ಜಿಂಕೆಗಳ ಕಾಟಕ್ಕೆ ಹೊಲದಲ್ಲಿದ್ದ ಬೆಳೆ ನಾಶ; ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದರ್​ ರೈತರ ಆಕ್ರೋಶ

ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು ಉದ್ದು, ಸೋಯಾ, ಬೆಳೆ ಚೆನ್ನಾಗಿ ಬಂದಿದೆ. ಪ್ರತಿಶತ 95 ರಷ್ಟು ಬೆಳೆ ಉತ್ತಮವಾಗಿ ಬಂದಿದ್ದು, ಈ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಕಷ್ಟ ಪಡುತ್ತಿದ್ದಾರೆ. ಉದ್ದಿನ ಹೊಲಕ್ಕೆ ಗುಂಪಾಗಿ ದಾಳಿ ಮಾಡುವ ಜಿಂಕೆಗಳು ಬೆಳೆಯನ್ನು ತಿಂದು ಖಾಲಿ ಮಾಡುತ್ತಿವೆ.

ಜಿಂಕೆಗಳ ಕಾಟಕ್ಕೆ ಹೊಲದಲ್ಲಿದ್ದ ಬೆಳೆ ನಾಶ; ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದರ್​ ರೈತರ ಆಕ್ರೋಶ
ಜಿಂಕೆಗಳ ಕಾಟಕ್ಕೆ ಹೊಲದಲ್ಲಿದ್ದ ಬೆಳೆ ನಾಶ
TV9kannada Web Team

| Edited By: preethi shettigar

Jul 07, 2021 | 1:06 PM

ಬೀದರ್: ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬಂದು ಹಾನಿ ಮಾಡುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಕಾಡಾನೆಗಳು ದಾಳಿ ಇಟ್ಟರೆ, ಮತ್ತೊಂದೆಡೆ ಹುಲಿ, ಚಿರತೆಯಂತಹ ಪ್ರಾಣಿಗಳು ದಾಳಿ ಮಾಡುತ್ತಿವೆ. ಇಂತಹದ್ದೇ ಘಟನೆಯೊಂದು ಬೀದರ್ ಜಿಲ್ಲೆಯಲ್ಲಿ ನಡೆದಿದ್ದು, ಕಾಡು ಪ್ರಾಣಿಗಳ ಕಾಟಕ್ಕೆ ಈ ಭಾಗದ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೆ ಬಿತ್ತಿದ ಬೆಳೆ ರಕ್ಷಿಸಲು ಹಗಲು ರಾತ್ರಿ ಎನ್ನದೆ ಹೊಲದಲ್ಲಿಯೇ ವಾಸ್ಥವ್ಯ ಹೂಡುವಂತಾಗಿದೆ. ಅಷ್ಟಕ್ಕೂ ಇಲ್ಲಿ ಕಾಟ ಕೊಡುತ್ತಿರುವುದು ಜಿಂಕೆಗಳು. ಹೊಲಕ್ಕೆ ನುಗ್ಗುವ ಜಿಂಕೆಗಳು ಬೆಳೆ ನಾಶಮಾಡಿ ರೈತರನ್ನು ಸಂಕಷ್ಟಕ್ಕೆ ನೂಕಿವೆ.

ಬೀದರ್ ಜಿಲ್ಲೆಯಲ್ಲಿ ಜಿಂಕೆ ಹಾಗೂ ಕೃಷ್ಣ ಮೃಗಗಳ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಜಿಂಕೆಗಳಿವೆ. ಹಿಂಡು ಹಿಂಡಾಗಿ ಹೊಲಗಳಿಗೆ ನುಗ್ಗುವ ಈ ಕಾಡು ಪ್ರಾಣಿಗಳು ಎಕರೆಗಟ್ಟಲೇ ಬೆಳೆಯನ್ನ ತಿಂದು ನಾಶ ಮಾಡಿ ಹೋಗುತ್ತವೆ. ಆದರೇ ರೈತರ ಸಮಸ್ಯೆ ಸ್ಪಂಧಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಾ ಕಂಡು ಕಾಣದಂತೆ ಕುಳಿತುಬಿಟ್ಟಿದ್ದಾರೆ. ನಮ್ಮ ನೋವನ್ನ ಯಾರಿಗೆ ಹೇಳಬೇಕೆಂದು ಗ್ರಾಮದ ರೈತ ಪ್ರಕಾಶ ರಾಜನಾಳ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಂಕೆಯನ್ನು ಹೊಡೆಯಲು ಬಾರದ ಅವುಗಳನ್ನು ಹೆದರಿಸಲು ಬಾರದಂತಾ ಸ್ಥಿತಿ ನಮ್ಮಲ್ಲಿದೆ. ಒಂದು ವೇಳೆ ಏನಾದರೂ ನಾವೂ ಜಿಂಕೆಯನ್ನು ಹೊಡೆದರೆ ಇಲ್ಲವೋ ಅದು ಆಕಸ್ಮಿಕವಾಗಿಯೂ ಅದು ಮರಣ ಹೊಂದಿದರು ಕೂಡ ನಮ್ಮ ಮೇಲೆ ಕೇಸ್ ಹಾಕುವ ಬೆದರಿಕೆಯನ್ನು ಅರಣ್ಯ ಇಲಾಖೆಯವರು ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಬೆಳೆಯನ್ನು ಜಿಂಕೆಗಳಿಂದ ರಕ್ಷಿಸಿ ಎಂದು ಇಲ್ಲಿನ ರೈತರು ಅರಣ್ಯ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು ಉದ್ದು, ಸೋಯಾ, ಬೆಳೆ ಚೆನ್ನಾಗಿ ಬಂದಿದೆ. ಪ್ರತಿ ಶತ 95 ರಷ್ಟು ಬೆಳೆ ಉತ್ತಮವಾಗಿ ಬಂದಿದ್ದು, ಈ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಕಷ್ಟ ಪಡುತ್ತಿದ್ದಾರೆ. ಉದ್ದಿನ ಹೊಲಕ್ಕೆ ಗುಂಪಾಗಿ ದಾಳಿ ಮಾಡುವ ಜಿಂಕೆಗಳು ಬೆಳೆಯನ್ನು ತಿಂದು ಖಾಲಿ ಮಾಡುತ್ತಿವೆ. ಇನ್ನೂ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಚಟ್ನಾಳ, ರಾಜನಾಳ, ನಿಟ್ಟೂರು, ಗ್ರಾಮದಲ್ಲಂತೂ ಜಿಂಕೆಯ ಹಾವಳಿಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ.

ಈ ಗ್ರಾಮದ ಸುತ್ತಮುತ್ತ ಏನಿಲ್ಲ ಎಂದರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಿಂಕೆಗಳಿದ್ದು, ಗ್ರಾಮದ ಹೊಲದಲ್ಲಿ ಹಾಕಿದ ಬೆಳೆಯನ್ನೇಲ್ಲ ತಿಂದು ನಾಶಮಾಡುತ್ತಿವೆ. ಕಳೆದ ಐದು ವರ್ಷದಿಂದ ಬರಗಾಲದಿಂದ ತತ್ತರಿಸಿಹೋಗಿದ್ದ ನಾವು ಈ ವರ್ಷ ಉತ್ತಮವಾಗಿ ಮಳೆಯಾಗಿದ್ದರಿಂದ ಬೆಳೆ ಚೆನ್ನಾಗಿ ಬಂದಿದೆ ಎಂದು ಖುಷಿಪಟ್ಟಿದ್ದೇವು. ಆದರೆ ಜಿಂಕೆಗಳ ಕಾಟ ಜಾಸ್ತಿಯಾಗಿದೆ. ಪ್ರತಿದಿನ ಹೊಲಕ್ಕೆ ಹೋದರೆ ಸಾಕು ಜಿಂಕೆಗಳನ್ನು ಓಡಿಸುವುದೆ ಒಂದು ಕಾರ್ಯವಾಗಿದೆ ಎಂದು ರೈತರು ತಮ್ಮ ಅಸಮಾದಾನ ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಮೈಸೂರಿನಲ್ಲಿ ಕಾಡಾನೆಗಳ ದಾಳಿ: ಜಮೀನಿನಲ್ಲಿದ್ದ ಬಾಳೆ ಫಸಲು ನಾಶ

ಒಂದು ತಿಂಗಳ ಕಾಲ ಸುರಿದ ಮಳೆಯಿಂದ ಈರುಳ್ಳಿ ಬೆಳೆಗೆ ಹಾನಿ; ನೇರಳೆ‌ ಮಚ್ಚೆ ರೋಗದಿಂದ ಕಂಗಾಲಾದ ಚಿತ್ರದುರ್ಗದ ರೈತರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada