AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಗೊಂಡ ಹ್ಯೂಮನ್ ಮಿಲ್ಕ್ ಬ್ಯಾಂಕ್ ಅದೆಷ್ಟೋ ನವಜಾತ ಶಿಶುಗಳ ಜೀವ ಉಳಿಸಿದೆ! ಇಲ್ಲಿಯ ವಿಶೇಷತೆ ಓದಿ

Breast milk: ಬಾಣಂತಿಯರ ಮನವೊಲಿಸಿ ಸಂಗ್ರಹಿಸಿದ ಎದೆ ಹಾಲನ್ನು ಪಾಶ್ಚರೀಕರಿಸಿ, ಬಳಿಕ ವೆನ್ಲಾಕ್ ಪ್ರಯೋಗಾಲಯದಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಿ, ಆನಂತರವಷ್ಟೇ ನವಜಾತ ಶಿಶುಗಳಿಗೆ ನೀಡಲಾಗುತ್ತದೆ ಅಂತಾರೆ ಲೇಡಿಗೋಶನ್ ಹ್ಯೂಮನ್ ಮಿಲ್ಕ್ ಬ್ಯಾಂಕ್‌ನ ನೋಡಲ್ ಆಫೀಸರ್ ಡಾ. ಬಾಲಕೃಷ್ಣ.

ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಗೊಂಡ ಹ್ಯೂಮನ್ ಮಿಲ್ಕ್ ಬ್ಯಾಂಕ್ ಅದೆಷ್ಟೋ ನವಜಾತ ಶಿಶುಗಳ ಜೀವ ಉಳಿಸಿದೆ! ಇಲ್ಲಿಯ ವಿಶೇಷತೆ ಓದಿ
ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್
ಸಾಧು ಶ್ರೀನಾಥ್​
|

Updated on:Feb 24, 2023 | 9:44 PM

Share

ತಾಯಿಯ ಎದೆ ಹಾಲು ಅಮೃತ ಸಮಾನ ಅಂತಾರೆ. ಆದ್ರೆ ಇಂದಿಗೂ ಅದೆಷ್ಟೋ ಕಾರಣದಿಂದ ನವಜಾತ ಶಿಶುಗಳು (Neonatals) ತಾಯಿಯ ಎದೆಹಾಲಿನಿಂದ (Breast milk) ವಂಚಿತರಾಗುತ್ತಿದ್ದಾರೆ. ಈ ರೀತಿಯಾಗಬಾರದು ಎಂಬ ಕಾರಣಕ್ಕೆ ಮಂಗಳೂರಿನ ಪ್ರಸಿದ್ದ ಸರ್ಕಾರಿ ಹೆರಿಗೆ ಆಸ್ಪತ್ಪೆಯಲ್ಲಿ ಆರಂಭಗೊಂಡ ಹ್ಯೂಮನ್ ಮಿಲ್ಕ್ ಬ್ಯಾಂಕ್ (Human Milk Bank) ಅದೆಷ್ಟೋ ನವಜಾತ ಶಿಶುಗಳ ಜೀವ ಉಳಿಸಿದೆ. ಮಂಗಳೂರಿನ ಸರ್ಕಾರಿ ಆಸ್ಪತ್ರೆಯ ಮಿಲ್ಕ್ ಬ್ಯಾಂಕ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಕರಾವಳಿಯ ಮೊದಲ ತಾಯಿ (Mother) ಹಾಲಿನ ಬ್ಯಾಂಕ್‌ಗೆ ಇನ್ನಿಲ್ಲದ ಬೇಡಿಕೆ ಬಂದಿದೆ.

ಹೌದು..ಸರ್ಕಾರಿ ಹೆರಿಗೆ ಆಸ್ಪತ್ರೆಗಳು ಅಂದರೆ ಸಾಕು ಮೂಗು ಮುರಿಯೋ ಈ ಕಾಲದಲ್ಲಿ ಆ ಮಾತಿಗೆ ವಿರುದ್ಧವಾಗಿ ನಿಂತಿದ್ದೇ ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ (Mangalore Lady Goschen Hospital). ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೇ ಕೈ ಚೆಲ್ಲಿದ ಹೆರಿಗೆ ಪ್ರಕರಣಗಳನ್ನು ಯಶಸ್ವಿಯಾಗಿಸಿದ ಕೀರ್ತಿ ಈ ಲೇಡಿಗೋಶನ್ ಆಸ್ಪತ್ರೆಗೆ ಸಲ್ಲುತ್ತೆ. ಅದೆಷ್ಟೋ ಕ್ಲಿಷ್ಟಕರ ಹೆರಿಗೆಗಳನ್ನು ಮಾಡಿಸಿ ಸೈ ಎನಿಸಿಕೊಂಡಿದ್ದ ಲೇಡಿಗೋಶನ್ ಆಸ್ಪತ್ರೆಯು 2022ರ ಮಾರ್ಚ್‌ನಲ್ಲಿ ತಾಯಿಯ ಎದೆ ಹಾಲಿನಿಂದ ವಂಚಿತಗೊಂಡ ಮಕ್ಕಳ ಪೋಷಣೆಗಾಗಿ ಹೊಸ ಪ್ಲಾನ್ ರೂಪಿಸಿತ್ತು. ಕರಾವಳಿಯಲ್ಲೇ ಮೊದಲ ಪ್ರಯತ್ನ ಎಂಬಂತೆ ಆರಂಭಗೊಂಡಿದ್ದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಯೋಜನೆಗೆ ಇದೀಗ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.

ಎದೆ ಹಾಲನ್ನು ದಾನದ ರೂಪದಲ್ಲಿ ಸ್ವೀಕರಿಸುವುದು ಲೇಡಿಗೋಶನ್ ಆಸ್ಪತ್ರೆಗೆ ಸುಲಭದ ಕೆಲಸವಾಗಿರಲಿಲ್ಲ. ಮೊದ ಮೊದಲು ಇದಕ್ಕೆ ಯಾವ ಮಹಿಳೆಯೂ ಒಪ್ಪಿಗೆಯೇ ನೀಡಿರಲಿಲ್ಲವಂತೆ. ಆದರೆ ಕ್ರಮೇಣ ಬಾಣಂತಿಯರ ಮನವೊಲಿಕೆ ಕಾರ್ಯದಲ್ಲಿ ಯಶಸ್ವಿಯಾದ ಬಳಿಕ ಇದೀಗ ದಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎದೆ ಹಾಲನ್ನು ದಾನದ ರೂಪದಲ್ಲಿ ನೀಡಲು ಒಪ್ಪಿಗೆ ನೀಡುವ ತಾಯಂದಿರನ್ನು ಮೊದಲು ವಿವಿಧ ಒಪ್ಪಂದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಗುತ್ತೆ.

ಬಳಿಕ ಜನರಲ್ ಟೆಸ್ಟ್, ಹೆಚ್ಐವಿ, ಹೆಪಟೈಟಿಸ್ ಬಿ ಹಾಗೂ ಸಿ ಸೇರಿದಂತೆ ಸಾಕಷ್ಟು ತಪಾಸಣೆಗೆ ಒಳಪಡಿಸಿ ನೆಗೆಟಿವ್ ವರದಿ ಪಡೆದ ನಂತರವೇ ಬಾಣಂತಿಯರ ಎದೆ ಹಾಲನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುತ್ತೆ ಎಂದು ಡಾ. ದುರ್ಗಾಪ್ರಸಾದ್ (ವೈದ್ಯಕೀಯ ಅಧೀಕ್ಷಕರು, ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು) ತಿಳಿಸಿದರು.

Human Milk Bank at Mangalore Lady Goschen Hospital draws attention of women to feed children 1

2022ರ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ 3,300ಕ್ಕೂ ಹೆಚ್ಚು ತಾಯಂದಿರು ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗೆ ತಮ್ಮ ಎದೆಹಾಲನ್ನು ದಾನ ಮಾಡಿದ್ದಾರೆ. ಈ ಹಾಲನ್ನು ಅವಧಿ ಪೂರ್ವವಾಗಿ ಜನಿಸಿ ಐಸಿಯುನಲ್ಲಿದ್ದ 68ಕ್ಕೂ ಅಧಿಕ ಕಂದಮ್ಮಗಳು ಹಾಗೂ ವೆನ್ಲಾಕ್ ಆರ್‌ಪಿಸಿಸಿ ಮಕ್ಕಳ ಕೇಂದ್ರದಲ್ಲಿರುವ ಮಕ್ಕಳಿಗೆ ನೀಡಲಾಗಿದೆ.

ಸಂಗ್ರಹಿಸಿದ ಎದೆ ಹಾಲನ್ನು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಪಡಿಸಿ, ಬಳಿಕ ವೆನ್ಲಾಕ್ ಪ್ರಯೋಗಾಲಯದಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಿ, ಆನಂತರವಷ್ಟೇ ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಈ ಹಾಲನ್ನು ಆರು ತಿಂಗಳವರೆಗೂ ಸಂಗ್ರಹ ಮಾಡಿ ಇಟ್ಟುಕೊಳ್ಳಬಹುದು ಅಂತಾರೆ ಲೇಡಿಗೋಶನ್ ಹ್ಯೂಮನ್ ಮಿಲ್ಕ್ ಬ್ಯಾಂಕ್‌ನ ನೋಡಲ್ ಆಫೀಸರ್ ಡಾ. ಬಾಲಕೃಷ್ಣ.

ಪ್ರಸ್ತುತ ಜೀವನಶೈಲಿ ಹಾಗೂ ಮಹಿಳೆಯರ ಆರೋಗ್ಯ ಸಮಸ್ಯೆಗಳಿಂದಾಗಿ 30 ಪ್ರತಿಶತಕ್ಕೂ ಅಧಿಕ ಮಕ್ಕಳು ಅವಧಿಗೂ ಮುನ್ನವೇ ಜನಿಸುತ್ತವೆ. ಇಂತಹ ಮಕ್ಕಳಲ್ಲಿ ಪ್ರತಿರೋಧ ಶಕ್ತಿ ಸಹ ಕಮ್ಮಿ ಇರುತ್ತೆ. ಈ ಸಂದರ್ಭದಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್‌ನ ಮೂಲಕ ಸಿಕ್ಕ ಎದೆಹಾಲು ಈ ಕಂದಮ್ಮಗಳಿಗೆ ಸಂಜೀವಿನಿಯಾಗ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ವರದಿ: ಅಶೋಕ್, ಟಿವಿ 9, ಮಂಗಳೂರು

Published On - 8:49 pm, Fri, 24 February 23

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ