ಮರಗಳ್ಳತನ: ದೂರು ನೀಡಿದ್ದಕ್ಕೆ ಕುಟುಂಬದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ದಾಳಿ, ಹಲ್ಲೆ

ಅರಣ್ಯ ಅಧಿಕಾರಿಗಳ ವಿರುದ್ಧ ದೂರು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ‌ಐತ್ತೂರಿನ‌ ಮುಜೂರಿನಲ್ಲಿರುವ ಪ್ರಸಾದ್ ಮನೆ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದು, ಶೂ ಹಾಕಿಕೊಂಡೆ ಮನೆಯೊಳಗೆ ಪ್ರವೇಶಿಸಿದ ಅಧಿಕಾರಿಗಳು ಉದ್ದಟತನ ಮೆರೆದಿದ್ದಾರೆ.

  • TV9 Web Team
  • Published On - 15:05 PM, 3 Mar 2021
ಮರಗಳ್ಳತನ: ದೂರು ನೀಡಿದ್ದಕ್ಕೆ ಕುಟುಂಬದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ದಾಳಿ, ಹಲ್ಲೆ
ಅರಣ್ಯ ಅಧಿಕಾರಿಗಳು ಪ್ರಸಾದ್ ಮನೆ ಮೇಲೆ ದಾಳಿ ನಡೆಸಿರುವ ದೃಶ್ಯ

ದಕ್ಷಿಣ ಕನ್ನಡ: ಸುಬ್ರಹ್ಮಣ್ಯ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಲಕ್ಷಾಂತರ ಬೆಲೆ ಬಾಳುವ ಮರಗಳು ಕಳುವಾಗಿವೆ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಅರಣ್ಯ ಸಂಚಾರ ದಳಕ್ಕೆ ಪ್ರಸಾದ್ ದೂರು ನೀಡಿದ್ದಾರೆ. ದೂರು ನೀಡಿದ್ದರಿಂದ ವ್ಯಘ್ರಗೊಂಡು.. ಪ್ರಸಾದ್ ಮನೆಗೆ ಮಧ್ಯರಾತ್ರಿ 1.30ಕ್ಕೆ ಸುಮಾರು 15 ಮಂದಿ ಏಕಾಏಕಿಯಾಗಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಸಾದ್ ದಂಪತಿ, ಮಗು ಮೇಲೆ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆ. ಜೊತೆಗೆ ಪ್ರಸಾದ್​ರ ತಂದೆ, ತಾಯಿ ಮೇಲೂ ಅಧಿಕಾರಿಗಳಿಂದ ಹಲ್ಲೆಯಾಗಿದೆ ಎಂದು ಪ್ರಸಾದ್ ಆರೋಪಿಸಿದ್ದಾರೆ.

ಈ ಹಿಂದೆಯೇ ಅರಣ್ಯ ಸಂಚಾರ‌ ದಳಕ್ಕೆ ದೂರು ನೀಡಿದ್ದ ಪ್ರಸಾದ್ ಮರಗಳ್ಳತನದಲ್ಲಿ ಅರಣ್ಯ ಅಧಿಕಾರಿಗಳು ಶಾಮೀಲು ಎಂಬುದಾಗಿ ತಿಳಿಸಿದ್ದರು. ಇದನ್ನೇ ಕಾರಣವಾಗಿಸಿಕೊಂಡ ಅರಣ್ಯ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ‌ಐತ್ತೂರಿನ‌ ಮುಜೂರಿನಲ್ಲಿರುವ ಪ್ರಸಾದ್ ಮನೆ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದು, ಶೂ ಹಾಕಿಕೊಂಡೇ ಮನೆಯೊಳಗೆ ಪ್ರವೇಶಿಸಿದ ಅಧಿಕಾರಿಗಳು ಉದ್ದಟತನ ಮೆರೆದಿದ್ದಾರೆ ಎಂದು ಪ್ರಸಾದ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆ: ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧ ವಶ