ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆ ದುರ್ಗಾಂಭಿಕಾ ಜಾತ್ರೆ (Davangere Durgambhika Devi local fair) ಕೂಡಾ ಒಂದು. ಇಂತಹ ಜಾತ್ರೆಯ ಗಮ್ಮತ್ತೆ ಬೇರೆ. ದೇವಿಗೆ ಅಧಿಕೃತವಾಗಿ ಕೋಣ ಬಲಿಯಾದ ಬಳಿಕ ಇಡೀ ನಗರದಲ್ಲಿ ಮಸಾಲೆ ವಾಸನೆ ಶುರುವಾಗುತ್ತಿದೆ. ಇನ್ನೊಂದು ಕಡೆ ಇಲ್ಲಿ ದೇವಿಗೆ ಹರಕೆ ತೀರಿಸುವ ಪ್ರಸಿದ್ಧ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಪ್ರತಿಯೊಬ್ಬರ ಮನೆ ಮುಂದೆ ಒಂದು ಕುರಿ ಕಂಡು ಬತುತ್ತಿದೆ. ಇಲ್ಲಿದೆ ನೋಡಿ ನಾನ್ ವೆಜ್ ಜಾತ್ರೆಯ ಸ್ಟೋರಿ. ನೂರಾರು ಜನ ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಕಿಲೋ ಮೀಟರ್ ಗಂಟಲೇ ಕ್ಯೂ ಇದೆ. ಇನ್ನೂ ಅಸಲಿ ಜಾತ್ರೆಯೇ ಆರಂಭವಾಗಿಲ್ಲ. ಜನ ದೇವಿ ದರ್ಶನಕ್ಕೆ ನಾ ಮುಂದು ನೀ ಮುಂದು ಎನ್ನುತ್ತಿದ್ದರು. ಪ್ರಾಣಿ ಬಲಿ ನಿಷೇಧ ಅಂತಾ ಜಿಲ್ಲಾಡಳಿತ ಪ್ರತಿ ವರ್ಷ ತನ್ನ ಕೆಲ್ಸಾ ತಾ ಮಾಡುತ್ತದೆ. ಆದ್ರೆ ದೇವಿಗೆ ಸಲ್ಲಬೇಕಾದ ಗೌರವ ಭಕ್ತರು ಸಲ್ಲಿಸುತ್ತಲೇ ಇರುತ್ತಾರೆ (non veg village fair).
ಇದು ಪ್ರಸಿದ್ಧ ದಾವಣಗೆರೆ ದುರ್ಗಾಂಭಿಕಾ ದೇವಿಯ ಜಾತ್ರೆಯ ಮಹಿಮೆ. ಬೆಳಿಗ್ಗೆ ಎರಡು ಗಂಟೆವರೆಗೂ ಸಾವಿರಾರು ಮಕ್ಕಳು ಮಹಿಳೆಯರು ಸೇರಿ ದೇವಿಗೆ ಹಕರೆ ತೀರಿಸಿದರು. ಬೆಣ್ಣೆ ನಗರಿ ದಾವಣಗೆರೆ ಇನ್ನೊಂದು ವಾರ ಬೆಣ್ಣೆ ವಾಸನೆಗಿಂತ ಮಟನ್ ಮಸಾಲೆ ವಾಸನೆ ಬರುತ್ತದೆ. ಕಾರಣ ಇಲ್ಲಿ ನೋಡಿ ಬಹುತೇಕ ಮನೆಗಳ ಮುಂದೆ ಕುರಿಗಳು ಬಂದಿವೆ. ಇವು ದೇವಿಗೆ ಅರ್ಪಿಸಲು ತಂದ ಕುರಿಗಳು.
ಮುಂದಿನ ಮಂಗಳವಾರ ದೊಡ್ಡ ಜಾತ್ರೆ ದೇವಿಗೆ ಕೊಣದ ಅರ್ಪಣೆ ಆಗುತ್ತದೆ. ಇದಾದ ಬಳಿಕ ಮರು ದಿನ ಬುಧವಾದ ಕುರಿ ಗಳನ್ನ ದೇವಿಗೆ ಅರ್ಪಿಸುತ್ತಾರೆ. ಆಗ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಕುರಿ ಕೋಳಿ ತಂದು ಅಡುಗೆ ಮಾಡುತ್ತಾರೆ. ಒಂದು ತಿಂಗಳ ಕಾಲ ನಿರಂತರವಾಗಿ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ. ವಿಶೇಷವಾಗಿ ದಾವಣಗೆರೆಯ ಹೆಣ್ಣು ಮಕ್ಕಳು ಇಲ್ಲಿಯೇ ಇದ್ದರೂ ಎರಡು ವರ್ಷಕ್ಕೊಮ್ಮೆ ಬಂದು ಹರಕೆ ತೀರಿಸುವುದು ಕಡ್ಡಾಯ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ ಎಂದ್ರೆ ತಪ್ಪಾಗಲಿಕ್ಕಿಲ್ಲ.
ಕನ್ನಡದ ಬಹುತೇಕ ಚಲನ ಚಿತ್ರಗಳಲ್ಲಿ ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆಯ ಪ್ರಸ್ತಾಪ ಇದ್ದೆ ಇರುತ್ತದೆ. ಮೇಲಾಗಿ ಇಲ್ಲಿ ಸಂಗೀತ, ನಾಟಕ, ವಿವಿಧ ಸ್ಪರ್ಧೆ ಹೀಗೆ ಇಡೀ ನಗರವೇ ಒಂದು ತಿಂಗಳ ಕಾಲ ನಿರಂತರವಾಗಿ ಸಂಭ್ರಮದಲ್ಲಿ ಇರುತ್ತದೆ. ಸಸ್ಯಾಹಾರಿಗಳು ಸೋಮವಾರ ದೇವಿಗೆ ಏಡಿ ಅರ್ಪಿಸಿದರೇ, ಮಾಂಸಾಹಾರಿಗಳು ಬುಧವಾರ ಎಡೆ ಅರ್ಪಿಸುತ್ತಾರೆ. ಹೀಗಾಗಿ ಲಕ್ಷಾಂತರ ಕುರಿಗಳನ್ನ ಇಲ್ಲಿ ಬಲಿ ಕೊಡಲಾಗುತ್ತಿದ್ದು ನಿಜಕ್ಕೂ ಇದು ನಾನ್ ವೆಜ್ ಜಾತ್ರೆ ಅಂತಲೇ ಪ್ರಸಿದ್ಧಿ ಪಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ