ಇಟ್ಟಿಗೆ ಲಾರಿಗೆ ಹಿಂಬದಿಯಿಂದ ಬೈಕ್​ ಡಿಕ್ಕಿ: ಯುವಕನ ಸಾವು

ದಾವಣಗೆರೆ ಜಿಲ್ಲೆಯ ಹೊರವಲಯದ ಹಳೇಕುಂದವಾಡದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಅಪಘಾತ ನಡೆದಿದ್ದು, ಹರಿಹರ ಕಡೆಯಿಂದ ದಾವಣಗೆರೆಗೆ ಬರುತ್ತಿದ್ದ ಚೌಡೇಶ್ ಅಲಿಯಾಸ್ ಮಂಜುನಾಥ್(19) ಮೃತಪಟ್ಟ ಬೈಕ್ ಸವಾರ.

  • TV9 Web Team
  • Published On - 13:07 PM, 2 Mar 2021
ಇಟ್ಟಿಗೆ ಲಾರಿಗೆ ಹಿಂಬದಿಯಿಂದ ಬೈಕ್​ ಡಿಕ್ಕಿ: ಯುವಕನ ಸಾವು
ಚೌಡೇಶ್ ಅಲಿಯಾಸ್ ಮಂಜುನಾಥ್(19) ಮೃತ ಯುವಕ

ದಾವಣಗೆರೆ: ಮುಂದೆ ಹೋಗುತ್ತಿದ್ದ ಇಟ್ಟಿಗೆ ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್​ ಡಿಕ್ಕಿ ಹೊಡೆದಿದ್ದು, ಬೈಕ್​ನ ಹಿಂದೆ ಬರುತ್ತಿದ್ದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊರವಲಯದ ಹಳೇಕುಂದವಾಡದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಅಪಘಾತ ನಡೆದಿದ್ದು, ಹರಿಹರ ಕಡೆಯಿಂದ ದಾವಣಗೆರೆಗೆ ಬರುತ್ತಿದ್ದ ಚೌಡೇಶ್ ಅಲಿಯಾಸ್ ಮಂಜುನಾಥ್(19) ಮೃತಪಟ್ಟ ಬೈಕ್ ಸವಾರ. ಈ ಸಂಬಂಧ ದಾವಣಗೆರೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಿನಲ್ಲಿ ನೀರಿನ ಟ್ಯಾಂಕ್​ಗೆ ಬೈಕ್​ ಡಿಕ್ಕಿ:
ನೀರಿನ ಟ್ಯಾಂಕ್‌ಗೆ ಬೈಕ್ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವಿಗೀಡಾದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಲ್ಕೋಡ ಗ್ರಾಮದ ಬಳಿ ನಡೆದಿದೆ. ದೇವರಾಜ(20), ಆಂಜನೇಯ(18) ಮೃತಪಟ್ಟಿದ್ದು, ಆಲ್ಕೋಡ ಗ್ರಾಮದ ನಿವಾಸಿಗಳಾಗಿದ್ದಾರೆ. ಸದ್ಯ ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

raichur death

ಬೈಕ್​ ಸವಾರರಿಬ್ಬರ ಮರಣ

Road Accident | ತೆಲಂಗಾಣ, ಬಿಹಾರ, ಧಾರವಾಡದಲ್ಲಿ ಪ್ರತ್ಯೇಕ ಅಪಘಾತ, ಏರುತ್ತಲಿದೆ ಸಾವಿನ ಸಂಖ್ಯೆ