ಮನೆ ಬಾಗಿಲಲ್ಲಿ ಪಡಿತರ, ಎಲ್ಲಾ ಆರ್​ಟಿಒ ಸೇವೆ ಕಾಗದ ರಹಿತ..ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ಸಲ್ಲಿಸಿದ ಶಿಫಾರಸುಗಳು ಇಲ್ಲಿವೆ

Administration Reforms: ಎಲ್ಲಾ ಆರ್​ಟಿಒ ಸೇವೆಗಳನ್ನು ಕಾಗದ ರಹಿತ ಮಾಡಬಹುದು. ಬೆಂಗಳೂರು ನಗರದ ಯಾವುದೇ ಆರ್​ಟಿಒ ಕಚೇರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಇರಬೇಕು. ಆರ್​ಟಿಒ ಮತ್ತು ಸಾರಿಗೆ ಕಚೇರಿ ಇ- ಅಫೀಸ್ ಬಳಕೆಯನ್ನು ಮಾಡುವಂತಾಗಬೇಕು: ಸಾರಿಗೆ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳು

ಮನೆ ಬಾಗಿಲಲ್ಲಿ ಪಡಿತರ, ಎಲ್ಲಾ ಆರ್​ಟಿಒ ಸೇವೆ ಕಾಗದ ರಹಿತ..ರಾಜ್ಯದಲ್ಲಿ ಆಡಳಿತ ಸುಧಾರಣೆಗೆ ಸಲ್ಲಿಸಿದ ಶಿಫಾರಸುಗಳು ಇಲ್ಲಿವೆ
ಬಿ.ಎಸ್.ಯಡಿಯೂರಪ್ಪ
Follow us
TV9 Web
| Updated By: guruganesh bhat

Updated on: Jul 03, 2021 | 3:42 PM

ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಮೊದಲ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿ ಸರ್ಕಾರಕ್ಕೆ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಆಯೋಗ ತನ್ನ ಶಿಫಾರಸು ಸಲ್ಲಿಸಿದೆ. ಆಯೋಗ ಶಿಫಾರಸು ಮಾಡಿರುವ ಅಂಶಗಳು ಇಲ್ಲಿವೆ.

ಆಹಾರ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳು ಆಹಾಪಡಿತರ ಕಾರ್ಡ್‌ದಾರರು, ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿತ ಶುಲ್ಕ ಪಾವತಿಸಿ ಮನೆ ಬಾಗಿಲಲ್ಲಿ ಪಡಿತರ ಪಡೆದುಕೊಳ್ಳಲು ಅನುಮತಿ ನೀಡಬಹುದು. ಜನನ-ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿ ಡಾಟಾ ಬೇಸ್‌ನೊಂದಿಗೆ ಸಂಯೋಜಿಸಬೇಕು. ಕಾನೂನು ಮಾಪನಶಾಸ್ತ್ರ ಇಲಾಖೆ‌ ನೀಡುವ ಪರವಾನಗಿ 3ರಿಂದ 5 ವರ್ಷಗಳವರೆಗೆ ಆನ್‌ಲೈನ್ ಮೂಲಕ ಸ್ವಯಂಚಾಲಿತ ನವೀಕರಣ ವ್ಯವಸ್ಥೆ ತರಬಹುದು ಎಂದು ಶಿಫಾರಸು ಮಾಡಲಾಗಿದೆ.

ಸಾರಿಗೆ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳು ಎಲ್ಲಾ ಆರ್​ಟಿಒ ಸೇವೆಗಳನ್ನು ಕಾಗದ ರಹಿತ ಮಾಡಬಹುದು. ಬೆಂಗಳೂರು ನಗರದ ಯಾವುದೇ ಆರ್​ಟಿಒ ಕಚೇರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಇರಬೇಕು. ಆರ್​ಟಿಒ ಮತ್ತು ಸಾರಿಗೆ ಕಚೇರಿ ಇ- ಅಫೀಸ್ ಬಳಕೆಯನ್ನು ಮಾಡುವಂತಾಗಬೇಕು. ವಶಪಡಿಸಿಕೊಂಡ ವಾಹನಗಳಿಗೆ ನಿಗದಿತ ಸಮಯದಲ್ಲಿ ದಂಡ ಪಾವತಿಸದಿದ್ದರೆ ಇ- ಹರಾಜು ಹಾಕಲು ಮೋಟಾರು ವಾಹನ ತಿದ್ದುಪಡಿಗೆ ಪ್ರಸ್ತಾಪಿಸಬಹುದು. ಸರ್ಕಾರಿ ವಾಹನಗಳ ರಿಪೇರಿ ಕಂಪನಿಯ ಅಧಿಕೃತ ದುರಸ್ತಿ ಕೇಂದ್ರಗಳಿಂದ ಮಾತ್ರ ಮಾಡಿದ್ದರೆ ಮೋಟಾರು ವಾಹನ ನಿರೀಕ್ಷಕರು ಪರಿಶೀಲನೆ ಮಾಡುವುದನ್ನು ತೆಗೆದು ಹಾಕಬಹುದು. ಆರ್​ಟಿಒ ಕಚೇರಿಗಳಲ್ಲಿ ಕ್ಯೂ ಆರ್ ಕೋಡ್ ಆಧಾರಿತ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿ ಯಂತ್ರ ಸ್ಥಾಪಿಸಬಹುದು. ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿಯಲ್ಲಿರುವ 2 ಐಟಿ ನಿರ್ದೇಶಕರ ಪೈಕಿ ಒಂದು ಹುದ್ದೆ ರದ್ದು ಪಡಿಸಿ 2 ಐಟಿ ವ್ಯವಸ್ಥೆಗಳ ಉಸ್ತುವಾರಿಗೆ ಒಬ್ಬರನ್ನೇ ನಿರ್ದೇಶಕರನ್ನಾಗಿ ಮಾಡುವುದು ಉತ್ತಮ ಎಮದು ಆಯೋಗ ಶಿಫಾರಸು ಮಾಡಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳು ಸುಮಾರು 800 ಅನ್ ಲೈನ್ ಸೇವೆಗಳಿಗೆ ಅಟಲ್ ಜೀ ಜನಸ್ನೇಹಿ ಕೇಂದ್ರ ಏಕ ಗವಾಕ್ಷಿ ಏಜೆನ್ಸಿ ಆಗಬೇಕು. ಸಕಾಲ ಮತ್ತು ಸಕಾಲವಲ್ಲದ ಸುಮಾರು 800 ಇ- ಸೇವೆಗಳಿಗೆ ಸೇವಾ ಸಿಂಧು ಸಿಂಗಲ್ ಫ್ಲಾಟ್ ಫಾರಂ ಆಗಬೇಕು. ಎಲ್ಲಾ ಇ – ಸೇವೆ ಮೊಬೈಲ್ ಮೂಲಕ ಒದಗಿಸಲು ಕರ್ನಾಟಕ ಮೊಬೈಲ್ ಒನ್ ಅಪ್ ಪುನಾರಾಭಿವೃದ್ದಿ ಮಾಡಬೇಕು. ಹೆಚ್ಚಿನ ಶುಲ್ಕದಲ್ಲಿ ತ್ವರಿತ ಸೇವೆ ಒದಗಿಸಲು ತತ್ಕಾಲ್ ಸೇವಾ ಸೌಲಭ್ಯ ಲಭ್ಯವಾಗಬೇಕು. ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಭೂಮಿ ಆದಾಯ ಮತ್ತು ಜಾತಿಗಳಿಗೆ ಸಂಬಂಧಿಸಿದ ವಂಶವೃಕ್ಷ, ವಾಸ ಸ್ಥಳ ಮುಂತಾದ ಕಂದಾಯ ಸೇವೆಗಳ ಪ್ರಮಾಣ ಪತ್ರಗಳನ್ನ ಒದಗಿಸಲು ಅಧಿಕೃತಗೊಳಿಸಬಹುದು. ಮೋಜಣಿ, ಭೂಮಿ ಮತ್ತು ಡೇಟಾಬೇಸ್ ಕಂದಾಯ ಸೇವೆಗಳ ತಡ ರಹಿತ ವಿತರಣೆಗೆ ಸಂಯೋಜಿಸಬೇಕು. ವಿವಿಧ ಇಲಾಖೆಯ ಎಲ್ಲಾ ಪಿಂಚಣಿ ಯೋಜನೆಗಳನ್ನು ನವೋದಯ ಆ್ಯಪ್​ನಲ್ಲಿ ತರಬಹುದು. ಸೇವಾ ಪೊರ್ಟಲ್ ಗಳು ಅನ್ ಲೈನ್ ವ್ಯಾಲೆಟ್ ಬಳಿಸಿಕೊಂಡು ಅರ್ಜಿ ಶುಲ್ಕ ಸಂಗ್ರಹಿಸಲು ಯುಪಿಐ/ ಕ್ಯೂ ಆರ್ ಕೋಡ್ ಪಾವತಿ ವಿಧಾನ ಹೊಂದಿರಬೇಕು.

ಅನುಪಯುಕ್ತ ಪ್ರಮಾಣ ಪತ್ರಗಳಾದ ಜನಸಂಖ್ಯೆ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಬೆಳೆ ಪ್ರಮಾಣಪತ್ರ ಮತ್ತು ಕೃಷಿಕ ಪ್ರಮಾಣ ಪತ್ರಗಳನ್ನು ತಗೆದುಹಾಕಿ ಸರ್ಕಾರಿ ಅದೇಶ ಹೊರಡಿಸಬೇಕು. ಭೂಸ್ವಾಧೀನ ನಿರ್ವಹಣಾ ಸಾಫ್ಟ್‌ವೇರ್ ವ್ಯವಸ್ಥೆ ಅಭಿವೃದ್ಧಿಪಡಿಸಿ ಕೆಐಎಡಿಬಿ, ಬಿಡಿಎ, ಎನ್ ಹೆಚ್ ಎಐ ಸೇರಿದಂತೆ ಭೂಸ್ವಾಧೀನ ಪಡಿಸಿಕೊಳ್ಳುವ ಸಂಸ್ಥೆಗಳು ಬಳಸುವುದನ್ನು ಕಡ್ಡಾಯಗೊಳಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಅಡಮಾನ ನೊಂದಾವಣೆ, ಭೂಮಿ ಅಥವಾ ನಿವೇಶನಗಳ ಅಡಮಾನ ಬಿಡುಗಡೆ, ಎನ್ ಕಂಬ್ರೆನ್ಸ್ ಅನ್ ಲೈನ್ ಗೊಳಿಸಬೇಕು. ಕಾವೇರಿ -2 ಮತ್ತು ಆನ್ ಲೈನ್ ಸೇವೆಯನ್ನು ಅಭಿವೃದ್ಧಿಪಡಿಸಬೇಕು.

ಇದನ್ನೂ ಓದಿ: 

Explained: ಕೊವಿಡ್ ಆ್ಯಂಟಿಬಾಡಿ ಟೆಸ್ಟ್ ಎಂದರೇನು? ಆ್ಯಂಟಿಬಾಡಿ ಫಲಿತಾಂಶ ಪಾಸಿಟಿವ್, ನೆಗೆಟಿವ್ ಎಂದರೇನು? ಇಲ್ಲಿದೆ ವಿವರ

ಇದು ಕೊವಿಡ್​ 19 ಸಾಂಕ್ರಾಮಿಕದ ಅತ್ಯಂತ ಅಪಾಯಕಾರಿ ಹಂತ; ಡೆಲ್ಟಾ ವೈರಾಣು ಬಗ್ಗೆ ಡಬ್ಲ್ಯೂಎಚ್​ಒ ತೀವ್ರ ಆತಂಕ

(CM Yediyurappa received Many recommendations by the Administrative Reform Commission for administrative reform in the Karnataka Here’s the details)

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್