ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ನರೇಗಾ ಅಕ್ರಮ, 33 ಪಂಚಾಯಿತಿಗಳಲ್ಲಿ 83 ಕೋಟಿ ರೂ ಸ್ವಾಹಾ? ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್?
ಈ ಪೈಕಿ ಸುಮಾರು 50 ಕೋಟಿಗೂ ಅಧಿಕ ಹಣ ದುರುಪಯೋಗವಾಗಿರೋ ಬಗ್ಗೆ ಉಲ್ಲೇಖಿಸಲಾಗಿದೆ..ಐನಾತಿಗಳು ಅಕ್ರಮ ಎಸಗಿರೋ ವಿಧಾನಗಳನ್ನ ನೋಡಿ ಹಿರಿಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ..ಕಾಮಗಾರಿ ನಿರ್ವಹಿಸದೇ, ಮೇಲಾಧಿಕಾರಿಗಳ ಅನುಮೋದನೆ ಪಡೆಯದೇ, ಹೆಚ್ಚುವರಿ ಹಣ ಪಾವತಿಯಾಗಿರೋದು ಬೆಳಕಿಗೆ ಬಂದಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಅಂದ್ರೆ ಅದು ಗ್ರಾಮೀಣ ಭಾಗದ ಅಭಿವೃದ್ಧಿ ಜೊತೆಗೆ ಬಡಜನರ ಪಾಲಿನ ಆದಾಯದ ಮೂಲವೂ ಹೌದು. ಆದ್ರೆ ಅದೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ (The Mahatma Gandhi National Rural Employment Guarantee Act 2005 -MGNREGA) ಕೋಟಿ ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು ಆ ಬಗ್ಗೆ ಮಧ್ಯಂತರ ವರದಿ ಸಲ್ಲಿಸಲಾಗಿದೆ. ಆ ಹಿಂದುಳಿದ ಜಿಲ್ಲೆಯಲ್ಲಿ ನಡೆದ ಕೋಟ್ಯಾಂತರ ರೂ ಅವ್ಯವಹಾರ ಸಂಚಲನಕ್ಕೆ ಕಾರಣವಾಗಿದೆ. ಹೌದು..ಅದು ಹಿಂದುಳಿದ ಜಿಲ್ಲೆ ಅನ್ನೋ ಹಣೆ ಪಟ್ಟಿ ಕಟ್ಟಿಕೊಂಡಿರೊ ರಾಯಚೂರು ಜಿಲ್ಲೆ..ಇದೇ ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ಭಾರೀ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ. ಕೋಟಿ ಕೋಟಿ ಅವ್ಯವಹಾರ ನಡೆದಿರೋ ಬಗ್ಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕರು ಬಯಲಿಗೆಳೆದಿದ್ದಾರೆ. ಹೌದು ದೇವದುರ್ಗ ತಾಲ್ಲೂಕಿನ 33 ಗ್ರಾ.ಪಂ. ವ್ಯಾಪ್ತಿಗಳಲ್ಲಿನ ಹಂತಹಂತವಾಗಿ ವಿವಿಧ ಮಾದರಿಯಲ್ಲಿ ಅಕ್ರಮ ನಡೆದಿರೊ ಸಾಕಷ್ಟು ದೂರುಗಳು ಬಂದಿದ್ವು.
ಇತ್ತೀಚೆಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸೂಚಿಸಿದ್ರು. ಅದರಂತೆ ಸಾಮಾಜಿಕ ಪರಿಶೋಧನಾ ನಿರ್ದೇಶಕರು ಹಾಗೂ ತಂಡದಿಂದ 2020-21 ಹಾಗೂ 2022-23 ನೇ ಸಾಲಿನ ಒಟ್ಟು 33 ಗ್ರಾ. ಪಂ. ವ್ಯಾಪ್ತಿಯ ಕಾಮಗಾರಿಗಳು, ಪಾವತಿಯಾದ ಬಿಲ್ಗಳು, ಸಂದಾಯವಾದ ಹಣದ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಿ ತನಿಖೆ ನಡೆಸಿದ್ರು..ಈ ವೇಳೆ ಬೆಚ್ಚಿ ಬೀಳಿಸೊ ಸತ್ಯ ಬಯಲಿಗೆ ಬಂದಿದ್ದು ಸಾಮಾಜಿಕ ಪರಿಶೋಧನಾ ನಿರ್ದೇಶಕರು 50 ಕ್ಕು ಹೆಚ್ಚು ಕೋಟಿ ಹಣ ದುರುಪಯೋಗವಾಗಿರೋ ಬಗ್ಗೆ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಹೌದು.. ಅಷ್ಟಕ್ಕು ಸಾಮಾಜಿಕ ಪರಿಶೋಧನಾ ನಿರ್ದೇಶಕರು ಹಾಗೂ ತಂಡದ ತನಿಖೆ ವೇಳೆ 33 ಪಂಚಾಯಿತಿಗಳಲ್ಲಿ ನಡೆದ ಒಂದೊಂದು ರೂಪಾಯಿ ಅವ್ಯವಹಾರವೂ ಬೆಳಕಿಗೆ ಬಂದಿದೆ..13 ಪ್ರಮುಖ ಅಂಶಗಳನ್ನೊಳಗೊಂಡ ಈ ಮಧ್ಯಂತರ ವರದಿಯನ್ನ ತನಿಖಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದೆ. ಮಧ್ಯಂತರ ವರದಿಯಲ್ಲಿ ಒಟ್ಟು 33 ಪಂಚಾಯಿತಿಗಳಲ್ಲಿ ಒಟ್ಟು 5385 ಕಾಮಗಾರಿಗಳಾಗಿದ್ದು ಇದಕ್ಕೆ ಪಾವತಿಸಲಾಗಿರೊ 83 ಕೋಟಿ 40 ಲಕ್ಷ ಹಣವನ್ನ ಆಕ್ಷೇಪಣೆಯಲ್ಲಿರಿಸಲಾಗಿದೆ.
ಇದನ್ನೂ ಓದಿ: Veer Gatha Project: ವೀರ ಗಾಥಾ ಯೋಜನೆ 3.0: 1.36 ಕೋಟಿಗೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗಿ
ಈ ಪೈಕಿ ಸುಮಾರು 50 ಕೋಟಿಗೂ ಅಧಿಕ ಹಣ ದುರುಪಯೋಗವಾಗಿರೋ ಬಗ್ಗೆ ಉಲ್ಲೇಖಿಸಲಾಗಿದೆ..ಐನಾತಿಗಳು ಅಕ್ರಮ ಎಸಗಿರೋ ವಿಧಾನಗಳನ್ನ ನೋಡಿ ಹಿರಿಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ..ಕಾಮಗಾರಿ ನಿರ್ವಹಿಸದೇ, ಮೇಲಾಧಿಕಾರಿಗಳ ಅನುಮೋದನೆ ಪಡೆಯದೇ, ಹೆಚ್ಚುವರಿ ಹಣ ಪಾವತಿಯಾಗಿರೋದು ಬೆಳಕಿಗೆ ಬಂದಿದೆ. ಇತ್ತ 32 ಗ್ರಾ.ಪಂ.ಗಳ ಕಾಮಗಾರಿಗಳಿಗೆ ಮಾರುತಿ ಎಂಟರ್ಪ್ರೈಸಸ್ ಅನ್ನೋ ಒಂದೇ ಸಂಸ್ಥೆಯಿಂದ ಸಾಮಾಗ್ರಿ ಖರೀದಿ ಮಾಡಿರೋ ಬಗ್ಗೆಯೂ ಉಲ್ಲೇಖಿಸಲಾಗಿದೆ.
ವೈಯಕ್ತಿಕ ಕಾಮಗಾರಿಗಳ ಮೊತ್ತವನ್ನ ಫಲಾನುಭವಿಗಳಿಗೆ ನೀಡದೇ ಸರಬರಾಜುದಾರರ ಖಾತೆಗೆ ಜಮೆ ಮಾಡಿರೋ ಬಗ್ಗೆ ತಿಳಸಲಾಗಿದೆ..ಹೀಗೆ ಸಾಲು ಸಾಲು ಅಕ್ರಮದಲ್ಲಿ ಭಾಗಿಯಾಗಿರ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಸುವಂತೆಯೂ ಸೂಚಿಸಲಾಗಿದೆ..ಆದ್ರೆ ಈ ವರೆಗೂ ಆ ಕೆಲಸವಾಗಿಲ್ಲ..ಈ ಮಧ್ಯೆ ಜಿಲ್ಲಾ ಪಮಚಾಯತ ಸಿಇಓ ಅವ್ರಿಗೆ ಬೆದರಿಕೆ ಕರೆಗಳು ಬಂದಿವೆ ಅನ್ನೋ ಆರೋಪ ಕೇಳಿಬಂದಿವೆ..ಆದ್ರೆ ಇದನ್ನ ಅಲ್ಲಗಳೆದಿರೊ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್.. ಯಾವ ಬೆದರಿಕೆಯೂ ಇಲ್ಲ..ಈ ಬಗ್ಗೆ ಸೂಕ್ತ ಕ್ರಮಗೈಗೊಳ್ಳಲಾಗುತ್ತೆ ಅಂತ ತಿಳಿಸಿದ್ದಾರೆ.
ಇದಷ್ಟೇ ಅಲ್ಲ ಕೋಟಿ ಕೋಟಿ ಅಕ್ರಮದಲ್ಲಿ ಶೇಕಡಾ 95 ರಷ್ಟು ಕಾಮಗಾರಿಗಳಿಗೆ ನಾಮಫಲಕ ಅಳವಡಿಸದೇ ಪ್ರತಿ ನಾಮಫಲಕಕ್ಕೆ 5000 ರೂ.ಪಾವತಿ ಮಾಡಲಾಗಿದ್ದು ಗೊತ್ತಾಗಿದೆ..ನಕಲು ಉದ್ಯೋಗ ಚೀಟಿಗಳನ್ನ ಸೃಷ್ಟಿಸಿ ಹಣ ಪಾವತಿಯನ್ನೂ ಮಾಡಲಾಗಿದೆ..ಹೀಗಾಗಿ ತಪ್ಪಿತಸ್ಥ ಸಿಬ್ಬಂದಿ,ಅಧಿಕಾರಿಗಳು, ಗ್ರಾ.ಪಂ. ಸದಸ್ಯರು,ಅಧ್ಯಕ್ಷರುಗಳು,ಗುತ್ತಿಗೆ ಆಧಾರದ ಸಿಬ್ಬಂದಿಯ ಪಾತ್ರದ ಬಗ್ಗೆ ಪರಿಶೀಲಿಸಿ ಹಣ ವಸೂಲಿ ಜೊತೆ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಲಾಗಿದೆ..ಆದ್ರೆ ಅಧಿಕಾರಿಗಳು ಪೂರ್ಣ ಪ್ರಮಾಣದ ವರದಿ ಬರೋ ವರೆಗೂ ಕಾಯ್ತಾರಾ ಇಲ್ಲ, ಮಧ್ಯಂತರ ವರದಿ ಆಧಾರದಲ್ಲಿ ಕೇಸ್ ದಾಖಲಿಸಿ ಐನಾತಿಗಳನ್ನ ಜೈಲಿಗೆ ಕಳುಹಿಸುತ್ತಾರಾ ಕಾದು ನೋಡಬೇಕಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.