ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ: ಸಾರ್ವಜನಿಕರ ಗಮನ ಸೆಳೆದ ರಾಜರ ಕಾಲದ ನಾಣ್ಯಗಳು, 150 ಕ್ಕೂ ಹೆಚ್ಚು ದೇಶಗಳ ಕರೆನ್ಸಿ..!

ಇದರಲ್ಲಿ ನೂರೈವತ್ತಕ್ಕೂ ಹೆಚ್ಚು ದೇಶಗಳ ನೋಟುಗಳನ್ನು ಹಾಗೂ ಚಂದ್ರಗುಪ್ತ ಮೌರ್ಯ, ಹೊಯ್ಸಳ, ಕದಂಬ, ಪೇಶ್ವೆಗಳ ಕಾಲದ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

  • ಬಸವರಾಜ್ ದೊಡ್ಮನಿ
  • Published On - 12:54 PM, 7 Mar 2021
ದಾವಣಗೆರೆಯಲ್ಲಿ ನೋಟು, ನಾಣ್ಯಗಳ ಪ್ರದರ್ಶನ: ಸಾರ್ವಜನಿಕರ ಗಮನ ಸೆಳೆದ ರಾಜರ ಕಾಲದ ನಾಣ್ಯಗಳು, 150 ಕ್ಕೂ ಹೆಚ್ಚು ದೇಶಗಳ ಕರೆನ್ಸಿ..!
ಹಳೆ ನೋಟು, ನಾಣ್ಯಗಳ ಪ್ರದರ್ಶನ

ದಾವಣಗೆರೆ: ಡಿಜಿಟಲ್ ಯುಗ ಹಾಗೂ ಡಿಮಾನಿಟೀಷನ್ ಕಾಲದಲ್ಲಿ ಹೊಸಾ ಹೊಸಾ ನೋಟುಗಳು ಬರ್ತಾ ಇದ್ದು, ಹಳೇಯ ನೋಟುಗಳು ಕಣ್ಮರೆಯಾಗುತ್ತಿದೆ. ಇಂದಿನ ಕಾಲದ ಮಕ್ಕಳಿಗೆ ಹಳೆಯ ನೋಟು, ನಾಣ್ಯಗಳ ಪರಿಚಯವೇ ಇಲ್ಲದಂತಾಗಿದೆ. ಅಂತಹ ಮಕ್ಕಳಿಗೆ ರಾಜರ ಕಾಲದ ನ್ಯಾಣ್ಯಗಳಿಂದ ಹಿಡಿದು 150 ಕ್ಕೂ ಹೆಚ್ಚು ದೇಶಗಳ ನೋಟುಗಳನ್ನ ಪ್ರದರ್ಶನದ ಮೂಲಕ ಪರಿಚಯಿಸಲಾಯಿತು. ಅದು ಎಲ್ಲಿ ಅಂತೀರಾ ಈ ಸ್ಟೋರಿ ಓದಿ.

ನಾಣ್ಯ ಹಾಗೂ ನೋಟುಗಳ ಪ್ರದರ್ಶನ
ದಾವಣಗೆರೆಯ ಎಂಸಿಸಿಬಿ ಬ್ಲಾಕ್​ನಲ್ಲಿರುವ ಸಮುದಾಯ ಭವನದಲ್ಲಿ, ರೋಟರಿ ಕ್ಲಬ್ ವತಿಯಿಂದ ಹಳೆಯ ನೋಟು ಹಾಗೂ ನಾಣ್ಯಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಈರಪ್ಪ ಜಿ ಪರಮಶೆಟ್ಟಿ ಎನ್ನುವರು ಸಂಗ್ರಹಿಸಿದ್ದ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಇದರಲ್ಲಿ ನೂರೈವತ್ತಕ್ಕೂ ಹೆಚ್ಚು ದೇಶಗಳ ನೋಟುಗಳನ್ನು ಹಾಗೂ ಚಂದ್ರಗುಪ್ತ ಮೌರ್ಯ, ಹೊಯ್ಸಳ, ಕದಂಬ, ಪೇಶ್ವೆಗಳ ಕಾಲದ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಚಿಕ್ಕ ವಯಸ್ಸಿನಿಂದ ಈ ಹವ್ಯಾಸ
ಅಲ್ಲದೆ 92 ಮಾದರಿಯ ಒಂದು ರೂಪಾಯಿ ನೋಟುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಫ್ಯಾನ್ಸಿ ನಂಬರ್​ಗಳ ನೋಟುಗಳು ಸೇರಿದಂತೆ ಮ್ಯಾಜಿಕ್ ನಂಬರ್​ಗಳನ್ನು‌ ಕೂಡ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದ್ದರು. ಇನ್ನು ಈ ನೋಟು ಹಾಗೂ ನಾಣ್ಯಗಳ ಪ್ರದರ್ಶನ ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು, ಚಿಕ್ಕ ವಯಸ್ಸಿನಿಂದ ಈ ಹವ್ಯಾಸ ಬಂದಿದ್ದು ಎನ್ನುತ್ತಾರೆ ಸಂಗ್ರಹಕಾರರು.


ವಿಧ್ಯಾರ್ಥಿಗಳ ಜೊತೆ ಸಾರ್ವಜನಿಕರು ಆಗಮಿಸಿ ಜ್ಞಾನವನ್ನು ಹೆಚ್ವಿಸಿಕೊಳ್ಳುತ್ತಿದ್ದಾರೆ
ಇನ್ನು ಈ ಸೂರಿನಡಿ ಮಕ್ಕಳಿಗೆ ವಿಶೇಷವಾಗಿ ನೋಟು‌ ನಾಣ್ಯಗಳ ಬಗ್ಗೆ ಅಧ್ಯಾಯನ‌ ನಡೆಸಲು ಈರಣ್ಣರವರಿಂದ ಮಾರ್ಗದರ್ಶನ ನೀಡುತ್ತಿದ್ದು, ಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜ್ಞಾನವನ್ನು ಹೆಚ್ವಿಸಿಕೊಳ್ಳಲು ಸಹಕಾರಿಯಾಗಿತ್ತು. ಇನ್ನು ರಿಸರ್ವ ಬ್ಯಾಂಕ್​ನ ಗವರ್ನರ್​ಗಳ ಅವಧಿಯಲ್ಲಿ ಯಾವ ಯಾವ ನೋಟುಗಳ ಮುದ್ರಣವಾಯ್ತು ಎನ್ನುವುದರ ಬಗ್ಗೆ ಕೂಡ ಮಾಹಿತಿ ‌ನೀಡಿ ನೋಟುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಇದರಿಂದ‌ ವಿಧ್ಯಾರ್ಥಿಗಳು ಪ್ರದರ್ಶನ ಮೇಳದಲ್ಲಿ ಭಾಗವಹಿಸಿ ನೋಟುಗಳ ಬಗ್ಗೆ ಮಾಹಿತಿ ತಿಳಿದು ಜ್ಞಾನವನ್ನು ಹೆಚ್ವಿಸಿಕೊಂಡರು.


ಒಟ್ಟಾರೆಯಾಗಿ ದಾವಣಗೆರೆಯಲ್ಲಿ ರಾಜಾಧಿರಾಜರ ಕಾಲದಿಂದ ಹಿಡಿದು ದೇಶ ವಿದೇಶಗಳ ನೋಟು ಹಾಗೂ ನಾಣ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ವಿಧ್ಯಾರ್ಥಿಗಳ ಜೊತೆ ಸಾರ್ವಜನಿಕರು ಆಗಮಿಸಿ ಜ್ಞಾನವನ್ನು ಹೆಚ್ವಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ದಿನಗಳ ಕಾಲ ಈ ಹಳೇ ನಾಣ್ಯ ನೋಟುಗಳ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ:ಮೊಘಲ್ ಚಕ್ರವರ್ತಿ ಕಮ್ ಬಕ್ಷ್ ಕಾಲದ 10.9 ಗ್ರಾಂ ಚಿನ್ನದ ನಾಣ್ಯ ಹರಾಜಿಗೆ; ಮೂಲ ಬೆಲೆ 45ರಿಂದ 50 ಲಕ್ಷ!