ಮಹಿಳೆಯರ ಮೇಲೆ ತಾಲಿಬಾನಿಗಳ ದೌರ್ಜನ್ಯ ಎಂಥದ್ದು? ಮಂಗಳೂರು ವಿವಿಯ ಆಫ್ಘನ್ ವಿದ್ಯಾರ್ಥಿ ಬಿಚ್ಚಿಟ್ಟ ವಿಚಾರ ಇದು

Afghanistan: ಅಫ್ಘಾನಿಸ್ತಾನದ ಪರಿಸ್ಥಿತಿ, ಆಡಳಿತ, ಅವರ ಕಾನೂನು, ಹಿಂಸಾಚಾರ, ಭಯೋತ್ಪಾದನೆ, ಆರ್ಥಿಕತೆ, ವಿದೇಶ ನೀತಿ ಇತ್ಯಾದಿಗಳು ಒಂದು ಕಡೆ ಆದರೆ ಮತ್ತೊಂದು ಕಡೆ ಅಷ್ಟೇ ಮುಖ್ಯವಾಗಿ ಮತ್ತು ಘನವಾಗಿ ಚರ್ಚೆ ಆಗುತ್ತಿರುವುದು ಅಲ್ಲಿನ ಮಹಿಳೆಯರ ಸ್ಥಿತಿಗತಿ.

ಮಹಿಳೆಯರ ಮೇಲೆ ತಾಲಿಬಾನಿಗಳ ದೌರ್ಜನ್ಯ ಎಂಥದ್ದು? ಮಂಗಳೂರು ವಿವಿಯ ಆಫ್ಘನ್ ವಿದ್ಯಾರ್ಥಿ ಬಿಚ್ಚಿಟ್ಟ ವಿಚಾರ ಇದು
ಮಂಗಳೂರಿನಲ್ಲಿ ಕಲಿಯುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿನಿ
Follow us
TV9 Web
| Updated By: ganapathi bhat

Updated on: Aug 21, 2021 | 5:35 PM

ಮಂಗಳೂರು: ಅಫ್ಘಾನಿಸ್ತಾನದಲ್ಲಿ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ಎಂಥದ್ದು ಎಂದು ಕಳೆದ ಕೆಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲಿನ ಆಡಳಿತವನ್ನು ತಾವೇ ನೋಡಿಕೊಳ್ಳುವುದಾಗಿ ಹಾಗೂ ಮಹಿಳೆಯರಿಗೂ ಉತ್ತಮ ಜೀವನ ನಡೆಸುವ ಆಯ್ಕೆ ನೀಡುವುದಾಗಿ ತಾಲಿಬಾನ್ ನಾಯಕರು ಹೇಳಿದ್ದಾರೆ. ಆದರೆ, ಹೀಗೆ ಹೇಳಿದ ಬಳಿಕವೂ ಮಹಿಳೆಯರ ಮೇಲಿನ ಅನೇಕ ದೌರ್ಜನ್ಯ, ವಿಕೃತಿ, ಹಿಂಸಾಚಾರದ ದೃಶ್ಯಗಳನ್ನು ನಾವು ನೋಡುತ್ತಲೇ ಇದ್ದೇವೆ. ವಿಮಾನದ ಮೇಲ್ಮೈಯಲ್ಲಾದರೂ ಸರಿ ಬೇರೆ ಕಡೆ ಹೋಗಿ ಬದುಕೋಣ ಎಂಬ ಜನರ ಭಾವವೇ ಅಲ್ಲಿನ ಭಯವನ್ನು ತೋರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಅಲ್ಲಿಂದ ಹೊರ ಹೋಗುತ್ತಿರುವವರಲ್ಲಿ ಕೇವಲ ಪುರುಷರೇ ಕಾಣಿಸುತ್ತಿದ್ದಾರೆ. ಮಹಿಳೆಯರು ಎಲ್ಲಿದ್ದಾರೆ? ಅವರ ಮೇಲಿನ ದೌರ್ಜನ್ಯ ಅಥವಾ ಹಿಂಸಾಚಾರ ಎಂಥದ್ದು ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನದ ಪರಿಸ್ಥಿತಿ, ಆಡಳಿತ, ಅವರ ಕಾನೂನು, ಹಿಂಸಾಚಾರ, ಭಯೋತ್ಪಾದನೆ, ಆರ್ಥಿಕತೆ, ವಿದೇಶ ನೀತಿ ಇತ್ಯಾದಿಗಳು ಒಂದು ಕಡೆ ಆದರೆ ಮತ್ತೊಂದು ಕಡೆ ಅಷ್ಟೇ ಮುಖ್ಯವಾಗಿ ಮತ್ತು ಘನವಾಗಿ ಚರ್ಚೆ ಆಗುತ್ತಿರುವುದು ಅಲ್ಲಿನ ಮಹಿಳೆಯರ ಸ್ಥಿತಿಗತಿ. ಮಕ್ಕಳ ಜೀವನ. ಮಾನವ ಹಕ್ಕುಗಳು ಇತ್ಯಾದಿ. ಈ ಬಗ್ಗೆ ಸ್ವತಃ ಅಫ್ಘಾನಿಸ್ತಾನದ ಮತ್ತು ಈಗ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕ್ರಿಸ್ಮಾ ರಸೂಲಿ ಟಿವಿ9 ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತಾಲಿಬಾನಿಗಳ ಈ ಹಿಂಸಾಚಾರವನ್ನು ಯಾವತ್ತೂ ಕ್ಷಮಿಸಲ್ಲ. ತಾಲಿಬಾನಿಗಳಿಂದ ಆಫ್ಘನ್‌ ಮಹಿಳೆಯರಿಗೆ ಭಾರಿ ರಣಹಿಂಸೆ ನೀಡಲಾಗುತ್ತದೆ. ಬುರ್ಖಾ ಧರಿಸಿಯೇ ಮನೆಯಿಂದ ಹೊರಬರುವಂತೆ ಹಿಂಸೆ ನೀಡುತ್ತಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯಕ್ಕೆ ಭಯ ಆಗ್ತಿದೆ. ಆಫ್ಘನ್‌ನ ಶಿಕ್ಷಿತ ಸಮುದಾಯಕ್ಕೆ ಭವಿಷ್ಯದ ಬಗ್ಗೆ ದಿಗಿಲು ಇದ್ದೇ ಇದೆ. ಅವರು ಮನೆ ಬಿಟ್ಟು ಹೊರಗೆ ಬಾರದಂತೆ ಮಹಿಳೆಯರಿಗೆ ದಿಗ್ಬಂಧನ ಹೇರುತ್ತಾರೆ. ತಾಲಿಬಾನಿ ರಕ್ಕಸ ರೂಪಕ್ಕೆ ಏರ್‌ಪೋರ್ಟ್‌ ದೃಶ್ಯಗಳೇ ಸಾಕ್ಷಿ ಎಂದು ಮಾಹಿತಿ ನೀಡಿದ್ದಾರೆ. ಅಲ್ಲಿನ ದೈಹಿಕ ಹಿಂಸೆಗಿಂತ ಮಾನಸಿಕ ಭಯ, ಆತಂಕ, ದೌರ್ಜನ್ಯವನ್ನು ಸಹಿಸಿರುವುದು ಕಷ್ಟ. ಆ ಜೀವನ ಯಾರಿಗೂ ಬೇಡ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ

ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಐಎಂಎಫ್ ನಿರ್ಧಾರ; ಆರ್ಥಿಕ ಬಲ ಇಲ್ಲದೆ ತಾಲಿಬಾನಿಗಳು ಕಂಗಾಲು

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?