ಮೊದಲಿಗೆ ಆರೋಗ್ಯ ಇಲಾಖೆ ಉಪ ಆಯುಕ್ತೆ ರಜನಿ ಮಾತನಾಡಿ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯ ಬೇಕು ಎಂಬ ಆಸೆ, ನಿರೀಕ್ಷೆ ಇದೆ. ನಿನ್ನೆಯಿಂದ ಲಸಿಕೆ ಕೊಡಲು ಪ್ರಾರಂಭಿಸಿದ್ದೇವೆ. ದಿನಕಳೆದಂತೆ ಹೆಚ್ಚು ಜನರಿಗೆ ಲಸಿಕೆ ಕೊಡಲು ಪ್ರಯತ್ನಿಸುತ್ತೇವೆ. ಆನ್ಲೈನ್ ನೋಂದಣಿಗೂ ಅವಕಾಶವಿದೆ. ಎಲ್ಲರೂ ನೋಂದಣಿ ಮಾಡಿಕೊಳ್ಳಿ. ಕೋವಿಡ್ ಪೋರ್ಟಲ್ ನಿರ್ವಹಣೆಗೆ ನಾವೂ ಗಮನನೀಡಿದ್ದೇವೆ. ಲಸಿಕೆ ಪಡೆದವರು ಉಳಿದವರಿಗೆ ಉತ್ತಮ ಪ್ರತಿಕ್ರಿಯೆಯ ಜೊತೆ, ಅನುಭವ ಹಂಚಿಕೊಂಡರೆ ಇತರರಿಗೂ ಲಸಿಕೆ ಪಡೆಯುವ ಉತ್ಸಾಹ ಬರುತ್ತದೆ. ಲಸಿಕೆ ಪೂರೈಕೆಯ ಬಗ್ಗೆ ಗೊಂದಲಗಳು ಇಲ್ಲ ಎಂದು ಹೇಳಿದರು.
ಶ್ವಾಸಕೋಶ ತಜ್ಞ ಪವನ್ ಕುಮಾರ್ ಮಾತನಾಡಿ, ಲಸಿಕೆಯಿಂದ ಯಾರಿಗೂ ಏನೂ ತೊಂದರೆ ಆಗಲ್ಲ. ಕೆಲವರಿಗೆ ಜ್ವರ ಬರಬಹುದು. ಅದೇನೂ ತೊಂದರೆ ಇಲ್ಲ. ಈ ಕುರಿತಂತೆ ಯಾರೂ ಭಯ ಪಡುವುದು ಬೇಡ. ಲಸಿಕೆಗೆ ನೋಂದಣಿ ಮಾಡಲು ಕೋವಿನ್ ಅಪ್ಲಿಕೇಶನ್ ಇದೆ. ಅದರಲ್ಲಿ ತಮ್ಮ ಹೆಸರು ನೋಂದಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಹಳ್ಳಿಗಳ ಜನರು, ರೈತರಿಗೆ ಮನವರಿಗೆ ಆಗಬೇಕಿದೆ. ಈ ಕುರಿತಂತೆ ಹೆಲ್ತ್ ಕೇರ್ ವರ್ಕರ್ಸ್ಗಳಿಗೆ ಕೆಲಸ ಹೆಚ್ಚಿರುತ್ತದೆ. ರೈತರಿಗೆ ಮನವರಿಕೆ ಮಾಡಿ, ಪೋರ್ಟಲ್ ಮೂಲಕ ರಿಜಿಸ್ಟರ್ ಮಾಡಿಸುವುದು ಅವರದೇ ಜವಾಬ್ದಾರಿ. ಈ ಬಗ್ಗೆ ಹಳ್ಳಿಯ ಜನರಿಗೆ ಮನವೊಲಿಸುವ ಪ್ರಯತ್ನ ನಡೆಯಬೇಕು. ಯಾರೆಲ್ಲಾ ಲಸಿಕೆ ಪಡೆದಿದ್ದೀರೀ ಅವರು, ಲಸಿಕೆ ಪಡೆಯದವರಿಗೆ ತಿಳಿ ಹೇಳುವ ಪ್ರಯತ್ನ ನಡೆಯಬೇಕು ಎಂದು ತಿಳಿಸಿದರು.
ಲಸಿಕೆ ಪಡೆದ ನಂತರ ಆರೋಗ್ಯದಲ್ಲಿನ ವ್ಯತ್ಯಾಸದ ಕುರಿತಾಗಿ ವಸುಂಧರಾ ಮಾತನಾಡಿ, ನಾನು ನಿನ್ನೆ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದ ನಂತರ ರಾತ್ರಿ ಚೂರೇ ಚೂರು ತಲೆನೋವು ಇತ್ತು. ಅಷ್ಟು ಬಿಟ್ಟರೆ ಮತ್ಯಾವುದೇ ತೊಂದರೆ ಆಗಿಲ್ಲ. ಲಸಿಕೆ ಪಡೆಯುವ ಮೊದಲು ನನಗೆ ಯಾವುದೇ ಭಯ ಇರಲಿಲ್ಲ. ಕೆಲವರಿಗೆ ಅಡ್ಡ ಪರಿಣಾಮ ಇರಬಹುದು ಎಂಬ ಭಯ ಇದೆ. ಆದರೆ ಇಂದರಿಂದ ಯಾವುದೇ ಭಯ ಇಲ್ಲ. ಜೆಎಸ್ಎಸ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡಿದ್ದೇನೆ. ಯಾವುದೇ ಶುಲ್ಕ ಕೂಡಾ ನೀಡಿಲ್ಲ. ಎಲ್ಲರೂ ಲಸಿಕೆ ಪಡೆಯ ಬೇಕು. ಯಾವುದೇ ಭಯ ಬೇಡ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಕೂಡಾ ಇಲ್ಲ. ಯಾರೋ ಹೇಳಿದ ಮಾತಿಗೆ ಕಿವಿಕೊಡ ಬೇಡಿ ಲಸಿಕೆಯಿಂದ ಯಾವುದೇ ಅಡ್ಡ ಪಡಿಣಾಮಗಳಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: Tv9 Digital Live: ಕೊರೊನಾ ಎರಡನೇ ಅಲೆ ನಮ್ಮ ರಾಜ್ಯದಲ್ಲೂ ಆತಂಕ ಸೃಷ್ಟಿಸುತ್ತದೆಯೇ?
ಇದನ್ನೂ ಓದಿ: TV9 Digital Live | ಕೊರೊನಾ ಲಸಿಕೆ ಪಡೆಯಲು ಹಿಂಜರಿಕೆ ಏಕೆ?