ಕೋತಿಗಳಿಗೂ ತಟ್ಟಿದ ಪ್ರವಾಹ ಭೀತಿ: ಆಹಾರಕ್ಕಾಗಿ ಪರದಾಡಿದ ನೂರಕ್ಕೂ ಹೆಚ್ಚು ಕೋತಿಗಳು
ನಿರಂತರ ಮಳೆ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆಯಾಗಿದ್ದು, ಕಟಾವಿಗೆ ಬಂದ ಬಾಳೆ ನೆಲಕಚ್ಚಿರುವಂತಹ ಘಟನೆ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನಡೆದಿದೆ. ಅಪಾರ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮಗಳ ಮದುವೆ ಕನಸು ಕಂಡಿದ್ದ ರೈತನ ಕನಸನ್ನು ರಕ್ಕಸ ಮಳೆ ನುಚ್ಚು ನೂರು ಮಾಡಿದೆ.
ದಾವಣಗೆರೆ: ಕೋತಿಗಳಿಗೂ ಪ್ರವಾಹ ಭೀತಿ ತಟ್ಟಿದ್ದು, ಆಹಾರಕ್ಕಾಗಿ ನೂರಕ್ಕೂ ಹೆಚ್ಚು ಕೋತಿಗಳು ಪರದಾಡಿರುವಂತಹ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ಬಳಿ ನಡೆದಿದೆ. ಆಹಾರ ಸಿಗದೇ ಕೋತಿಗಳು ಮರದ ಸೊಪ್ಪು ತಿನ್ನುತ್ತಿವೆ. ನಾಲ್ಕು ದಿನಗಳಿಂದ ಸುರಿದ ಮಳೆಗೆ ಪಿಕ್ ಅಪ್ ಡ್ಯಾಂಗೆ ನೀರು ಹರಿದು ಬಂದಿದ್ದು, ಆಹಾರಕ್ಕಾಗಿ ಸುತ್ತಾಡುತ್ತಿದ್ದ ಕೋತಿಗಳು ಮರದಲ್ಲಿ ಆಸರೆ ಪಡೆದುಕೊಂಡಿವೆ. ಭಾರೀ ಪ್ರಮಾಣದ ನೀರು ನೋಡಿ ಭಯಗೊಂಡು ಕೋತಿಗಳು ಮರವೆರಿ ಕುಳಿತಿವೆ. ಗ್ರಾಮದ ಕಡೆಗೂ ಹೋಗದೇ ಇತ್ತ ಹಳ್ಳ ಸಹ ದಾಟದೇ ಸಂಕಷ್ಟದಲ್ಲಿ ಸಿಲುಕಿವೆ.
ಮಗಳ ಮದುವೆ ಕನಸು ಕಂಡಿದ್ದ ರೈತನ ಕನಸಗಿ ಕೊಳ್ಳಿಯಿಟ್ಟ ರಕ್ಕಸ ಮಳೆ
ಗದಗ: ನಿರಂತರ ಮಳೆ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆಯಾಗಿದ್ದು, ಕಟಾವಿಗೆ ಬಂದ ಬಾಳೆ ನೆಲಕಚ್ಚಿರುವಂತಹ ಘಟನೆ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನಡೆದಿದೆ. ಅಪಾರ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮಗಳ ಮದುವೆ ಕನಸು ಕಂಡಿದ್ದ ರೈತನ ಕನಸನ್ನು ರಕ್ಕಸ ಮಳೆ ನುಚ್ಚು ನೂರು ಮಾಡಿದೆ. ಬಾಳೆ ಬೆಳೆ ಸಂಪೂರ್ಣ ಹಾಳಾಗಿದ್ದು ರೈತನ ಗೋಳಾಟ ಹೇಳತಿರದು. ನಾಗಾವಿ ಗ್ರಾಮದ ನಿಂಗಪ್ಪ ಕಲಕೇರಿ, ಫಕೀರಪ್ಪ ಕುರಿ ಎಂಬ ರೈತರ ಬಾಳೆ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ತೋಟ ಮಾಡಿದ್ದು, ಸುಮಾರು ನಾಲ್ಕು ಲಕ್ಷ ಲಾಭದ ನಿರೀಕ್ಷೆ ಹೊಂದಿದ್ದ ರೈತ, ಲಾಭದಲ್ಲಿ ಮಗಳ ಮದುವೆ ಮಾಡಿ ಉಳಿದ ಹಣ ಸಾಲ ತೀರಿಸುವ ಕನಸು ಕಂಡಿದ್ದ. ಮಳೆಗೆ ರೈತನ ಕನಸು ಮಣ್ಣು ಪಾಲಾಗಿದ್ದು, ರೈತನ ತೋಟಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಉಡಾಫೆ ಉತ್ತರ ನೀಡಿದ್ದಾರೆ. ರೈತರಿಗೆ ಧೈರ್ಯ ಹೇಳಬೇಕಿದ್ದ ಅಧಿಕಾರಿಗಳು ಬಾಳೆ ನೆಲಕ್ಕೆ ಬಿದ್ರೆ ಏನ್ ಮಾಡೋದು ಎಂದು ಬೇಜವಾಬ್ದಾರಿ ವರ್ತನೆ ಮಾಡಿದ್ದಾರೆ. ಅಧಿಕಾರಿಗಳ ವರ್ತನೆಗೆ ರೈತರ ಆಕ್ರೋಶ ವ್ಯಕ್ತಪಡಿಸಿದ್ದು, ಕಷ್ಟ ಪಟ್ಟ ರೈತನ ಬದುಕು ಇಷ್ಟೇನಾ ಅಂತ ಗೋಳಾಡುವಂತ್ತಾಗಿದೆ.
ಒಂದೇ ದಿನಕ್ಕೆ 5 ಟಿಎಂಸಿ ನೀರು ಹೆಚ್ಚಳ
ವಿಜಯನಗರ: ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ 5 ಟಿಎಂಸಿ ನೀರು ಹರಿದು ಬಂದಿದೆ. ನಿನ್ನೆ 14 ಟಿಎಂಸಿ ಇದ್ದ ನೀರು ಇಂದು 19.766 ಟಿಎಂಸಿಗಡ ಎರಿಕೆಯಾಗಿದೆ. ಒಳಹರಿವಿನಲ್ಲೂ ಕೂಡ ಹೆಚ್ಚಳವಾಗಿದ್ದು, ಸದ್ಯ 72592 ಕ್ಯೂಸೆಕ್ ನೀರು ಒಳಹರಿವು ಇದೆ. ಕಳೆದ 24 ತಾಸಿನಲ್ಲಿ 61189 ಕ್ಯೂಸೆಕ್ ನೀರು ಒಳಹರಿವು ಉಂಟಾಗಿದೆ. ತುಂಗಭದ್ರಾ ಜಲಾಶಯ 100.855 ಟಿಎಂಸಿ ಸಾಮರ್ಥ್ಯ ಹೊಂದಿದೆ. ಸದ್ಯ 19.766 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಹೊತ್ತಿಗೆ 6.952 ಟಿಎಂಸಿ ನೀರು ಸಂಗ್ರಹವಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.