Digital bus: ಆ ಯುವಕ ದುಬೈ ಸ್ಪರ್ಧೆಯಲ್ಲಿ 50 ಲಕ್ಷ ಗೆದ್ದಿದ್ದಕ್ಕೆ ಗ್ರಾಮೀಣ ಮಕ್ಕಳಿಗೆ ಹವಾನಿಯಂತ್ರಿತ ಬಸ್ನಲ್ಲಿ ಕಂಪ್ಯೂಟರ್ ಪಾಠ ಕೇಳುವ ಭಾಗ್ಯ!
Class on Wheels: ಬಸ್ ಮೂಲಕ ಕಂಪ್ಯೂಟರ್ ಶಿಕ್ಷಣ ನೀಡಬೇಕು ಅನ್ನೋ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ದುಬೈನಲ್ಲಿ ಇರೋ ಹನೀಫ್ ಎಂಬವರಿಗೆ. ದುಬೈನಲ್ಲಿ ಆಯೋಜಿಸಿದ್ದ ಸ್ಪರ್ಧೆಯೊಂದರಲ್ಲಿ 50 ಲಕ್ಷ ರೂಪಾಯಿ ಸಿಕ್ಕರೆ ಏನು ಮಾಡುತ್ತೀರಿ ಅನ್ನೋ ಪ್ರಶ್ನೆಗೆ ಉತ್ತರಿಸೋ ಸ್ಪರ್ಧೆ ಅದಾಗಿತ್ತು. ಹನೀಫ್ ಅವರು ಸ್ಪರ್ಧೆಯಲ್ಲಿ ಈ ಕಾನ್ಸೆಪ್ಟ್ ಇಟ್ಟು ಭಾಗವಹಿಸಿದ್ದರು. ಜನರು ಕೂಡಾ ಇವರ ಕಾನ್ಸೆಪ್ಟ್ ಇಷ್ಟಪಟ್ಟು ಇವರನ್ನು ಸ್ಪರ್ಧೆಯಲ್ಲಿ ಗೆಲ್ಲಿಸಿದ್ದರು.
ಅದು ಮಕ್ಕಳಿಗಾಗಿಯೇ ನಿರ್ಮಿಸಿರೋ ಹೈಟೆಕ್ ಸೌಲಭ್ಯ ಹೊಂದಿರೋ ದುಬಾರಿ ಬಸ್. ಹಾಗಂತ ಆ ಬಸ್ ಮಕ್ಕಳನ್ನು ಕರೆದುಕೊಂಡು ಎಲ್ಲಿಗೂ ಹೋಗೋದಿಲ್ಲ. ಬದಲಾಗಿ ಆ ಬಸ್ ಮಕ್ಕಳನ್ನು ಹುಡುಕಿಕೊಂಡು ಅವರಿದ್ದ ಶಾಲೆಗೆ ಬಂದು ಬಿಡುತ್ತದೆ. ಅರೆ ಇದೇನಿದು ಮಕ್ಕಳಿಗೆ ಅಂತ ಬಸ್ ನಿರ್ಮಿಸಿ ಮಕ್ಕಳನ್ನು ಕರೆದುಕೊಂಡು ಎಲ್ಲಿಗೂ ಹೋಗೋದಿಲ್ಲ ಅಂತ ಅಚ್ಚರಿಯಾಯ್ತಾ? ಅಲ್ಲೇ ಇರೋದು ವಿಶೇಷ… ಅದೇನು ಅಂತ ನೀವೇ ನೋಡಿ. ಕ್ಲಾಸ್ ಆನ್ ವೀಲ್ಸ್ (Class on Wheels) ಅಂತ ಬರೆದಿರೋ ಈ ಬಸ್ ನೋಡಿದ್ರೆ ಇದೊಂದು ಸಾಕ್ಷರತೆಗಾಗಿ ನಿರ್ಮಿಸಿರೋ ಬಸ್ (digital bus) ಅನ್ನೋದು ಗೊತ್ತಾಗುತ್ತೆ. ಹಾಗಂತ ಇದು ಸರ್ಕಾರದ ಯಾವುದೇ ಯೋಜನೆಯ ಫಲವಾಗಿ ಸಿದ್ದವಾಗಿರೋ ಬಸ್ ಅಂತು ಖಂಡಿತಾ ಅಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಹುಟ್ಟಿಕೊಂಡ ಎಂ. ಫ್ರೆಂಡ್ ಎಂಬ ಚಾರಿಟಬಲ್ ಟ್ರಸ್ಟ್ ತಮ್ಮ ದಶಮಾನ ಉತ್ಸವದ ನೆನಪಿಗಾಗಿ ಬಡ ಗ್ರಾಮೀಣ ಮಕ್ಕಳಿಗೆ ನೀಡ್ತಾ ಇರೊ ಕೊಡುಗೆ (M Friends Charitable Trust in Mangaluru).
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವುದಕ್ಕೆ ಈ ಬಸ್ ನಿರ್ಮಾಣ ಮಾಡಿದ್ದಾರೆ. ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಬಸ್ ಒಳಗೆ ಒಂದು ಕ್ಲಾಸ್ ರೂಮನ್ನೇ ನಿರ್ಮಾಣ ಮಾಡಲಾಗಿದ್ದು 32 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಕಂಪ್ಯೂಟರ್ ಕಲಿಯಲು ಅವಕಾಶ ಮಾಡಲಾಗಿದೆ. ಹೀಗಾಗಿ ಒಂದು ಕಂಪ್ಲೀಟ್ ಕಂಪ್ಯೂಟರ್ ಲ್ಯಾಬ್ ಇದರಲ್ಲಿ ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಭಾಗದ ಶಾಲೆಗಳನ್ನು ಗುರುತಿಸಿ ವರ್ಷಕ್ಕೆ 5 ಸಾವಿರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡೋ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ರಶೀದ್ ವಿಟ್ಲ, ಪ್ರಧಾನ ಕಾರ್ಯದರ್ಶಿ, ಎಂ.ಫ್ರೆಂಡ್ ಚಾರಿಟೇಬಲ್ ಟ್ರಸ್ಟ್ ಮಾಹಿತಿ ನೀಡಿದ್ದಾರೆ.
ಇಲ್ಲಿ ಹೀಗೊಂದು ಬಸ್ ಮೂಲಕ ಕಂಪ್ಯೂಟರ್ ಶಿಕ್ಷಣ ನೀಡಬೇಕು ಅನ್ನೋ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ದುಬೈನಲ್ಲಿ ಇರೋ ಹನೀಫ್ ( Mohammed Haneef) ಎಂಬವರಿಗೆ. ದುಬೈನಲ್ಲಿ (dubai) ಆಯೋಜಿಸಿದ್ದ ಸ್ಪರ್ಧೆಯೊಂದರಲ್ಲಿ 50 ಲಕ್ಷ ರೂಪಾಯಿ ಸಿಕ್ಕರೆ ಏನು ಮಾಡುತ್ತೀರಿ ಅನ್ನೋ ಪ್ರಶ್ನೆಗೆ ಉತ್ತರಿಸೋ ಸ್ಪರ್ಧೆ ಅದಾಗಿತ್ತು. ಹನೀಫ್ ಅವರು ಸ್ಪರ್ಧೆಯಲ್ಲಿ ಈ ಕಾನ್ಸೆಪ್ಟ್ ಇಟ್ಟು ಭಾಗವಹಿಸಿದ್ದರು. ಜನರು ಕೂಡಾ ಇವರ ಕಾನ್ಸೆಪ್ಟ್ ಇಷ್ಟಪಟ್ಟು ಇವರನ್ನು ಸ್ಪರ್ಧೆಯಲ್ಲಿ ಗೆಲ್ಲಿಸಿದ್ದರು.
ಹೀಗಾಗಿ ಅದರಲ್ಲಿ ದೊರೆತ 50 ಲಕ್ಷ ರೂಪಾಯಿ ಮೊತ್ತವನ್ನು ಎಂ. ಫ್ರೆಂಡ್ ಮೂಲಕ ಈ ಬಸ್ಗೆ ವಿನಿಯೋಗಿಸಿ ತಾನು ಕಲಿತ ಸರ್ಕಾರಿ ಶಾಲೆಯಿಂದಲೇ ಯೋಜನೆಯನ್ನು ಆರಂಭಿಸಿದ್ದಾರೆ. ಕಂಪ್ಯೂಟರ್ ಶಿಕ್ಷಣಕ್ಕೆ ಅಗತ್ಯವಾಗಿ ಬೇಕಾಗಿರೋ ಲ್ಯಾಪ್ಟಾಪ್, ಇಂಟರ್ನೆಟ್, ಸ್ಕಾನರ್, ಡಿಜಿಟಲ್ ಸ್ಕ್ರೀನ್ ಹೀಗೆ ಪ್ರತಿಯೊಂದು ಕೂಡಾ ಇದರಲ್ಲಿ ಅಳವಡಿಸಿಕೊಳ್ಳಲಾಗಿದೆ. ಇನ್ನು ತಜ್ಞ ಕಂಪ್ಯೂಟರ್ ಶಿಕ್ಷಕಿಯರನ್ನು ನೇಮಿಸಿಕೊಂಡಿದ್ದು, ಅವರ ಮೂಲಕ ಮಕ್ಕಳಿಗೆ ಕಂಪ್ಯೂಟರ್ ಪಾಠ ಮಾಡಲಾಗುತ್ತಿದೆ. ಸ್ಪೀಕರ್ ಯು.ಟಿ. ಖಾದರ್ ನಿನ್ನೆ ಶುಕ್ರವಾರ ಈ ಬಸ್ಗೆ ಮಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಿದ್ದು, ಎಂ. ಫ್ರೆಂಡ್ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಂ. ಫ್ರೆಂಡ್ಸ್ ಹೆಸರಿನ ಈ ವಾಟ್ಸಾಪ್ ಗ್ರೂಪ್ ಸದಸ್ಯರು ಇದೀಗ ಚಾರಿಟಬಲ್ ಟ್ರಸ್ಟ್ ನಿರ್ಮಿಸಿ ಬಡವರಿಗೆ ಸಹಾಯ ಮಾಡ್ತಾ ಇದ್ದಾರೆ. ಅದೆಷ್ಟೋ ಬಡ ಅಶಕ್ತ ಕುಟುಂಬಗಳಿಗೆ ನೆರವಾಗಿರೋ ಈ ಸಂಸ್ಥೆ, ಇದೀಗ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ನೀಡಿ ಕಂಪ್ಯೂಟರ್ ಸಾಕ್ಷರತೆಗೆ ಮುಂದಾಗಿರೋದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ