ಬೆಂಗಳೂರಿನಲ್ಲಿ ಅಬ್ಬರಿಸುತ್ತಿದೆ ಕೊರೊನಾ ಎರಡನೇ ಅಲೆ.. ಏಕೆ ಸೋಂಕಿತರ ಸಂಖ್ಯೆ ಏರುತ್ತಿದೆ ಗೊತ್ತಾ, ಇಲ್ಲಿದೆ ಉತ್ತರ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿದೆ. ಸಾವಿನ ಸಂಖ್ಯೆ ಕೂಡಾ ಏರಿಕೆಯಾಗ್ತಿದೆ. ಬಟ್, ಇದಕ್ಕೆ ಕಾರಣ ಏನು? ಯಾಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ ಅಂತಾ ಹುಡುಕ್ತಾ ಹೋದ್ರೆ, ಇದಕ್ಕೆ ಸಿಕ್ಕ ಉತ್ತರ ಇಲ್ಲಿದೆ.

ಬೆಂಗಳೂರಿನಲ್ಲಿ ಅಬ್ಬರಿಸುತ್ತಿದೆ ಕೊರೊನಾ ಎರಡನೇ ಅಲೆ.. ಏಕೆ ಸೋಂಕಿತರ ಸಂಖ್ಯೆ ಏರುತ್ತಿದೆ ಗೊತ್ತಾ, ಇಲ್ಲಿದೆ ಉತ್ತರ
ಕೊರೊನಾ ಸೋಂಕು
Follow us
ಆಯೇಷಾ ಬಾನು
|

Updated on: Mar 19, 2021 | 8:07 AM

ಬೆಂಗಳೂರು: ಭಯ.. ಭಯ.. ಹೌದು ಮತ್ತೆ ಭಯದ ವಾತಾವರಣ ನಿರ್ಮಾಣ ಆಗಿದೆ. ಕೊರೊನಾ ವೈರಸ್‌ನ ಎರಡನೇ ಅಲೆ ಶುರುವಾಗಿದ್ದು ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಅದ್ರಲ್ಲೂ ಮಾರ್ಚ್ ತಿಂಗಳ ಆರಂಭದಿಂದ ಶುರುವಾದ ಕೊರೊನಾ ಸೋಂಕಿತರ ಸಂಖ್ಯೆ 300 ರಿಂದ ಇವತ್ತು ಸಾವಿರ ಗಡಿ ತಲುಪುತ್ತಿದೆ. ಇದೇ ಕಾರಣಕ್ಕೆ ಮೊನ್ನೆ ಪ್ರಧಾನಿ ಮೋದಿ ಥ್ರೀ ಸೂತ್ರಗಳನ್ನ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಅಂದ್ರೆ ಟ್ರೇಸಿಂಗ್, ಟ್ರ್ಯಾಕಿಂಗ್, ಟ್ರಿಟ್ಮೆಂಟ್​ಗೆ ಒತ್ತು ನೀಡುವಂತೆ ಹೇಳಿದ್ದಾರೆ. ಆದ್ರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಲು ಕಾರಣವೇನು? ಅಂತಾ ನೋಡೋದ್ರೆ ಪ್ರಧಾನಿ ಹೇಳಿದ ಅದೊಂದು ಸೂತ್ರವನ್ನ ನಿರ್ವಹಣೆ ಮಾಡಿಲ್ಲ. ಸೋಂಕಿತರ ಟ್ರೇಸಿಂಗ್, ಪ್ರೈಮರಿ ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನ ಟ್ರ್ಯಾಕಿಂಗ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಎಷ್ಟು ಕೇಸ್ ಬಂದಿವೆ? ಕೇರಳ‌ ಮತ್ತು ಮಹಾರಾಷ್ಟ್ರದಿಂದ‌ ಬಂದವರಿಂದಲೇ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತಿದೆ. ಮಾರ್ಚ್ ಆರಂಭದಲ್ಲಿ 100 ರ ಒಳಗಿದ್ದ ಸೋಂಕಿತರ ಸಂಖ್ಯೆ ಈಗ ನಿತ್ಯ 1 ಸಾವಿರ ಸೋಂಕಿತರು ಪತ್ತೆಯಾಗುವಂತಾಗಿದೆ. ಕಳೆದ 14 ದಿನದಲ್ಲಿ 8122 ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 40 ರಿಂದ 49 ವಯಸ್ಸಿನವರೇ ಹೆಚ್ಚು. ಕಳೆದ 14 ದಿನದಲ್ಲಿ 1108 ಜನ 40 ರಿಂದ 49 ವಯಸ್ಸಿನ ಪುರುಷರಿಗೆ ಸೋಂಕು ತಗುಲಿದೆ. 651 ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಹಾಗೂ 14 ದಿನದಲ್ಲಿ 45 ಜನ ಸೋಂಕಿಗೆ ಬಲಿಯಾಗಿದ್ದಾರೆ. 60 ರಿಂದ 70 ವಯಸ್ಸಿನ ಜನರೇ ಹೆಚ್ಚಾಗಿ ಸಾವು. ಮುಂದಿನ ದಿನಗಳಲ್ಲಿ ನಿತ್ಯ ಒಂದು ಸಾವಿರ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ.

ಟ್ರೇಸಿಂಗ್, ಟ್ರ್ಯಾಕಿಂಗ್ ಮಾಡದಿದ್ದಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಕೊರೊನಾ ಸೋಂಕಿತರ ಸಂಖ್ಯೆ 100ಇತ್ತು, ಬಟ್, ಕಳೆದ ಒಂದು ತಿಂಗಳಿಂದ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಇದಕ್ಕೆ ಕಾರಣ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾದಾಗ ಟೆಸ್ಟಿಂಗ್ ರಿಪೋರ್ಟ್ ಕಡ್ಡಾಯ ಅಂದಿದ್ರು. ಬಟ್, ಕಡ್ಡಾಯ ಇದ್ರೂ ಬೆಂಗಳೂರಿನ ಗಡಿಯೊಳಗೆ ನುಗ್ಗಿದ್ದಾರೆ. ಅವರನ್ನ ಟ್ರೇಸ್ ಮಾಡದೆ ಇರೋ ಕಾರಣ ಮಹರಾಷ್ಟ್ರ ಹಾಗೂ ಕೇರಳದಿಂದ ಬಂದವರಿಂದ ಸೋಂಕು ವ್ಯಾಪಕವಾಗಿ ಹರಡಿದೆ. ಅದ್ರಲ್ಲೂ ಸೋಂಕು ಕಾಣಿಸಿಕೊಂಡವರ ಜೊತೆ ಪ್ರೈಮರಿ ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ ಜನ್ರನ್ನ ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದಾರಂತೆ. ಪ್ರತಿ ಸೋಂಕಿತನ ಜೊತೆ 10 ರಿಂದ 15 ಜನರನ್ನ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳು ಅಂತಾ ಗುರುತಿಸಬೇಕು. ಬಟ್, ಇದನ್ನ ಮಾಡದೇ ಸೋಂಕಿತರ ಜೊತೆಗಿರುವ ಜನರನ್ನ ಸಾರ್ವಜನಿಕ ವಲಯದಲ್ಲಿ ಬಿಟ್ಟಿದ್ದಾರೆ. ಇದರಿಂದ ಸೋಂಕು ಸ್ಪ್ರೇಡ್ ಆಗಿದೆ.

ಕೊರೊನಾ ಸೋಂಕಿತರ ಏರಿಕೆ ತಪ್ಪಿಸೋಕ್ಕೆ ಅಂತಾನೇ ಬಿಬಿಎಂಪಿ ಈಗ ಟೆಸ್ಟ್ ಮಾಡಿಸುವವರನ್ನ ಪತ್ತೆ ಹಚ್ಚಲು ಮೊಬೈಲ್ ನಂಬರ್, ಅಡ್ರೆಸ್ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರಂತೆ. ಹಿಂದೆ ಓರ್ವ ಸೋಂಕಿತನ ಜೊತೆ 10 ಜನರನ್ನ ಪ್ರೈಮರಿ ಸೆಕೆಂಡರಿ ಕಾಂಟ್ಯಾಕ್ಟ್ ಅಂತಾ ಗುರುತಿಸಲಾಗ್ತಿತ್ತು. ಈಗ 15 ರಿಂದ 20 ಜನರನ್ನ ಗುರುತಿಸಲಾಗುತ್ತೆ ಅಂತಾ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಅಗಲು ಬಿಬಿಎಂಪಿನೇ ಕಾರಣ ಅಂತಾ ಕೆಲ ತಜ್ಞರು ಆರೋಪ ಮಾಡ್ತಿದ್ದು. ಬಿಬಿಎಂಪಿ ಸರ್ವ ಪ್ರಯತ್ನಗಳನ್ನ ಮಾಡಿದ್ರೂ ಸಾರ್ವಜನಿಕರು ಅದನ್ನ ಹಾಳು ಮಾಡ್ತಿದ್ದಾರೆ. ಕಾರಣ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಓಡಾಡ್ತಿದ್ದು, ಟೆಸ್ಟಿಂಗ್ ಮಾಡಿಸಿಕೊಂಡು ನಾಪತ್ತೆ ಆಗ್ತಿದ್ದಾರೆ.

ಕೊರೊನಾ ತಡೆಯೋಕೆ ಪ್ಲ್ಯಾನ್ ಏನು? ಕೊರೊನಾ ತಡೆಗಟ್ಟಲು ಬಿಬಿಎಂಪಿ ಬಳಿ ಒಂದೇ ಅಸ್ತ್ರ ಇರೋದು ಹೆಚ್ಚು ಹೆಚ್ಚು ಟೆಸ್ಟಿಂಗ್, ಟ್ರೇಸಿಂಗ್, ಟ್ರಿಟ್ಮೆಂಟ್ ಮಾಡೋದು. ಸದ್ಯ ಈಗ ನಿತ್ಯ 50 ಸಾವಿರ ಕೊರೊನಾ ಟೆಸ್ಟ್ ಮಾಡುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ. ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್ ಹೀಗೆ ಎಲ್ಲಾ ಭಾಗದಲ್ಲಿ ಟೆಸ್ಟಿಂಗ್ ಯೂನಿಟ್ ಸ್ಥಾಪನೆ. ಮಾಸ್ಕ್ ಧರಿಸೋದು ಕಡ್ಡಾಯ. ಮಾಸ್ಕ್ ಹಾಕದವರ ವಿರುದ್ಧ ದಂಡ ಪ್ರಯೋಗ. ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ದಂಡ. ಈ ರೀತಿ ದಂಡ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ. ಸ್ಲಂಗಳಲ್ಲಿ ಹೆಚ್ಚಿನ ಟೆಸ್ಟ್ ಮಾಡಲು, ಹಾಸ್ಟೆಲ್ ಕಾಲೇಜುಗಳಲ್ಲಿ ಟೆಸ್ಟಿಂಗ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ.

ವ್ಯಾಕ್ಸಿನ್​ಗೆ ಬಿಬಿಎಂಪಿ ಪ್ಲ್ಯಾನ್ ಏನು? ಹೆಲ್ತ್ ವಾರಿಯರ್ಸ್​ಗೆ, ಫ್ರೇಂಟ್ ಲೈನ್ ವಾರಿಯರ್ಸ್​ಗೆ ವ್ಯಾಕ್ಸಿನ್ ನೀಡಿರುವ ಬಿಬಿಎಂಪಿ ಈಗ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದೆ. ಈಗಾಗಲೇ ಕೋವಿನ್ ಪ್ರೊಟೆಲ್​ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡು, ಹಾಗೂ ನೇರವಾಗಿ ಲಸಿಕೆ ಹಾಕಿಸಿಕೊಳ್ಳಲು ಜನ ಮುಂದಾಗಿದ್ದಾರೆ. ಈಗ ಮನೆ ಮನೆ ಸರ್ವೆ ನಡೆಸಿದ್ದು 60 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ಲಸಿಕೆ ನೀಡುವ ಪ್ಲಾನ್ ಮಾಡಲಾಗಿದೆ.

ಎಲ್ಲಿ ಹೆಚ್ಚು ಸೋಂಕು ಪತ್ತೆ ಬೆಂಗಳೂರಿನ ಹತ್ತು ವಾರ್ಡ್​ಗಳಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗಿದೆ. ಬೆಳ್ಳಂದೂರು, ಬಿಟಿಎಂ ಲೇಔಟ್, ಹಗದೂರು, ಶಾಂತಲಾ ನಗರ, ಕೋಣನಕುಂಟೆ, ಬಾಣಸವಾಡಿ, ಹೊಸಕೆರೆ ಹಳ್ಳಿ, ದೊಡ್ಡಾನೆಕುಂದಿ, ನ್ಯೂ ತಿಪ್ಪಸಂದ್ರ, ಗೊಟ್ಟಿಗೇರೆ ಭಾಗದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಇಡೀ ದೇಶದಲ್ಲೇ No.1 ಕೊರೊನಾ ಹಾಟ್​ಸ್ಪಾಟ್: ಸಿಲಿಕಾನ್ ಸಿಟಿ ಬೆಂಗಳೂರು!

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್