೀದಿ ಪಡೆಯಲಿ. ಭೂ ಕಬಳಿಕೆ ಮಾಡುತ್ತಿರುವವರೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೇಳಿದ್ದಾರೆ.

ಚಿತ್ರದುರ್ಗ: ಉತ್ತರಾಧಿಕಾರಿ ನೇಮಕಕ್ಕೆ ಸಮಿತಿ ರಚಿಸಿ: ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ
ಸಾಧು ಸದ್ಧರ್ಮ ಸಂಘ ಸಭೆ

ಚಿತ್ರದುರ್ಗ: ಜಿಲ್ಲೆಯ ಸಿರಿಗೆರೆ ಗ್ರಾಮದಲ್ಲಿರುವ ತರಳಬಾಳು ಮಠದಲ್ಲಿ ಸಾಧು ಸದ್ಧರ್ಮ ಸಂಘ ಸಭೆ ನಡೆಸಲಾಯಿತು. ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಉತ್ತರಾಧಿಕಾರಿ ನೇಮಕಕ್ಕೆ ಸಮಿತಿ ರಚಿಸಿ ಎಂದು ಸಭೆಗೆ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ಹೇಳಿದ್ದಾರೆ. ದಾವಣಗೆರೆಯಲ್ಲಿ ಕೆಲದಿನಗಳ ಹಿಂದೆ ಶ್ರೀಗಳ ವಿರುದ್ಧ ಭೂಕಬಳಿಕೆ, ಹಣ, ಆಸ್ತಿ ದುರುಪಯೋಗ ಆರೋಪ ಕೇಳಿಬಂದಿತ್ತು. ಹೀಗಾಗಿ ಖುದ್ದಾಗಿ ಲೆಕ್ಕಪತ್ರ ವಿವರ ನೀಡಿದ ಶ್ರೀಗಳು, ದುರುದ್ದೇಶದಿಂದ ನಮ್ಮ ವಿರುದ್ಧ ಆರೋಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ವಿರುದ್ಧ ಆಸ್ತಿ ದುರುಪಯೋಗ ಆರೋಪದ ಹಿನ್ನಲೆ, ಸಿರಿಗೆರೆ ತರಳಬಾಳು ಮಠದಲ್ಲಿ ಶ್ರೀಗಳ ಸಾನಿಧ್ಯದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಠದ ಆಸ್ತಿ ಲೆಕ್ಕವನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಕೊಟ್ಟಿದ್ದಾರೆ. ಸಾಧು ಸದ್ಧರ್ಮ ವೀರಶೈವ ಸಂಘ ಕರೆದಿದ್ದ ಸಭೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದು, ಶ್ರೀಗಳ ವಿರುದ್ಧ ಕೆಲ ವ್ಯಕ್ತಿಗಳ ಆರೋಪದ ಕುರಿತ ಸಭೆಗೆ ವಿರೋಧಿಗಳಿಗೆ ಕೂಡ ಶ್ರೀಗಳು ಆಹ್ವಾನ ನೀಡಿದ್ದರು. ಶ್ರೀಗಳ ವಿರುದ್ಧ ಆರೋಪ ಮಾಡಿ ಸಭೆಗೆ ಗೈರಾದವರ ವಿರುದ್ಧ ಶ್ರೀಗಳು ಗರಂ ಆಗಿದ್ದಾರೆ.

ನಮ್ಮ ಮೇಲೆ ಭೂ ಕಬಳಿಕೆ, 19 ಕೋಟಿ ರೂ. ಹಣ ದುರುಪಯೋಗ ಆರೋಪ ಮಾಡಿದ್ದಾರೆ. ಅವರು ಅದನ್ನು ಸಾಕ್ಷಿ ಸಮೇತ ಸಾಭೀತು ಮಾಡಬೇಕು. ಯಾರು ಯಾವಾಗ 19 ಕೋಟಿ ರೂ. ಕೊಟ್ಟಿದ್ದಾರೆಂದು ದಾಖಲೆ ನೀಡಬೇಕು. ನಮ್ಮ ಮಠದ ಅಭಿವೃದ್ದಿಗೆ ಹಣದ ಅವಶ್ಯಕತೆ ಇದೆ. 19 ಕೋಟಿ ರೂ. ತಂದು ಕೊಡಲಿ, ರಶೀದಿ ಪಡೆಯಲಿ. ಭೂ ಕಬಳಿಕೆ ಮಾಡುತ್ತಿರುವವರೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೇಳಿದ್ದಾರೆ.

ತರಳಬಾಳು ಪರಂಪರೆಯ ಬಹುದೊಡ್ಡ ಆಸ್ತಿ ಶಿಶ್ಯ ಸಂಪತ್ತು. ನಾವು ಅಧಿಕಾರ ಮತ್ತು ಆಸ್ತಿಗಾಗಿ ಸ್ವಾಮೀಜಿ ಆದವರಲ್ಲ. ಧಾರ್ಮಿಕ ಸಾಂಸ್ಕೃತಿಕ ಕೇಂದ್ರವಾಗಿದ್ದ ಮಠದ ಹೆಸರನ್ನು ಕೆಲವರು ರಿಯಲ್ ಎಸ್ಟೇಟ್ ಮಾಡಲು ಬಳಸಿದ್ದರು. ಅಂಥವರನ್ನ ಬೆಂಬಲಿಸದೆ ಕಡಿವಾಣ ಹಾಕಿದ್ದಕ್ಕೆ ಆರೋಪ ಮಾಡುತ್ತಿದ್ದಾರೆ‌. ಹಿರಿಯ ಶ್ರೀಗಳು 1979ರಲ್ಲಿ ನನಗೆ ಅಧಿಕಾರ ವಹಿಸಿದಾಗ ಮಠದ ಆಸ್ತಿ 433930 ರೂ. , ಈಗ 216,25,85,471 ರೂ. ಆಗಿದೆ. ವಿದ್ಯಾಸಂಸ್ಥೆಯ ಆಸ್ತಿ 5586531 ರೂ. ಇದ್ದದ್ದು, ಈಗ 26439531 ರೂ. ಆಗಿದೆ. ಭಕ್ತರು ನೀಡಿದ ಕಾಣಿಕೆ 6402 ರೂ. ಇದ್ದದ್ದು ಇದೀಗ 56733733 ರೂ. ಆಗಿದೆ ಎಂದು ಸಾವಿರಾರು ಭಕ್ತರ ಸಭೆಯಲ್ಲಿ ಮಠದ ಆಸ್ತಿ ಲೆಕ್ಕವನ್ನು ಶ್ರೀಗಳು ನೀಡಿದ್ದಾರೆ.

ಇದನ್ನೂ ಓದಿ:
ಉತ್ತರಾಧಿಕಾರಿ ನೇಮಕಕ್ಕೆ ನಿರ್ಲಕ್ಷ್ಯ ಆರೋಪ: ಸಿರಿಗೆರೆ ಸ್ವಾಮೀಜಿ ವಿರುದ್ಧ ಮುಂದುವರಿದ ವಾಗ್ದಾಳಿ

ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿಯಾಗಿ 8ನೇ ತರಗತಿ ಓದುತ್ತಿರುವ ತೇಜಸ್ ಹೆಸರು ಘೋಷಣೆ

Click on your DTH Provider to Add TV9 Kannada