ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಫರ್ಧೆ; 127 ಕೆಜಿ ಭಾರ ಎತ್ತಿ ಗಮನ ಸೆಳೆದ ದಾವಣಗೆರೆ ಯುವಕ

53 ಕೆಜಿ ಜೂನಿಯರ್ ವಿಭಾಗದಲ್ಲಿ ದಾವಣಗೆರೆ ಬೀರಲಿಂಗೇಶ್ವರ ಜಿಮ್​ನ ಸುನೀಲ್ ಅವರು 127 ಕೆಜಿ ಬಾರ ಎತ್ತುವ ಮೂಲಕ ಗಮನ ಸೆಳೆದರು. ವಿಶೇಷವಾಗಿ ಈ ವಿಭಾಗದಲ್ಲಿ ಇಷ್ಟು ಭಾರ ಎತ್ತಿ ಸುನೀಲ್ ಒಂದು ದಾಖಲೆ ಸೃಷ್ಟಿ ಮಾಡಿದ್ದಾರೆ.

  • ಬಸವರಾಜ್ ದೊಡ್ಡಮನಿ
  • Published On - 6:55 AM, 12 Apr 2021
ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಫರ್ಧೆ; 127 ಕೆಜಿ ಭಾರ ಎತ್ತಿ ಗಮನ ಸೆಳೆದ ದಾವಣಗೆರೆ ಯುವಕ
127 ಕೆಜಿ ಭಾರ ಎತ್ತಿ ಗಮನ ಸೆಳೆದ ದಾವಣಗೆರೆ ಯುವಕ

ದಾವಣಗೆರೆ : ಸಾಮಾನ್ಯವಾಗಿ ವೈಟ್ ಲಿಫ್ಟರ್​ಗಳು ನಿಂತು ಭಾರವಾದ ಪ್ಲೇಟ್​ಗಳನ್ನು ಎತ್ತುತ್ತಾರೆ. ಆದರೆ ಬೆಂಚ್ ಪ್ರೆಸ್​ನಲ್ಲಿ ಮಲಗಿ ಭಾರವಾದ ಪ್ಲೇಟ್​ಗಳನ್ನು ಎದೆಯ ಮಟ್ಟಕ್ಕೆ ತಂದು ಮತ್ತೆ ಮೇಲೆ ಇಡಬೇಕು ಆ ರೀತಿ ಮಾಡುವುದನ್ನು ಬೆಂಚ್ ಸ್ಪರ್ಧೆ ಎನ್ನುವರು. ಈ ಸ್ಪರ್ಧೆ ನಿಜಕ್ಕೂ ರೊಮಾಂಚನಕಾರಿ ಆಗಿದ್ದು, ಸೊಂಟಕ್ಕೊಂದು ಬಿಗಿಯಾದ ಬೇಲ್ಟ್ ಕಟ್ಟಿ ಬ್ರೆಂಚ್​ಅನ್ನು ಬಿಗಿಯಾಗಿ ಎತ್ತಲು ಕೈಗೆ ಪೌಡರ್ ಹಚ್ಚಿಕೊಳ್ಳುವ ಕ್ರೀಡಾಪಟು, ಆಸನದ ಮೇಲೆ ಮಲಗಿ ಭಾರವಾದ ಪ್ಲೇಟ್​ಗಳನ್ನು ಎದೆಯ ಮಟ್ಟಕ್ಕೆ ಎತ್ತುತ್ತಾರೆ.

ದಾವಣಗೆರೆಯ ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ಕರ್ನಾಟಕ ಪವರ್‌ ಲಿಫ್ಟಿಂಗ್ ಅಸೋಸಿಯೇಷನ್‌ ಸಹಯೋಗದಲ್ಲಿ ಎಪ್ರಿಲ್ 10 ಮತ್ತು 11 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಸಲಾಯಿತು. 53 ಕೆಜಿ ಜೂನಿಯರ್ ವಿಭಾಗದಲ್ಲಿ ದಾವಣಗೆರೆ ಬೀರಲಿಂಗೇಶ್ವರ ಜಿಮ್​ನ ಸುನೀಲ್ ಅವರು 127 ಕೆಜಿ ಬಾರ ಎತ್ತುವ ಮೂಲಕ ಗಮನ ಸೆಳೆದರು. ವಿಶೇಷವಾಗಿ ಈ ವಿಭಾಗದಲ್ಲಿ ಇಷ್ಟು ಭಾರ ಎತ್ತಿ ಸುನೀಲ್ ಒಂದು ದಾಖಲೆ ಸೃಷ್ಟಿ ಮಾಡಿದ್ದಾರೆ.

ಬಾಲಕರ, ಕಿರಿಯರ, ಹಿರಿಯರ, ಪುರುಷರ, ಮಹಿಳೆಯರ ಬ್ರೆಂಚ್‌ ಪ್ರಸ್‌ ಸ್ಪರ್ಧೆಯನ್ನು ನಡೆಸಲಾಯಿತು. ವಯಸ್ಸಿಗೆ ಅನುಗುಣವಾಗಿ ಸ್ಪರ್ಧೆ ನಡೆದಿದ್ದು, ಎಂಭತ್ತರಿಂದ ಇನ್ನೂರ ಐವತ್ತೈದು ಕೆಜಿ ಭಾರವುಳ್ಳ ಪ್ಲೇಟ್​ಗಳನ್ನು ಎತ್ತುವ ಕ್ರೀಡಾಪಟುಗಳನ್ನು ನೋಡುವ ವೇಳೆ ಪ್ರೇಕ್ಷಕರು ಆಶ್ಚರ್ಯ ಚಕಿತರಾದರು.

ವಿಶ್ವ ದಾಖಲೆ ನಿರ್ಮಿಸಿದ ಬಿ.ಹೆಚ್‌ ಭಾರತಿ, 8 ಬಾರಿ ರಾಷ್ಟ್ರ ಮಟ್ಟದ ಚಿನ್ನದ ಪದಕ ವಿಜೇತ ಲೋಗನಾಥ್‌, ರಜ್ವಿ ಖಾನ್‌, ಪಾಲಿಕೆ ಸದಸ್ಯ ಜೆ.ಎನ್‌. ಶ್ರೀನಿವಾಸ್‌, ಕಾಮನ್‌ವೆಲ್ತ್‌ ಚಾಂಪಿಯನ್‌ಗಳಾದ ವಿಶ್ವನಾಥ್‌ ಗಾಣಿಗ, ಪ್ರದೀಪ್‌ ಆಚಾರ್ಯ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.

bench press competition

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು

ಮಂಗಳೂರಿನ ಅಂತರಾಷ್ಟ್ರೀಯ ಕೆಟಗಿರಿ1 ಸತೀಶ್ ಕುಮಾರ್ ಕುದ್ರೋಳಿ, ರಾಷ್ಟ್ರೀಯ ಕ್ರೀಡಾಪಟು ಎಂ.ಮಹೇಶ್ವರಯ್ಯ, ಏಕಲವ್ಯ ಪ್ರಶಸ್ತಿ ವಿಜೇತ ದಾದಾಪೀರ್, ಮಂಗಳೂರಿನ ಜಯರಾಂ, ಉಮೇಶ್ ಗಟ್ಟಿ,ಎಂ.ಎಸ್ ಷಣ್ಮುಗ, ಕೆ.ಕುಮಾರ್ ದಾವಣಗೆರೆ, ಕೆ.ಗಂಗಪ್ಪ, ಹರಿಹರದ ವೀರಭದ್ರಪ್ಪ ರೆಫರಿಯಾಗಿ ಭಾಗವಹಿಸಿದ್ದರು. ಇನ್ನು ರಾಜ್ಯದ ಮಂಗಳೂರು, ಕುಂದಾಪುರ, ಉಡುಪಿ, ಶಿವಮೊಗ್ಗ, ಬೆಂಗಳೂರು, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಕಾರವಾರ ಜಿಲ್ಲೆಗಳಿಂದ200 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ರಾಜ್ಯ ಮಟ್ಟದ ಬ್ರೆಂಚ್‌ ಪ್ರಸ್‌ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಅರ್ಹತೆಯ ಆಧಾರದಲ್ಲಿ ಗೋವಾದಲ್ಲಿ ಎಪ್ರಿಲ್ 27 ರಿಂದ 30ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಪುರುಷರು ಮತ್ತು ಮಹಿಳೆಯರು ಒಟ್ಟು 12 ಜನರನ್ನು ಆಯ್ಕೆ ಮಾಡಲಾಯಿತು. ಕೊರೊನಾ ಮಾರ್ಗಸೂಚಿ ಅನ್ವಯ ಎರಡು ವೇದಿಕೆಯಲ್ಲಿ ಸ್ಪರ್ಧೆ ನಡೆಯಿತು.

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಶಾಸಕ ಎಸ್‌.ಎ. ರವೀಂದ್ರನಾಥ್‌, ಮೇಯರ್‌ ಎಸ್‌.ಟಿ. ವೀರೇಶ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್‌, ಮಾಜಿ ಸದಸ್ಯ ದೋಣಿ ನಿಂಗಪ್ಪ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಪಿ.ಬಿ. ಪ್ರಕಾಶ್‌, ಸತೀಶ್‌ಕುಮಾರ್‌ ಕುದ್ರೋಳಿ, ಕೆ.ಎನ್‌. ಶೈಲಜಾ, ಪಿ.ಜಿ. ಪಾಂಡುರಂಗ, ಗ್ರೂಪ್‌ ಆಫ್‌ ಐರನ್‌ ಗೇಮ್ಸ್‌ ಕಾರ್ಯದರ್ಶಿ ರಜ್ವಿ ಖಾನ್‌ ಉಪಸ್ಥಿತರಿದ್ದರು.

ಇದನ್ನೂ ಓದಿ: 

ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದಲ್ಲಿ ರಾಜ್ಯಮಟ್ಟದ ಹಿರಿಯರ ಕುಸ್ತಿ ಆರಂಭ

ಫೈನಲ್​ನಲ್ಲಿ ಸೋಲು: ಆತ್ಮಹತ್ಯೆಗೆ ಶರಣಾದ ದಂಗಲ್​ ಕುಸ್ತಿಪಟು ಗೀತಾ- ಬಬಿತಾ ಫೋಗಾಟ್ ಸೋದರಸಂಬಂಧಿ ರಿತಿಕಾ ಫೋಗಾಟ್

(State level bench press competition held in Davanagere)