ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಎಡವಟ್ಟು; ಸದ್ಯಸ್ಯರ ಖಾತೆಗೆ ಆರು ಸಾವಿರ ಬದಲಿಗೆ ಆರು ಲಕ್ಷ ರೂಪಾಯಿ ವರ್ಗಾವಣೆ

ಆಯ್ಕೆಯಾದ 45 ಸದಸ್ಯರು ಹಾಗೂ ನಾಮನಿರ್ದೇಶನರಾದ ಐದು ಸದಸ್ಯರು ಸೇರಿದಂತೆ ಒಟ್ಟು 50 ಸದಸ್ಯರಿಗೆ ತಲಾ ಆರು ಲಕ್ಷದಂತೆ ಮೂರು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಹಾಕಿದ್ದಾರೆ. ಮೇ 28 ರಂದು ಆರು ಲಕ್ಷ ರೂ. ಹಾಕಿದ್ದು, ಹೀಗೆ ಲಕ್ಷ ಲಕ್ಷ ಹಣ ಬಂದಿದ್ದು ನೋಡಿ ಸದಸ್ಯರು ಬಿಡಿಸಿಕೊಂಡಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಎಡವಟ್ಟು; ಸದ್ಯಸ್ಯರ ಖಾತೆಗೆ ಆರು ಸಾವಿರ ಬದಲಿಗೆ ಆರು ಲಕ್ಷ ರೂಪಾಯಿ ವರ್ಗಾವಣೆ
ದಾವಣಗೆರೆ ಮಹಾನಗರ ಪಾಲಿಕೆ

ದಾವಣಗೆರೆ: ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಆರು ಸಾವಿರ ರೂಪಾಯಿ ಹಾಕುವ ಬದಲಿಗೆ ಸುಮಾರು ಆರು ಲಕ್ಷ ರೂ. ಹಣವನ್ನು ಹಾಕಿ ಮಹಾನಗರ ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಪ್ರತಿ ತಿಂಗಳ ಪಾಲಿಕೆ ಸದಸ್ಯರಿಗೆ ಆರು ಸಾವಿರ ರೂಪಾಯಿ ಸಹಾಯ ಧನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಆದರೆ ಹಣಕಾಸು ವಿಭಾಗದ ಅಧಿಕಾರಿಗಳು ಆರು ಸಾವಿರ ಬದಲಿಗೆ ಸದಸ್ಯರಿಗೆ ತಲಾ ಆರು ಲಕ್ಷ ರೂ. ಹಣ ಹಾಕಿದ್ದಾರೆ.

ಜನರಿಂದ ಆಯ್ಕೆಯಾದ 45 ಸದಸ್ಯರು ಹಾಗೂ ನಾಮನಿರ್ದೇಶನರಾದ ಐದು ಸದಸ್ಯರು ಸೇರಿದಂತೆ ಒಟ್ಟು 50 ಸದಸ್ಯರಿಗೆ ತಲಾ ಆರು ಲಕ್ಷದಂತೆ ಮೂರು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಹಾಕಿದ್ದಾರೆ. ಮೇ 28 ರಂದು ಆರು ಲಕ್ಷ ರೂ. ಹಾಕಿದ್ದು, ಹೀಗೆ ಲಕ್ಷ ಲಕ್ಷ ಹಣ ಬಂದಿದ್ದು ನೋಡಿ ಸದಸ್ಯರು ಬಿಡಿಸಿಕೊಂಡಿದ್ದಾರೆ.

ನನ್ನ ಖಾತೆ 16 ಲಕ್ಷ ರೂಪಾಯಿ ಜಮಾ ಆಗಿದೆ. ನೋಡಿ ಅಚ್ಚರಿ ಆಗಿತ್ತು. ಇದು ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ತಪ್ಪಿನಿಂದ ಆಗಿದೆ. ಪಾಲಿಕೆ ಸದಸ್ಯರಿಗೆ ಆರು ಸಾವಿರ ರೂಪಾಯಿ ಗೌರವ ಧ‌ನ‌ ನೀಡಲಾಗುತ್ತದೆ‌. ಮೇ 28 ರಂದು ಬ್ಯಾಂಕ್ ಸಿಬ್ಬಂದಿ 6,000 ಅಂತಾ ಹಾಕಬೇಕಿತ್ತು. 6000.00  ಬರೆಯಬೇಕಿತ್ತು. ಇದರ ಬದಲಿಗೆ ಪಾಯಿಂಟ್ ಬಿಟ್ಟು 600000 ಆಗಿ ಬರೆದಿದ್ದಾರೆ. ಹೀಗಾಗಿ ಆರು ಸಾವಿರ ಬದಲಿಗೆ ಲಕ್ಷ ರೂಪಾಯಿ ಆಗಿದೆ.

ಈ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿ ತಪ್ಪಿನಿಂದಾಗಿ ಇದು ಆಗಿದೆ. ಆದರೆ ಈಗ ಸರಿಯಾಗಿದೆ. ಕೆಲವರು ಹಣ ಬಳಸಿಕೊಂಡಿದ್ದಾರೆ. ಸಿಬ್ಬಂದಿ ತಪ್ಪಿನಿಂದ ತಮ್ಮ ಖಾತೆಗೆ ಹಣ ಬಂದಿದೆ. ಆ ಹಣವನ್ನು ಅವರು ವಾಪಸ್ ಸಹ ಪಡೆದಿದ್ದಾರೆ. ಆದರೆ ಐಟಿ ವಿವರ ನೀಡುವಾಗ ಇದು ತೊಂದರೆ ಆಗಲಿದೆ. ಇದಕ್ಕಾಗಿ ಬ್ಯಾಂಕಿನಿಂದ ಅಧಿಕೃತ ಪತ್ರ ಸಹ ಪಡೆಯಬೇಕಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ

ಗಂಭೀರಾವಸ್ಥೆಗೆ ತಲುಪಿದ ಕೊರೊನಾ ಸೋಂಕಿತರ ಜೀವ ಉಳಿಸಿದ 2ಡಿಜಿ ಔಷಧ; ಬೆಂಗಳೂರಿನಲ್ಲಿ ಮೂರಕ್ಕೆ ಮೂರು ಪ್ರಯೋಗವೂ ಯಶಸ್ವಿ

ಲಸಿಕೆ ಪೂರೈಕೆ, ಸಂಪರ್ಕ ಮತ್ತು ಮೂಲಸೌಕರ್ಯ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚೆ: ಹೈಕೋರ್ಟ್​ಗಳಿಗೆ ಸಿಜೆ ರಮಣ ಭರವಸೆ

(Davanagere Corporation Officials have deposited six lakhs of rupees instead of six thousand)