ಪ್ರೀತಿಸಿ ಓಡಿ ಹೋದ ಜೋಡಿ.. ಯುವಕನ ತಾಯಿಗೆ ಯುವತಿಯ ಪೋಷಕರು ಹೀಗಾ ಮಾಡೋದು? ಛೇ

ಪೋಷಕರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಯುವಕನ ತಾಯಿಯನ್ನು ಅಪಹರಿಸಿ ನೀಡಬಾರದ ಚಿತ್ರಹಿಂಸೆಯನ್ನು ನೀಡಿದ್ದಾರೆ. ಯುವತಿಯ ಪೋಷಕರು ಯುವಕನ ತಾಯಿ ಮೇಲೆ ದೌರ್ಜನ್ಯ ಎಸಗಿದ್ದಾರೆ.

  • TV9 Web Team
  • Published On - 12:58 PM, 8 Apr 2021
ಪ್ರೀತಿಸಿ ಓಡಿ ಹೋದ ಜೋಡಿ.. ಯುವಕನ ತಾಯಿಗೆ ಯುವತಿಯ ಪೋಷಕರು ಹೀಗಾ ಮಾಡೋದು? ಛೇ
ಯುವಕನ ತಾಯಿ ದುರ್ಗಮ್ಮ

ಚಿತ್ರದುರ್ಗ: ಪೋಷಕರ ವಿರೋಧ ಲೆಕ್ಕಿಸದೆ ಮನೆಬಿಟ್ಟು ಹೋದ ಹಿನ್ನೆಲೆಯಲ್ಲಿ ಯುವತಿ ಪೋಷಕರಿಂದ ಯುವಕನ ತಾಯಿ ಮೇಲೆ ದೌರ್ಜನ್ಯ ನಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಠಾಣೆ ವ್ಯಾಪ್ತಿಯ ಬೇಡರ ಶಿವನಕೆರೆ ಎಂಬ ಗ್ರಾಮದಲ್ಲಿ ನಡೆದಿದೆ. ಆದ್ರೆ ಇಲ್ಲಿ ನಡೆದಿರುವ ಘಟನೆ ಅಮಾನವೀಯವಾದದ್ದು. ಮಗಳು ಮನೆ ಬಿಟ್ಟು ಹೋಗಿದ್ದಾಳೆಂದು ಯುವತಿಯ ಪೋಷಕರು ಮಗಳು ಪ್ರೀತಿಸುತ್ತಿದ್ದ ಯುವಕನ ತಾಯಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ. ಪೋಷಕರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಯುವಕನ ತಾಯಿಯನ್ನು ಅಪಹರಿಸಿ ನೀಡಬಾರದ ಚಿತ್ರಹಿಂಸೆಯನ್ನು ನೀಡಿದ್ದಾರೆ. ಮಾಡಬಾರದ ಹೇಯ ಕೃತ್ಯವನ್ನು ಆಕೆಯ ಮೇಲೆ ಎಸಗಿದ್ದಾರೆ. ಯುವತಿಯ ಪೋಷಕರು ಯುವಕನ ತಾಯಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆಕೆಯನ್ನು ಅಪಹರಿಸಿ ಮಾನಭಂಗಕ್ಕೆ ಯತ್ನಿಸಿದ್ದಾರಂತೆ. ಮಹಿಳೆಯ ತಲೆ ಕೂದಲು ಕಿತ್ತು, ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಸ್ವಸ್ಥಗೊಂಡ ಮಹಿಳೆ ದುರ್ಗಮ್ಮ, ಸದ್ಯ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ತಿಪ್ಪೇಸ್ವಾಮಿ ಮತ್ತು ಕುಟುಂಬದ ವಿರುದ್ಧ ಗಾಯಗೊಂಡ ಮಹಿಳೆ ಗಂಭೀರವಾಗಿ ಆರೋಪ ಮಾಡಿದ್ದು 4 ದಿನಗಳ ಹಿಂದೆ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ. ಆಸ್ಪತ್ರೆ ಸೇರಿದ ತಾಯಿ ನೀಚರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಆದಷ್ಟು ಬೇಗ ಈ ಪ್ರಕರಣಕ್ಕೆ ತಿಲಾಂಜಲಿ ಇಡಬೇಕಿದೆ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಯುವತಿಯರಿಗೆ ವಂಚಿಸುತ್ತಿದ್ದ ಆರೋಪಿ ಬಂಧನ

(Lovers Escape Girl Family Torched Boy Family in Chitradurga)