Kannada News » Karnataka » Corona positive for jem high school teachers in chikmagalur kalasa
ಒಂದೇ ಶಾಲೆಯ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್: ಜ.8ರವರೆಗೆ ಶಾಲೆ ಬಂದ್
ಶಾಲೆಯ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವ ಕಾರಣ ಜ.8ರವರೆಗೆ ಶಾಲೆಯನ್ನು ಮುಚ್ಚುವುದಾಗಿ ಚಿಕ್ಕಮಗಳೂರು ಕಳಸ ತಾಲೂಕಿನ JEM ಪ್ರೌಢಶಾಲೆಯ ಆಡಳಿತ ಮಂಡಳಿ ನಿರ್ಧರಿಸಿದೆ.
JEM ಪ್ರೌಢಶಾಲೆ ಕಳಸ
shruti hegde | Edited By: Ghanashyam D M | ಡಿ.ಎಂ.ಘನಶ್ಯಾಮ
Jan 04, 2021 | 3:05 PM
ಚಿಕ್ಕಮಗಳೂರು: ಜಿಲ್ಲೆಯ ಕಳಸ ಪಟ್ಟಣದ JEM ಪ್ರೌಢಶಾಲೆಯನ್ನು ಜನವರಿ 8ರವರೆಗೆ ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಶಾಲೆಯ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವ ಕಾರಣ ಶಾಲೆಯನ್ನು ಬಂದ್ ಮಾಡಲಾಗಿದೆ.
ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದ JEM ಶಾಲೆಯ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಒಂದೇ ಶಾಲೆಯಲ್ಲಿ ಎರಡು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿದೆ.