ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ (MLA Renukacharya) ಜೀವ ಬೆದರಿಕೆ ಹಾಕಿದ್ದು, ಹಾಗಾಗಿ ರಕ್ಷಣೆ ನೀಡುವಂತೆ ಕೋರಿ ಭ್ರಷ್ಟಾಚಾರ ವಿರೋಧಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಎಸ್ಪಿ ರಿಷ್ಯಂತ್ಗೆ ದೂರು ನೀಡಿದ್ದಾರೆ. ಹೊನ್ನಾಳಿ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಕಳಪೆಯಾಗಿದ್ದು, ಇದನ್ನು ಆರೋಪಿಸಿದ್ದಕ್ಕೆ ಶಾಸಕರು ಗರಂ ಆಗಿದ್ದಾರೆ. ಜೊತೆಗೆ ಎಚ್ಚರದಿಂದ ಇರಬೇಕೆಂದು ವಾರ್ನಿಂಗ್ ಮಾಡಿದ್ದಾರೆ ಎಂದರು. ಭ್ರಷ್ಟಾಚಾರ ವಿರೋಧಿ ವೇದಿಕೆ ವಿರುದ್ದ ರೇಣುಕಾಚಾರ್ಯ ಅವಹೇಳನ ಕಾರಿ ಹೇಳಿಕೆ ನೀಡಿದ್ದರು. ರೇಣುಕಾಚಾರ್ಯ ಕ್ಷೇತ್ರದಲ್ಲಿನಡೆಯುವ ಕಾಮಗಾರಿ ಕಳಪೆಯಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ಆರೋಪ ಮಾಡಿತ್ತು. ಹೀಗಾಗಿ ಮಾಧ್ಯಮಗಳ ಎದುರು ಭ್ರಷ್ಟಾಚಾರ ವಿರೋಧಿ ವೇದಿಕೆ ವಸೂಲಿಗೆ ನಿಂತಿದ್ದಾರೆ. ಎಚ್ಚರದಿಂದ ಇರಬೇಕು ಎಂದು ಅವಹೇಳನ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ದೂರು ನೀಡಲಾಗಿದೆ ಎಂದು ಹನುಮಂತಪ್ಪ ಸೊರಟೂರು ತಿಳಿಸಿದರು.
ಭ್ರಷ್ಟಾಚಾರ ನಿರ್ಮೂಲನೆ ಅಲ್ಲ, ಸುಲಿಗೆ ಮಾಡುವ ಸಂಘಟನೆ
ಭ್ರಷ್ಟಾಚಾರ ವಿರೋಧಿ ವೇದಿಕೆ ಎಂದು ಮಾಡಿಕೊಂಡು ಜನರಿಂದ ಮತ್ತು ಅಧಿಕಾರಿಗಳಿಂದ ಸುಲಿಗೆ ಮಾಡಲಾಗುತ್ತಿದೆ. ಅದು ಭ್ರಷ್ಟಾಚಾರ ನಿರ್ಮೂಲನೆ ಅಲ್ಲ, ಸುಲಿಗೆ ಮಾಡುವ ಸಂಘಟನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿ ಕಾರಿದ್ದರು. ಇನ್ನು ಹೊನ್ನಾಳಿ ಕ್ಷೇತ್ರಕ್ಕೆ ಮೂರು ಸಾವಿರ ಕೋಟಿ ರೂ. ಅನುದಾನ ಎಲ್ಲಿ ಬಳಕೆ ಮಾಡಲಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆಯ ಗುರುಪಾದಯ್ಯ ಮಠದ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಖಡಕ್ ಉತ್ತರ ನೀಡಿದ ರೇಣುಕಾಚಾರ್ಯ ನನ್ನ ವಿರುದ್ಧ ಮಾತನಾಡಿದ್ರೆ ಹುಷಾರ್. ನಾನು ಹೊನ್ನಾಳಿ ಕ್ಷೇತ್ರದ ಜನತೆಗೆ ಲೆಕ್ಕ ನೀಡುತ್ತೇನೆ. ನನ್ನನ್ನು ಪ್ರಶ್ನೆ ಮಾಡಲು ನೀ ಯಾರು ಎಂದು ವಾಗ್ದಾಳಿ ಮಾಡಿದ್ದರು.
ಮಹಿಳೆಯರ ಜೊತೆ ಬಿಂದಾಸ್ ಸ್ಟೆಪ್ಸ್ ಹಾಕಿದ ಎಂ.ಪಿ ರೇಣುಕಾಚಾರ್ಯ
ಜಿಲ್ಲೆಯ ಹೊನ್ನಾಳಿ ಪಟ್ಟಣದ ಕೋಟೆಯ ಶ್ರೀ ಶಂಕರ ಮಠದಲ್ಲಿ ದೀಪಾವಳಿ ಬಲಿಪಾಡ್ಯದ ನಿಮಿತ್ತ ನಿನ್ನೆ (ಅ. 26) ಗೋ ಪೂಜೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಈ ವೇಳೆ ಮಹಿಳೆಯರ ರೇಣುಕಾಚಾರ್ಯ ಜೊತೆ ಬಿಂದಾಸ್ ಸ್ಟೆಪ್ಸ್ ಕೂಡ ಹಾಕಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.