ದಾವಣಗೆರೆ: ಅಜ್ಜಿ ಹಬ್ಬದ ವಿಶೇಷತೆ ಏನು? ಮಳೆಗಾಲದಲ್ಲಿಯೇ ಈ ಹಬ್ಬ ಆಚರಿಸಲು ಅನೇಕ ಕಾರಣಗಳಿವೆ

ಆಷಾಢ ತಿಂಗಳಲ್ಲಿ ಬರುವ ನಾಲ್ಕು ಶುಕ್ರವಾರಗಳು ಮುಗಿದ ಬಳಿಕ ಅಜ್ಜಿ ಹಬ್ಬ ಮಾಡಲಾಗುತ್ತದೆ. ಅಜ್ಜಿ ಹಬ್ಬ ಅಂದರೆ ಸಣ್ಣ ಮಕ್ಕಳ ಮೈಮೇಲೆ ಗುಳ್ಳೆಗಳು ಆಗುವುದು, ಜ್ವರ ಬರುವುದು ಅಥವಾ ಅಮ್ಮಾ ಬಂದಿದ್ದರೆ ಅವುಗಳನ್ನು ದೂರ ಮಾಡಲು ಮಾಡುವ ಆಚರಣೆಯಾಗಿದೆ.

ದಾವಣಗೆರೆ: ಅಜ್ಜಿ ಹಬ್ಬದ ವಿಶೇಷತೆ ಏನು? ಮಳೆಗಾಲದಲ್ಲಿಯೇ ಈ ಹಬ್ಬ ಆಚರಿಸಲು ಅನೇಕ ಕಾರಣಗಳಿವೆ
ಅಜ್ಜಿ ಹಬ್ಬ
Follow us
TV9 Web
| Updated By: preethi shettigar

Updated on: Aug 01, 2021 | 8:37 AM

ದಾವಣಗೆರೆ: ಕಾಲಕಾಲಕ್ಕೆ ಕೆಲವೊಂದಿಷ್ಟು ಹಬ್ಬಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ಭಾರತದಲ್ಲಿ ಪ್ರತಿಯೊಂದು ಆಚರಣೆಗೂ ಒಂದೊಂದು ಹಬ್ಬ ಜೀವಂತಿಕೆ ಪಡೆದಿದೆ. ಈಗ ಮಳೆಗಾಲವಾಗಿರುವುದರಿಂದ ಸಾಮಾನ್ಯವಾಗಿ ನದಿಗೆ ಪೂಜೆ ಮಾಡಿ ಮಳೆಯಿಲ್ಲದ ಕಡೆ ಮಳೆಯಾಗುವಂತೆ, ಮಳೆ ಹೆಚ್ಚಾಗಿರುವ ಕಡೆ ಮಳೆರಾಯನ ಆರ್ಭಟ ತಗ್ಗುವಂತೆ ಬೇಡಿಕೊಳ್ಳುತ್ತಾರೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ವಿಶೇಷ ರೀತಿಯ ಹಬ್ಬದ ಆಚರಣೆಯೊಂದು ಎಲ್ಲರ ಗಮನ ಸೆಳೆದಿದೆ.

ದಾವಣಗೆರೆ ನಗರದ ನಿಟ್ಟುವಳ್ಳಿ ದುರ್ಗಾಂಭಿಕಾ ದೇವಸ್ಥಾನದ ಆವರಣದಲ್ಲಿ ಅಜ್ಜಿ ಹಬ್ಬವನ್ನು ಆಚರಿಸಲಾಗುತ್ತದೆ. ಆಷಾಢ ತಿಂಗಳಲ್ಲಿ ಬರುವ ಶುಕ್ರವಾರ ಈ ಹಬ್ಬಕ್ಕೆ ಮುಖ್ಯವಾಗಿದ್ದು, ಈ ತಿಂಗಳಲ್ಲಿ ಬರುವ ನಾಲ್ಕು ಶುಕ್ರವಾರಗಳು ಮುಗಿದ ಬಳಿಕ ಅಜ್ಜಿ ಹಬ್ಬ ಮಾಡಲಾಗುತ್ತದೆ. ಅಜ್ಜಿ ಹಬ್ಬ ಅಂದರೆ ಸಣ್ಣ ಮಕ್ಕಳ ಮೈಮೇಲೆ ಗುಳ್ಳೆಗಳು ಆಗುವುದು, ಜ್ವರ ಬರುವುದು ಅಥವಾ ಅಮ್ಮಾ ಬಂದಿದ್ದರೆ ಅವುಗಳನ್ನು ದೂರ ಮಾಡಲು ಮಾಡುವ ಆಚರಣೆಯಾಗಿದೆ.

ಮೈಮೇಲೆ ಗುಳ್ಳೆಗಳಾದರೆ ಆಸ್ಪತ್ರೆಗೂ ತೊರಿಸುತ್ತಾರೆ. ಆದರೆ ಇದಕ್ಕೆ ಆದರದ್ದೇ ಆದ ಕೆಲ ಧಾರ್ಮಿಕ ಆಚರಣೆಗಳು ಸಹ ಇವೆ. ಅವುಗಳನ್ನು ಕೂಡ ಮಾಡಬೇಕು. ಇಂತಹ ಕಾಯಿಲೆಗಳು ಸಣ್ಣ ಮಕ್ಕಳಿಗೆ ಬಾರದೇ ಇರಲಿ. ದೇವಿ ಇದನ್ನು ತಪ್ಪಿಸಲಿ ಎಂದು ಈ ಅಜ್ಜಿ ಹಬ್ಬವನ್ನು ಮಾಡಲಾಗುತ್ತದೆ ಎಂದು ದುರ್ಗಾಂಭಿಕಾ ದೇವಿಸ್ಥಾನದ ಧರ್ಮದರ್ಶಿ ಜಯಣ್ಣ ತಿಳಿಸಿದ್ದಾರೆ.

ajji habba

ವಿಶೇಷ ಪೂಜೆ ಸಲ್ಲಿಸುತ್ತಿರುವ ದೃಶ್ಯ

ದೇವಸ್ಥಾನದ ಆವರಣದಲ್ಲಿಯೇ ಒಂದು ದೇವಿ ಮೂರ್ತಿ ಮಾಡಿ ಇಡಲಾಗಿರುತ್ತದೆ. ಇದಕ್ಕೆ ತಾಯಂದಿರು ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಿಹಿ ಪದಾರ್ಥ ನೈವದ್ಯೆ ಮಾಡಲು ಬಾಳೆ ಎಲೆಯಲ್ಲಿ ಅದನ್ನು ತರುತ್ತಾರೆ. ಹೀಗೆ ಬಂದವರು ದೇವಿಗೆ ಪ್ರದಕ್ಷಣೆ ಹಾಕಬೇಕು. 20 ಸುತ್ತ ದಾರ ಸುತ್ತು ಹಾಕಬೇಕು. ಹೀಗೆ ಮಾಡುವುದರಿಂದ ಮಕ್ಕಳಿಗೆ ಕಾಯಿಲೆ ಬರಲ್ಲ ಎಂಬುದು ನಂಬಿಕೆ ಎಂದು ಗೃಹಿಣಿ ಶಾರದಮ್ಮ ಹೇಳಿದ್ದಾರೆ.

durgambika

ದುರ್ಗಾಂಭಿಕಾ ದೇವಸ್ಥಾನ

ಭಾರತದಲ್ಲಿ ಪ್ರತಿಯೊಂದು ಕಾಲಕ್ಕೂ ಒಂದೊಂದು ಹಬ್ಬಗಳಿಗೆ. ಮಳೆಗಾಲದಲ್ಲಿ ಮಕ್ಕಳಿಗೆ ರೋಗ ಬರಬಾರದು ಎನ್ನುವುದಕ್ಕೆ ಈ ರೀತಿ ಹಬ್ಬ ಮಾಡಲಾಗುತ್ತಿದೆ. ವಿಶೇಷವಾಗಿ ಮಧ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂತಹ ಅಜ್ಜಿ ಹಬ್ಬ ಪ್ರಸಿದ್ಧವಾಗಿದೆ. ಇದು ಜನರ ನಂಬಿಕೆಯಾದರೂ, ತಮ್ಮ ಮಕ್ಕಳ ಆರೋಗ್ಯ ಚೆನ್ನಾಗಿರಲಿ ಎಂಬುವುದು ಅವರ ಮುಖ್ಯ ಉದ್ದೇಶ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: Guru Purnima 2021: ಗುರು ಪೂರ್ಣಿಮೆ ವಿಶೇಷ ದಿನದ ಮಹತ್ವ, ಆಚರಣೆಯ ಇತಿಹಾಸ ಇಳಿಯಿರಿ

Vinayaka Chaturthi Today: ವಿನಾಯಕ ಚತುರ್ಥಿ ಶುಭ ದಿನದ ಮುಹೂರ್ತ, ಆಚರಣೆ ಮತ್ತು ಪೂಜಾ ವಿಧಿ-ವಿಧಾನ