ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಕೊರೊನಾ.. ಇದಕ್ಕೆ ಸರ್ಕಾರವೇ ಕಾರಣನಾ?

ಲಾಕ್​ಡೌನ್ ಬೇಡ್ವಾ ಹಾಗಿದ್ರೆ ಕೊರೊನಾ ಭಯ ಇರ್ಲಿ ಅಂತಾ ಸರ್ಕಾರ ಎಚ್ಚರಿಕೆ ಕೊಟ್ಟು, ಕೆಲ ಗೈಡ್‌ಲೈನ್ಸ್ ರಿಲೀಸ್ ಮಾಡಿ ಸೈಲೆಂಟ್ ಆಗಿದೆ. ಆದ್ರೆ ದಿನೇ ದಿನೇ ಸೋಂಕಿತರ ಸಂಖ್ಯೆ ಸ್ಪೋಟಗೊಳ್ಳುತ್ತಿದ್ದು, ಬಿಬಿಎಂಪಿ ಅಸಹಾಯಕವಾಗಿದೆ. ಸರ್ಕಾರ ತಲೆಮೇಲೆ ಕೈ ಹೊತ್ತು ಯೋಚಿಸುವ ಸ್ಥಿತಿ ನಿರ್ಮಾಣ ಆಗಿದೆ.

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ ಕೊರೊನಾ.. ಇದಕ್ಕೆ ಸರ್ಕಾರವೇ ಕಾರಣನಾ?
ಪ್ರಾತಿನಿಧಿಕ ಚಿತ್ರ
Follow us
|

Updated on: Apr 02, 2021 | 9:00 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ, BBMP ಫೇಲ್ ಆಗಿದೆ. ಕಳೆದ 5 ದಿನಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳ ಕಂಡಿವೆ.

ಮಾರ್ಚ್ 28ರಂದು ಬೆಂಗಳೂರಿನಲ್ಲಿ 2,004 ಜನರಿಗೆ ಸೋಂಕು ತಗುಲಿತ್ತು. ಮಾ.29ರಂದು ಬೆಂಗಳೂರಿನಲ್ಲಿ 1,356 ಜನರಿಗೆ ಸೋಂಕು ಮಾ.30ರಂದು ಬೆಂಗಳೂರಿನಲ್ಲಿ 1,984 ಜನರಿಗೆ ಸೋಂಕು ಮಾ.31ರಂದು ಬೆಂಗಳೂರಿನಲ್ಲಿ 2,928 ಜನರಿಗೆ ಸೋಂಕು ಬೆಂಗಳೂರಲ್ಲಿ ನಿನ್ನೆ(ಏಪ್ರಿಲ್.01) ಒಂದೇ ದಿನ 2,906 ಜನರಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ತಡೆಯುವುದಕ್ಕೆ ಬಿಬಿಎಂಪಿ ಬಳಿ ಯಾವುದೇ ಪ್ಲ್ಯಾನ್ ಇಲ್ಲದಂತೆ ಕಂಡುಬರುತ್ತಿದೆ. ಹೀಗಾಗಿ BBMP ಸರ್ಕಾರದತ್ತ ಮುಖ ಮಾಡಿದೆ. ಈ ಹಿಂದೆ ಮಾರ್ಕೆಟ್, ಥಿಯೇಟರ್‌ಗಳು, ಪಾರ್ಕ್‌ಗಳನ್ನು ಕ್ಲೋಸ್ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ರಾಜ್ಯ ಸರ್ಕಾರದಿಂದ BBMPಛೀಮಾರಿ ಹಾಕಿಸಿಕೊಂಡಿದೆ. ಈಗ ಸರ್ಕಾರವೇ ತೀರ್ಮಾನ ಮಾಡಲಿ ಎಂದು ಸೈಲೆಂಟ್ ಆಗಿದೆ. ಕೇವಲ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್ ಮಾಡುತ್ತಿದೆ.

ಮಕ್ಕಳಿಗೆ ಕೊರೊನಾ 2ನೇ ಅಲೆ ಅಟ್ಯಾಕ್ ಇನ್ನು ಬೆಂಗಳೂರಿನಲ್ಲಿ ಮಕ್ಕಳಿಗೆ ಕೊರೊನಾ 2ನೇ ಅಲೆ ಅಟ್ಯಾಕ್ ಮಾಡಿದೆ. 20 ವರ್ಷದೊಳಗಿನ ಮಕ್ಕಳಲ್ಲಿಯೇ ಹೆಚ್ಚು ಕೊರೊನಾ ಪತ್ತೆಯಾಗಿದೆ. ಮಾ.28ರಂದು 20 ವರ್ಷದೊಳಗಿನ 251 ಮಕ್ಕಳಿಗೆ ಸೋಂಕು ಮಾ.29ರಂದು 231, ಮಾ.30ರಂದು 50, ಮಾ.31-216 ಏ.1ರಂದು 20 ವರ್ಷದೊಳಗಿನ 373 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.

ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳಕ್ಕೆ ಸರ್ಕಾರವೇ ಕಾರಣ? ಕೊರೊನಾ ತಡೆಗೆ ಮಾರ್ಚ್ 19ರಂದು ತಜ್ಞರು ವರದಿ ನೀಡಿದ್ದರೂ ರಾಜ್ಯ ಸರ್ಕಾರ ಕ್ಯಾರೆ ಎನ್ನದ ಸುಮ್ಮನಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯ ಸರ್ಕಾರಕ್ಕೆ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದರು. ಆದ್ರೆ ಸರ್ಕಾರ ಈ ಸಲಹೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದೆ ನಿರ್ಲಕ್ಷ್ಯವಹಿಸಿದೆ.

ತಜ್ಞರು ನೀಡಿದ ಸಲಹೆಗಳೇನು? ಅಪಾರ್ಟ್‌ಮೆಂಟ್‌ನ ಪಾರ್ಟಿ ಹಾಲ್, ರೀಡಿಂಗ್ ರೂಮ್, ಜಿಮ್, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಎಲ್ಲ ಜಿಮ್‌ಗಳು ಸೇರಿದಂತೆ ಜನ ಸೇರುವ ಪ್ರದೇಶ ಕ್ಲೋಸ್ ಮಾಡುವಂತೆ ಸಲಹೆ ನೀಡಿತ್ತು. ಥಿಯೇಟರ್‌ನಲ್ಲಿ ಶೇ.50ರಷ್ಟು ಭರ್ತಿಗೆ ಸೂಚಿಸಲಾಗಿತ್ತು. ಸಾರ್ವಜನಿಕ ಕಾರ್ಯಕ್ರಮ ನಿರ್ಬಂಧಿಸಬೇಕೆಂದು ತಿಳಿಸಿತ್ತು. ಕಾರ್ಯಕ್ರಮಗಳಿಗೆ ಇಂತಿಷ್ಟೇ ಜನರಿರಬೇಕೆಂದು ಸಲಹೆ ನೀಡಿತ್ತು. ರಾಜಕೀಯ ಕಾರ್ಯಕ್ರಮ, ಱಲಿಗೆ ಕಟ್ಟುನಿಟ್ಟಿನ ಕ್ರಮ. ಬಸ್‌ನಲ್ಲಿ ಹೆಚ್ಚುವರಿ ಪ್ರಯಾಣಿಕರ ನಿರ್ಬಂಧ ಹಾಗೂ ಮಾಸ್ಕ್ ಧರಿಸದವರಿಗೆ ಅವಕಾಶ ನೀಡದಂತೆ ಸೂಚಿಸಿದ್ದರು. ಆದರೆ ಸರ್ಕಾರ ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿಲ್ಲ. ಜಾರಿ ಮಾಡದೆ ರಾಜ್ಯ ಸರ್ಕಾರ, ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ.

ರಾಜ್ಯದಲ್ಲಿ 10 ಲಕ್ಷಕ್ಕೆ ಏರಿದ ಸೋಂಕಿತರ ಸಂಖ್ಯೆ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಕೊರೊನಾ ನಿನ್ನೆ ಕೂಡಾ ಆರ್ಭಟಿಸಿತ್ತು. ರಾಜ್ಯದಲ್ಲಿ ಏಪ್ರಿಲ್ 01ರಂದು ಬರೋಬ್ಬರಿ 4,234 ಜನರಿಗೆ ಸೋಂಕು ವಕ್ಕರಿಸಿತ್ತು. ಕಳೆದ ಒಂದು ವಾರದಿಂದ ಸೋಂಕು ಶರವೇಗ ಪಡೆದಿರೋ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಏಪ್ರಿಲ್​ 1ಕ್ಕೆ ಸೋಂಕಿತರ ಸಂಖ್ಯೆ ಸೇರಿದಂತೆ ರಾಜ್ಯದಲ್ಲಿ ಈವರೆಗೆ 10 ಲಕ್ಷದ 1,238ಜನ ಸೋಂಕಿತರಾಗಿದ್ದಾರೆ. ಅದ್ರಲ್ಲೂ ಬೆಂಗಳೂರಿನಲ್ಲೇ ಏಪ್ರಿಲ್​ 1ರಂದು ಒಂದೇ ದಿನ 2906 ಜನರ ಮೇಲೆ ಮಹಾಮಾರಿ ದಾಳಿ ಮಾಡಿದೆ. V-4: ಹೀಗೆ ದಿನೇ ದಿನೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಸರ್ಕಾರ ಕೊರೊನಾ ವೈರಸ್‌ಗೆ ಬ್ರೇಕ್ ಹಾಕಲು ಏನ್ ಮಾಡ್ಬೇಕು ಎಂಬ ಚಿಂತೆಗೆ ಜಾರಿದೆ. ಅದ್ರಲ್ಲೂ ಮತ್ತೊಮ್ಮೆ ಲಾಕ್ ಡೌನ್ ಮಾಡಿ ಬಿಡೋಣ ಎಂಬ ಲೆಕ್ಕಾಚಾರಗಳು‌ ಶುರುವಾಗಿದೆ. ಆದ್ರೆ ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾಗುವ ಕಾರಣ ಸರ್ಕಾರ ತಲೆ ಮೇಲೆ ಕೈ ಹೊತ್ತು ಅಸಹಾಯಕತೆ ತೋರಿಸ್ತಿದೆ.

ಲಾಕ್‌ಡೌನ್ ಬದಲು ಪರ್ಯಾಯ ಮಾರ್ಗಗಳೇ ಇಲ್ವಾ? ಬೆಂಗಳೂರಿನಲ್ಲಿ ‌ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದು ಎರಡನೇ ಅಲೆ ಶುರುವಾಗಿದೆ. ವ್ಯಾಕ್ಸಿನ್ ಕೊಟ್ರೂ ನೋ ಯೂಸ್, ಜನ್ರಿಗೆ ಎಷ್ಟೇ ತಿಳುವಳಿಕೆ ಹೇಳಿದ್ರು ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಪರಿಣಾಮ ನೂರು ಇನ್ನೂರಷ್ತು ಇದ್ದ ಸೋಂಕಿತರ ಸಂಖ್ಯೆ ಮೂರು ಸಾವಿರ ಬಂದು ತಲುಪಿದೆ. ಇದು ಹೀಗೆ ಮುಂದುವರೆದ್ರೆ ಮತ್ತೆ ಐದು ಸಾವಿರದತ್ತ ಸಾಗುವ ಲಕ್ಷಣಗಳು ಇವೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಅದನ್ನು ಪಾಲಿಸುವಂತೆ ಮಾಡಬೇಕು. ಹಾಗೂ ಜನ ಕೊರೊನಾ ಬಗ್ಗೆ ನಿರ್ಲಕ್ಷ್ಯವಹಿಸದೆ ಸರ್ಕಾರದ ನಿಯಮಗಳನ್ನು ಚಾಚುತಪ್ಪದೆ ನಿರ್ವಹಿಸಬೇಕು.

ಇದನ್ನೂ ಓದಿ: ಕೊರೊನಾ ಹೆಚ್ಚಳ ಹಿನ್ನೆಲೆ, ಬೆಂಗಳೂರಿನಲ್ಲಿ 6ರಿಂದ 9ನೇ ತರಗತಿಗಳು ಸ್ಥಗಿತ; ಸಚಿವ ಸುರೇಶ್ ಕುಮಾರ್

(Coronavirus case increasing day by day in bangalore and BBMP govt failed to control)

ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ