ಮಂಗಳೂರಿನಲ್ಲಿ ದರೋಡೆ ಕೇಸ್​ಗಳು ಹೆಚ್ಚುತ್ತಿವೆ, ರಾತ್ರಿ ಮನೆಯಲ್ಲಿ ಮಲಗಲೂ ಭಯವಾಗುತ್ತದೆ: ಯು.ಟಿ.ಖಾದರ್

ಮಂಗಳೂರಿನಲ್ಲಿ ದರೋಡೆ ಕೇಸ್‌ಗಳು ಜಾಸ್ತಿಯಾಗುತ್ತಿವೆ. ನೈತಿಕ ಪೋಲಿಸ್‌ಗಿರಿಗೆ ಅವಕಾಶ ಮಾಡಿಕೊಡಲಾಗಿದೆ. ಪೊಲೀಸರು ಕ್ರಮಕೈಗೊಂಡರೆ ಪೊಲೀಸರ ವಿರುದ್ಧವೇ ದೂರು ನೀಡುತ್ತಿದ್ದಾರೆ.

  • TV9 Web Team
  • Published On - 16:23 PM, 6 Apr 2021
ಮಂಗಳೂರಿನಲ್ಲಿ ದರೋಡೆ ಕೇಸ್​ಗಳು ಹೆಚ್ಚುತ್ತಿವೆ, ರಾತ್ರಿ ಮನೆಯಲ್ಲಿ ಮಲಗಲೂ ಭಯವಾಗುತ್ತದೆ: ಯು.ಟಿ.ಖಾದರ್
ಮಾಜಿ ಸಚಿವ ಯು.ಟಿ ಖಾದರ್

ಮಂಗಳೂರು : ಜಿಲ್ಲೆಯಲ್ಲಿ ಅಲ್ಲಲ್ಲಿ ದರೋಡೆ ಕೇಸ್‌ಗಳು ಜಾಸ್ತಿಯಾಗುತ್ತಿವೆ. ನೈತಿಕ ಪೋಲಿಸ್‌ಗಿರಿಗೆ ಅವಕಾಶ ಮಾಡಿಕೊಡಲಾಗಿದೆ. ಪೊಲೀಸರು ಕ್ರಮಕೈಗೊಂಡರೆ ಪೊಲೀಸರ ವಿರುದ್ಧವೇ ದೂರು ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾತ್ರಿ ಮನೆಯಲ್ಲಿ ಮಲಗಲೂ ಹೆದರಿಕೆಯಾಗುತ್ತೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.

ಲವ್ ಜಿಹಾದ್ ಬಗ್ಗೆ ರಾಜ್ಯ ಸರ್ಕಾರ ಕಾನೂನು ಮಾಡಲಿ. ಕಾನೂನು ತರುತ್ತೇವೆ ಎಂದು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದರು. ಗ್ರಾಮ ಪಂಚಾಯತ್ ಚುನಾವಣೆ ಮುಗಿದ ತಕ್ಷಣ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಸುದ್ದಿಗೋಷ್ಠಿ ನಡೆಸಿ ಬಹಿರಂಗ ಎಚ್ಚರಿಕೆ ನೀಡಿದ ಬಗ್ಗೆ ಕ್ರಮವನ್ನೂ ಕೈಗೊಂಡಿಲ್ಲ. ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಯು.ಟಿ.ಖಾದರ್ ಪ್ರಶ್ನೆ ಒಡ್ಡಿದ್ದಾರೆ.

ಲವ್ ಜಿಹಾದ್ ವಿರುದ್ಧ ಸರ್ಕಾರ ಮೊದಲು ಕಾನೂನು ತರಲಿ. ಕಾನೂನು ತರದಿದ್ರೆ ಸರ್ಕಾರ ವಿರುದ್ಧವೇ ಪ್ರತಿಭಟನೆ ಮಾಡಲಿ. ಧೈರ್ಯವಿದ್ರೆ ರಾಜ್ಯಸರ್ಕಾರ ವಿರುದ್ಧವೇ ಪ್ರತಿಭಟನೆ ಮಾಡಲಿ ಸಂಘಟನೆಗಳು ಮುಗ್ಧರಿಗೆ ಹೊಡೆಯುತ್ತಾರೆ. ಮುಗ್ಧರು ಜೈಲಿಗೆ ಹೋಗಬೇಕಾಂದಹ ಪರಿಸ್ಥಿ ಎದುರಾಗುತ್ತಿದೆ ಎಂದು
ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿಗೆ ಕನ್ನ ಹಾಕಿದ್ದು ಕೇರಳ, ಅಫ್ಘಾನ್ ದರೋಡೆಕೋರರು!

ಹಲವೆಡೆ ದರೋಡೆ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಡಕಾಯಿತರ ತಂಡದ 9 ಮಂದಿ ಮಂಗಳೂರಿನಲ್ಲಿ ಬಲೆಗೆ

( The number of robbery Quora is increasing in Mangalore says u t Khader)