4 ದಶಕದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಹೊಸಬರು ಸ್ಪರ್ಧೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕ್ಯಾಪ್ಟನ್​ ಬ್ರಿಜೇಶ್ ಚೌಟಾ ಮತ್ತು ಕಾಂಗ್ರೆಸ್​ನಿಂದ ವಕೀಲ ಆರ್​. ಪದ್ಮರಾಜ ಪ್ರತಿಸ್ಪರ್ಧಿಸುತ್ತಿದ್ದಾರೆ. ಈ ಇಬ್ಬರು ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ದುಮುಕಿದ್ದಾರೆ. ಈ ಮೂಲಕ ನಾಲ್ಕು ದಶಕಗಳ ನಂತರ ಹೊಸಬರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

4 ದಶಕದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಹೊಸಬರು ಸ್ಪರ್ಧೆ
ವಕೀಲ ಆರ್​. ಪದ್ಮರಾಜ, ಕ್ಯಾಪ್ಟನ್​ ಬ್ರಿಜೇಶ್ ಚೌಟಾ
Follow us
ವಿವೇಕ ಬಿರಾದಾರ
|

Updated on:Mar 25, 2024 | 1:41 PM

ಮಂಗಳೂರು, ಮಾರ್ಚ್​​ 25: ನಾಲ್ಕು ದಶಕಗಳ ನಂತರ ದಕ್ಷಿಣ ಕನ್ನಡ (Dakshin Kannada) ಲೋಕಸಭೆ ಕ್ಷೇತ್ರದಿಂದ ಹೊಸ ಮುಖಗಳು ಕಣಕ್ಕೆ ಇಳಿದಿದ್ದು, ಪ್ರಭಲ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ (BJP) ಕ್ಯಾಪ್ಟನ್​ ಬ್ರಿಜೇಶ್ ಚೌಟಾ (Captain Brijesh Chowta) ಮತ್ತು ಕಾಂಗ್ರೆಸ್ (Congress) ​ನಿಂದ ವಕೀಲ ಆರ್​. ಪದ್ಮರಾಜ (Lawyer r. Padmaraj) ಪ್ರತಿಸ್ಪರ್ಧಿಗಳಾಗಿದ್ದಾರೆ. ​ಪ್ರತಿಭಾರಿಯೂ ಅನುಭವಿ ರಾಜಕೀಯ ನಾಯಕರ ವಾಗ್ಯುದ್ದಕ್ಕೆ ಸಾಕ್ಷಿಯಾಗುತ್ತಿದ್ದ ಚುನಾವಣೆ, ಅಭಿವೃದ್ಧಿಯ ಮಾತುಗಳಿಗೆ ಸಾಕ್ಷಿಯಾಗಿದೆ.

1980ರ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ನಿಂದ ಕಣಕ್ಕೆ ಇಳಿದಿದ್ದ ಬಿ.ಜನಾರ್ದನ ಪೂಜಾರಿ ಅವರು ಜನತಾ ಪಕ್ಷದ ಕರಂಬಳ್ಳಿ ಸಂಜೀವ ಶೆಟ್ಟಿ ಅವರನ್ನು ಸೋಲಿಸಿ, ಸಂಸದರಾಗಿ ಆಯ್ಕೆಯಾದರು. ಇದಕ್ಕೂ ಮುನ್ನ 1977ರ ಚುನಾವಣೆಯಲ್ಲಿ ಜನತಾ ಪಕ್ಷದ ಎ.ಕೆ.ಸುಬ್ಬಯ್ಯ ಅವರನ್ನು ಸೋಲಿಸುವ ಮೂಲಕ ಬಿ.ಜನಾರ್ದನ ಪೂಜಾರಿ ಮೊದಲು ಬಾರಿಗೆ ಸಂಸತ್ತಿಗೆ ಆಯ್ಕೆಯಾದರು.

ಬಿಜೆಪಿ ಪ್ರವೇಶ

1984ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಮಂಗಳೂರು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತು. ಕಾಂಗ್ರೆಸ್‌ನಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದ ಬಿ.ಜನಾರ್ದನ ಪೂಜಾರಿ 1,19,399 ಮತಗಳ ಅಂತರದಿಂದ ಬಿಜೆಪಿಯ ಕೆ.ರಾಮ ಭಟ್ ಅವರನ್ನು ಸೋಲಿಸಿದರು.

ಇದನ್ನೂ ಓದಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು

1989ರ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿ ಬಿ.ಜನಾರ್ದನ ಪೂಜಾರಿ ವಿರುದ್ಧ ವಿ.ಧನಂಜಯ ಕುಮಾರ್ ಅವರನ್ನು ಕಣಕ್ಕಿಳಿಸಿತು. ಈ ಚುನಾವಣೆಯಲ್ಲೂ ಬಿಜೆಪಿ ಸೋತರೂ ಮತಗಳಿಕೆಯನ್ನು ಹೆಚ್ಚಿಸಿಕೊಂಡಿತು. ಬಿ.ಜನಾರ್ದನ ಪೂಜಾರಿ ಅವರು ಬಿಜೆಪಿ ಅಭ್ಯರ್ಥಿಯನ್ನು 91,157 ಮತಗಳ ಅಂತರದಿಂದ ಸೋಲಿಸಿದರು.

ಗೇಮ್​ ಚೇಂಜಿಂಗ್​ ಕ್ಷಣ

1991ರ ಚುನಾವಣೆಯಲ್ಲಿ ಬಿಜೆಪಿ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಮುಖಾಂತರ ಕಾಂಗ್ರೆಸ್​ ಭದ್ರಕೋಟೆಯನ್ನು ಛಿದ್ರ ಮಾಡಿ, ಬಾವುಟ ಹಾರಿಸಿತು. ಅಂದಿನಿಂದ ಇಲ್ಲಿಯವರೆಗೂ ಕಾಂಗ್ರೆಸ್​​ ಈ ಕ್ಷೇತ್ರವನ್ನು ಮರಳಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಚುನಾವಣೆಯಲ್ಲಿ ವಿ.ಧನಂಜಯ ಕುಮಾರ್ ಅವರು ಬಿ.ಜನಾರ್ದನ ಪೂಜಾರಿ ಅವರನ್ನು 35,005 ಮತಗಳ ಅಂತರದಿಂದ ಸೋಲಿಸಿದರು.

1990 ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕೆ.ಅಡ್ವಾಣಿಯವರು ನಡೆಸಿದ ರಾಮ ರಥ ಯಾತ್ರೆಯು, ಕರಾವಳಿ ಭಾಗದ ರಾಜಕೀಯ ದಿಕ್ಕನ್ನೇ ಬದಲಿಸಿತು. 1991-92ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮುರಳಿ ಮನೋಹರ ಜೋಶಿ ನಡೆಸಿದ ‘ಏಕತಾ ಯಾತ್ರೆ’ ನಂತರ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿತು.

ಇದರ ಬೆನ್ನಲ್ಲೇ 1996 ಮತ್ತು 1998ರ ಚುನಾವಣೆಯಲ್ಲಿ ವಿ.ಧನಂಜಯ ಕುಮಾರ್ ಅವರು ಬಿ.ಜನಾರ್ದನ ಪೂಜಾರಿ ಮತ್ತೊಮ್ಮೆ ಪೂಜಾರಿ ಅವರನ್ನು ಸೋಲಿಸಿದರು. ಕಾಂಗ್ರೆಸ್ ಸತತ ಮೂರು ಚುನಾವಣೆಗಳಲ್ಲಿ (1991, 1996, ಮತ್ತು 1998) ಸೋತ ಮೇಲೆ, ತನ್ನ ಅಭ್ಯರ್ಥಿಯನ್ನು ಬದಲಾಯಿಸಿತು. 1999 ರ ಚುನಾವಣೆಯಲ್ಲಿ ವಿ.ಧನಂಜಯ ಕುಮಾರ್ ವಿರುದ್ಧ ಮತ್ತೊಬ್ಬ ಅನುಭವಿ ರಾಜಕಾರಣಿ ಎಂ. ವೀರಪ್ಪ ಮೊಯ್ಲಿ ಅವರನ್ನು ಕಣಕ್ಕಿಳಿಸಿತು. ಆದರೂ ಕೂಡ ಕಾಂಗ್ರೆಸ್​ ಸೋಲು ಕಂಡಿತು.

1999ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಡಿಮೆ ಮತಗಳ ಅಂತರದಿಂದ ಗೆಲವು ಸಾಧಿಸಿತು. ಹೀಗಾಗಿ ಬಿಜೆಪಿ 2004ರಲ್ಲಿ ಡಿ.ವಿ.ಸದಾನಂದಗೌಡರನ್ನು ಕಣಕ್ಕಿಳಿಸಿತು. ಸದಾನಂದ ಗೌಡ ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ವೀರಪ್ಪ ಮೊಯ್ಲಿ ಅವರನ್ನು 33,415 ಮತಗಳ ಅಂತರದಿಂದ ಸೋಲಿಸಿದರು.

2009 ರಲ್ಲಿ ಕ್ಷೇತ್ರಗಳ ವಿಂಗಡಣೆಯಾಯಿತು. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿದ್ದ ಕೊಡಗನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು. ನಂತರ ನಡೆದ ಚುನಾವಣೆಗಳಲ್ಲೂ ಬಿಜೆಪಿಯೇ ಜಯಭೇರಿ ಬಾರಿಸಿದೆ. ಈ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ನಡೆಯಲಿರುವ ಚುನಾವಣೆಗೆ ಎರಡೂ ಪಕ್ಷಗಳು ಹೊಸ ಮುಖಗಳನ್ನು ಕಣಕ್ಕಿಳಿಸಿವೆ. ಇಬ್ಬರು ಅಭ್ಯರ್ಥಿಗಳು ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Mon, 25 March 24

ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ತೆಂಗಿನಕಾಯಿಯಲ್ಲಿ ದೀಪ ಹಚ್ಚುವುದರ ಮಹತ್ವವೇನು? ವಿಡಿಯೋ ನೋಡಿ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
ವಾರದ ರಾಶಿ ಭವಿಷ್ಯ: ಡಿಸೆಂಬರ್ 2 ರಿಂದ 8ರವರೆಗಿನ 12 ರಾಶಿಗಳ ಭವಿಷ್ಯ
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್
ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?