ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆ ಬರಹ..; ಉರ್ದುವಿನಲ್ಲಿ ಬರೆದಿದ್ದನ್ನು ಅಳಿಸಿದ ಪೊಲೀಸರು

ಕೂಗಳತೆ ದೂರದಲ್ಲೇ ಕೋರ್ಟ್​ ಇದ್ದರೂ ಕಿಡಿಗೇಡಿಗಳು ಮತ್ತೆ ವಿವಾದ ಸೃಷ್ಟಿಸುವ ಬರಹಗಳನ್ನು ಬರೆದಿದ್ದು, ಪಾಂಡೇಶ್ವರ ಠಾಣಾ ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮರಾಗಳನ್ನೂ ಪರಿಶೀಲಿಸಿದ್ದಾರೆ.

  • Lakshmi Hegde
  • Published On - 11:16 AM, 29 Nov 2020
ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆ ಬರಹ..; ಉರ್ದುವಿನಲ್ಲಿ ಬರೆದಿದ್ದನ್ನು ಅಳಿಸಿದ ಪೊಲೀಸರು
ಗೋಡೆಯ ಮೇಲೆ ಬರೆದಿದ್ದ ವಿವಾದಾತ್ಮಕ ಬರಹವನ್ನು ಅಳಿಸಲಾಗಿದೆ.

ಮಂಗಳೂರು: ಇಲ್ಲಿನ ಹಳೇ ಔಟ್​ಪೋಸ್ಟ್​ ಗೋಡೆ ಮೇಲೆ ಕಿಡಿಗೇಡಿಗಳು ವಿವಾದಾತ್ಮಕ ಬರಹವೊಂದನ್ನು ಬರೆದಿದ್ದು, ಅದನ್ನೀಗ ಪೊಲೀಸರು ಅಳಿಸಿದ್ದಾರೆ.

ಮಂಗಳೂರಿನ ಕೋರ್ಟ್​ ಆವರಣದಲ್ಲೇ ಸ್ವಲ್ಪ ದೂರದಲ್ಲಿರುವ ಪೊಲೀಸ್​ ಔಟ್​ಪೋಸ್ಟ್​ ಗೋಡೆ ಮೇಲೆ ಉರ್ದುವಿನಲ್ಲಿ Gustuk e Rasool ek hi saza sar tan say juda ಎಂದು ಬರೆಯಲಾಗಿತ್ತು. ಪ್ರವಾದಿಗೆ ಕೋಪ ಬಂದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬರ್ಥದ ಬರಹ ಇದಾಗಿದೆ.

ಕೂಗಳತೆ ದೂರದಲ್ಲೇ ಕೋರ್ಟ್​ ಇದ್ದರೂ ಕಿಡಿಗೇಡಿಗಳು ಮತ್ತೆ ವಿವಾದ ಸೃಷ್ಟಿಸುವ ಬರಹಗಳನ್ನು ಬರೆದಿದ್ದು, ಪಾಂಡೇಶ್ವರ ಠಾಣಾ ಪೊಲೀಸರು ಅವರಿಗಾಗಿ ಹುಡುಕುತ್ತಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನೂ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಸಾವು