ಚಿತ್ರದುರ್ಗ: ಕೆರೆ ಹೂಳೆತ್ತುವ ನೆಪದಲ್ಲಿ ಮಣ್ಣು ಲೂಟಿ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಕೆರೆಯ ಅಂಗಳದಲ್ಲಿ ಜೆಸಿಬಿಗಳು ತಮ್ಮ ಕೆಲಸ ಮಾಡುತ್ತಿದ್ದು ಟಿಪ್ಪರ್ಗಳು ಲೋಡ್ ಮೇಲೆ ಲೋಡ್ ಮಣ್ಣು ಸಾಗಿಸ್ತಿರುವ ದೃಶ್ಯಗಳು ಚಿತ್ರದುರ್ಗದಲ್ಲಿ ಕಂಡು ಬಂದಿದೆ.
ಮಣ್ಣು ಮಾರಾಟ ದಂಧೆ ಬಗ್ಗೆ ಸ್ಥಳೀಯರು ಕಿಡಿ ಚಿತ್ರದುರ್ಗದ ಹೊಳಲ್ಕೆರೆಯ ಶಿವಗಂಗ ಗ್ರಾಮದ ಕೆರೆಯಲ್ಲಿ ಹೂಳೆತ್ತುವ ಕಾರ್ಯ ಭರದಿಂದ ನಡೀತಿದೆ. ಹಗಲು ರಾತ್ರಿ ಎನ್ನದೇ ಕಾಮಗಾರಿ ನಡೆಸಲಾಗ್ತಿದೆ. ಅಕ್ಕಪಕ್ಕದ ಗ್ರಾಮದ ಜನರು ಮೇಲ್ಭಾಗದ ಫಲವತ್ತಾದ ಮಣ್ಣನ್ನು ಕೊಂಡೊಯ್ದಿದ್ರೆ, ಹೊಸದುರ್ಗ, ಚನ್ನಗಿರಿ ಸೇರಿ ಸುತ್ತಮುತ್ತಲಿನ ತಾಲೂಕುಗಳಿಂದಲೂ ಜನರು ಟಿಪ್ಪರ್ ತೆಗೆದುಕೊಂಡು ಬರೋಕೆ ಆರಂಭಿಸಿದ್ದಾರೆ. ರೈತರ ಹೆಸರಿನಲ್ಲಿ ಮಣ್ಣು ಮಾರಾಟ ದಂಧೆ ನಡೀತಿದ್ದು, ಕೆರೆ ಜೊತೆ ಏರಿಯೂ ಹಾಳಾಗ್ತಿದೆ. ಭಾರಿ ಧೂಳಿನಿಂದಾಗಿ ಸುತ್ತಲಿನ ಪ್ರದೇಶದ ಬೆಳೆಗೂ ಹಾನಿಯಾಗ್ತಿದೆ ಅನ್ನೋದು ಸ್ಥಳೀಯರ ಆರೋಪ.
ಇನ್ನು ಕೆರೆ ಮಣ್ಣು ತುಂಬಿಸಿಕೊಂಡು ಹೋಗುತ್ತಿರುವವರ ಜತೆಗೆ ಸ್ಥಳೀಯರು ನಿತ್ಯ ವಾಗ್ವಾದ ಮಾಡುತ್ತಿದ್ದಾರೆ. ಕೆರೆ ಮಣ್ಣು ಸಾಗಣೆ ವೇಳೆ ಧೂಳಿನಿಂದ ಹೈರಾಣಾಗುತ್ತಿದ್ದೇವೆ. ಮನಸೋ ಇಚ್ಛೆ ಮಣ್ಣು ತೆಗೆದು ಕೆರೆಯೂ ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದ್ರೆ ಮಣ್ಣು ಕೊಂಡೊಯ್ಯೋರು ಮಾತ್ರ ಸ್ಥಳೀಯರ ಆರೋಪ ನಿರಾಕರಿಸ್ತಿದ್ದು, ನಾವು ಮಣ್ಣು ಮಾರಾಟ ಮಾಡ್ತಿಲ್ಲ ಅಂತಿದ್ದಾರೆ.
ಮನಸೋ ಇಚ್ಛೆ ಕೆರೆಯಿಂದ ಮಣ್ಣು ಕೊಡೊಯ್ತಿರೋ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಆದ್ರೂ ಯಾರೊಬ್ಬರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಅನ್ನೋದು ಸ್ಥಳೀಯರ ಆರೋಪ. ಒಟ್ನಲ್ಲಿ ನಿಜಕ್ಕೂ ಇಲ್ಲಿ ನಡೀತಿರೋದು ಹೂಳೆತ್ತೋ ಕೆಲಸವೋ ಅಥವಾ ಮಣ್ಣು ಮಾರಾಟ ದಂಧೆಯೋ ಅನ್ನೋದನ್ನ ಜಿಲ್ಲಾಡಳಿತವೇ ಸ್ಪಷ್ಟಪಡಿಸಬೇಕಿದೆ.
ವರದಿ: ಬಸವರಾಜ ಮುದನೂರ್, ಟಿವಿ9 ಚಿತ್ರದುರ್ಗ
ಇದನ್ನೂ ಓದಿ: ಮಹಿಳೆಯರು ಕೇಸರಿ ದುಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಬನ್ನಿ, ನನ್ನ ಜತೆ ಪ್ರಮಾಣ ವಚನ ಸ್ವೀಕರಿಸಿ: ಭಗವಂತ್ ಮಾನ್ ಕರೆ