ಪ್ರೀತಿಸಿದ್ದೂ ಆಯ್ತು, ಮದ್ವೆಯೂ ಆಯ್ತು: ಆದ್ರೆ, ಪೋಷಕರೇ ಇವ್ರಿಗೆ ವಿಲನ್​!

ಪ್ರೀತಿಸಿದ್ದೂ ಆಯ್ತು, ಮದ್ವೆಯೂ ಆಯ್ತು: ಆದ್ರೆ, ಪೋಷಕರೇ ಇವ್ರಿಗೆ ವಿಲನ್​!

ದಾವಣಗೆರೆ: ಆತ ಜೆಸಿಬಿ ಚಾಲಕ, ಅವ್ಳು ಪೊಲೀಸಪ್ಪನ ಮಗಳು. ಆದ್ರೆ, ಪ್ರೀತಿ ಅವ್ರಿಬ್ಬರ ನಡುವೆ ಯಾವುತ್ತೂ ಅಡ್ಡಿಯಾಗಲೇ ಇಲ್ಲ. ಆದ್ರೆ, ಅವರಿಬ್ಬರ ಪ್ರೀತಿಯ ಮನೆಯವ್ರ ಪ್ರತಿಷ್ಠೆಯ ಅಡ್ಡಿಯಾಗ್ತಿದೆ. ಹೀಗಾಗಿ ಪ್ರೇಮಿಗಳು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಅವ್ಳಿಗೆ ಇವನೇ ಎಲ್ಲ. ಇವ್ನಿಗೆ ಅವನ್ನನ್ನ ಬಿಟ್ರೆ ಬೇರೆ ಏನೂ ಬೇಕಿಲ್ಲ. ಒಲವೆ ನಮ್ಮ ಬದುಕು. ಜತೆಯಾಗಿರೋಣ ಬಾಳಿನುದ್ದಕ್ಕೂ ಅಂತ ಕೈ ಹಿಡಿದು ನಡೆಯುತ್ತಿರೋ ಪ್ರೇಮಿಗಳ ಪಾಡು ಅಷ್ಟಿಷ್ಟಲ್ಲ. ಯಾಕಂದ್ರೆ, ಪ್ರೀತಿಸಿದ್ದಾಯ್ತು. ಮದ್ವೆ ಆಗಿದ್ದೂ ಆಯ್ತು. ಆದ್ರೆ, ಪೋಷಕರೇ ಇವ್ರಿಗೆ ವಿಲನ್​ ಆಗ್ಬಿಟ್ಟಿದ್ದಾರೆ.

ಹರಿಹರ ಪಟ್ಟಣದ ಈಕೆ ಪವಿತ್ರಾ. ಈಕೆ ತಂದೆ ಪೊಲೀಸ್​ ಹೆಡ್​ ಕಾನ್ಸ್​ಟೆಬಲ್. ಇನ್ನು ಖಂಡೇಕೆರೆ ಗ್ರಾಮದ ಈತ ಕೊಟ್ರೇಶ್. ಜೆಸಿಬಿ ಚಾಲಕನಾಗಿದ್ದ ಈ ಕೊಟ್ರೇಶ್​​​, ಪವಿತ್ರಾ ಅವ್ರ ಎದುರು ಮನೆಯಲ್ಲೇ ಬಾಡಿಗೆಗೆ ಇದ್ದ. ಮನೆ ಎದುರು ಬದುರಾದ್ರೂ ಹೃದಯದಲ್ಲಿ ಬೇಗ ಹತ್ತಿರ ಆಗ್ಬಿಟ್ರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತ್ಸೋಕೆ ಶುರುಮಾಡಿದ್ರು. ಆದ್ರೆ, ಪವಿತ್ರಾ ಮನೆಯವ್ರು ಇದಕ್ಕೆ ಒಪ್ಪಲಿಲ್ಲ. ನಂತರ, ಇಬ್ಬರೂ ಮನೆ ಬಿಟ್ಹೋಗಿ ಬೆಂಗಳೂರಲ್ಲಿ ಮದ್ವೆಯಾಗಿದ್ದಾರೆ. ಆದ್ರೆ, ಪವಿತ್ರಾ ಮನೆಯವ್ರಿಗೆ ಈ ವಿಷ್ಯ ಗೊತ್ತಾಗಿದ್ದು, ಇಬ್ಬರನ್ನೂ ದೂರ ಮಾಡಲು ನೋಡ್ತಿದ್ದಾರಂತೆ.

ಪೊಲೀಸ್ ಮೊರೆ ಹೋದ ಜೋಡಿ:
ಪವಿತ್ರ ತಂದೆ ಪೊಲೀಸ್ ಇಲಾಖೆಯಲ್ಲಿ ಇರೋದ್ರಿಂದ ಕೊಟ್ರೇಶ್​​ಗೆ ಜೀವ ಬೆದರಿಕೆ ಹಾಕ್ತಿದ್ದಾರಂತೆ. ಇನ್ನು, ಕೊಟ್ರೇಶ್​​​​​​ ತಾಯಿ, ಮಗನ ಪ್ರೀತಿಯನ್ನ ಒಪ್ಪಿಕೊಂಡಿದ್ದಾರೆ. ಪವಿತ್ರಳನ್ನ ಮಗಳಂತೆ ನೋಡಿಕೊಳ್ತೇನೆ ಅಂತಿದ್ದಾರೆ. ಆದ್ರೆ, ಮಗನಿಗೆ ಜೀವ ಬೆದರಿಕೆ ಹಾಕ್ತಿರೋದು ಅವ್ರಿಗೆ ಭಯತರಿಸಿದೆ. ಇಬ್ಬರ ಜಾತಿ ಬೇರೆ ಬೇರೆ. ಇದ್ರ ಜತೆಗೆ ಅಂತಸ್ತಿನ ವಿಷ್ಯ ಇಟ್ಕೊಂಡು ಯುವತಿ ಮನೆಯವ್ರು ಕಿರುಕುಳ ಕೊಡ್ತಿದ್ದಾರೆ. ಹೀಗಾಗಿ, ಈ ಜೋಡಿ, ರಕ್ಷಣೆಗಾಗಿ ಪೊಲೀಸ್​​​​​ ಇಲಾಖೆಯ ಮೊರೆ ಹೋಗಿದೆ. ಪೊಲೀಸರು ಇವ್ರಿಗೆ ಹೇಗೆ ರಕ್ಷಣೆ ಕೊಡ್ತಾರೆ ನೋಡ್ಬೇಕು.

Click on your DTH Provider to Add TV9 Kannada