1 ಲಕ್ಷ ಜನ, 1 ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್​ನಿಂದ ಬೆಂಗಳೂರಿನಲ್ಲಿ ಫ್ರೀಡಂ ಜಾಥಾ ಶುರು

1 ಲಕ್ಷ ಜನ, 1 ಲಕ್ಷ ರಾಷ್ಟ್ರ ಧ್ವಜಗಳೊಂದಿಗೆ ಕಾಂಗ್ರೆಸ್ ಬೃಹತ್ ನಡಿಗೆ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಜಾಥಾದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

1 ಲಕ್ಷ ಜನ, 1 ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್​ನಿಂದ ಬೆಂಗಳೂರಿನಲ್ಲಿ ಫ್ರೀಡಂ ಜಾಥಾ ಶುರು
ಬೆಂಗಳೂರಿನಲ್ಲಿ ಕಾಂಗ್ರೆಸ್ ಜಾಥಾ
TV9kannada Web Team

| Edited By: Sushma Chakre

Aug 15, 2022 | 3:44 PM

ಬೆಂಗಳೂರು: ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಪ್ರಯುಕ್ತ ಕರ್ನಾಟಕ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಜಾಥಾ (Freedom March) ನೇರ ಪ್ರಸಾರವನ್ನು ಕಾಂಗ್ರೆಸ್ (Congress) ಪಕ್ಷ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

1 ಲಕ್ಷ ಜನ, 1 ಲಕ್ಷ ರಾಷ್ಟ್ರ ಧ್ವಜಗಳೊಂದಿಗೆ ಕಾಂಗ್ರೆಸ್ ಬೃಹತ್ ನಡಿಗೆ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಜಾಥಾದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ರಾಷ್ಟ್ರ ಧ್ವಜ ಹಿಡಿದು ಡಿಕೆ ಶಿವಕುಮಾರ್ ಮುಂದೆ ಸಾಗಲಿದ್ದಾರೆ. ಈ ಜಾಥಾ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಲಿದ್ದು, ನಂತರ ಕೆ.ಆರ್ ವೃತ್ತ, ಟೌನ್ ಹಾಲ್, ಮಿನರ್ವ ವೃತ್ತದ ಮೂಲಕ ಸಾಗಿ ನ್ಯಾಷನಲ್ ಕಾಲೇಜಿನಲ್ಲಿ ಸಮಾಪ್ತಿಗೊಳ್ಳಲಿದೆ.

ಇದನ್ನೂ ಓದಿ: Tragedy: ಬೆಂಗಳೂರಿನಲ್ಲಿ ಮನೆ ಮೇಲೆ ರಾಷ್ಟ್ರಧ್ವಜ ಕಟ್ಟಲು ಹೋಗಿ ಪ್ರಾಣ ಕಳೆದುಕೊಂಡ ಸುಳ್ಯದ ಯುವ ಟೆಕ್ಕಿ

ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ ಜನ ಸಾಗರವೇ ಹರಿದು ಬರುತ್ತಿದೆ. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಸಂಭ್ರಮ ಶುರುವಾಗಿದ್ದು, ನಮ್ಮ ಐತಿಹಾಸಿಕ ಸ್ವಾತಂತ್ರ್ಯ ನಡಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ಕಾಂಗ್ರೆಸ್ ಪಕ್ಷ ಕೂ ಮಾಡಿದೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada