AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

150 ವರ್ಷಗಳ ಪುರಾತನ ಹಳ್ಳಿಯ ಜನ ಇನ್ನೂ ಬಸ್ಸನ್ನೇ ನೋಡಿಲ್ಲ; ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು

ಅತ್ಯಂತ ಶ್ರೀಮಂತ ತಾಲೂಕು ಎಂದು ಪ್ರಸಿದ್ಧವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಅಬ್ಬಿಗೇರೆ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಹದಗೆಟ್ಟ ರಸ್ತೆ. ಹೀಗಾಗಿ ಸ್ಥಿತಿವಂತರು ತಮ್ಮ ಮಕ್ಕಳನ್ನು ಬೈಕ್​ನಲ್ಲಿ ಶಾಲೆಗೆ ಬಿಟ್ಟು ಬರುತ್ತಾರೆ. ಉಳಿದವರು ಮಕ್ಕಳನ್ನು ಶಾಲೆಯೇ ಬಿಡಿಸಿದ್ದಾರೆ.

150 ವರ್ಷಗಳ ಪುರಾತನ ಹಳ್ಳಿಯ ಜನ ಇನ್ನೂ ಬಸ್ಸನ್ನೇ ನೋಡಿಲ್ಲ; ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು
ಚನ್ನಗಿರಿ ತಾಲೂಕಿನ ಚಿಕ್ಕ ಅಬ್ಬಿಗೇರಿ ಗ್ರಾಮಸ್ಥರಿಂದ ಹೋರಾಟ
TV9 Web
| Edited By: |

Updated on:Nov 16, 2021 | 1:44 PM

Share

ದಾವಣಗೆರೆ: ಜಿಲ್ಲೆಯ ಚಿಕ್ಕಅಬ್ಬಿಗೇರೆ ಗ್ರಾಮ ಸ್ಥಾಪನೆ ಆಗಿ ಬರೋಬರಿ 150 ವರ್ಷವಾಗಿದೆ. ಇಲ್ಲಿ ಇರುವ ಬಹುತೇಕರು ದಲಿತರು. ಗ್ರಾಮದಲ್ಲಿ ಕೇವಲ ಐದನೇ ತರಗತಿ ವರೆಗೆ ಶಾಲೆ. ಇಷ್ಟಕ್ಕೆ ಬಹುತೇಕ ಮಕ್ಕಳು ಶಾಲೆಯಿಂದ ದೂರ ಆಗುವುದು ಇಲ್ಲಿ ಮಾಮೂಲು. ಬ್ರಿಟಿಷ್ ದಾಖಲೆಗಳಲ್ಲಿ ಈ ಗ್ರಾಮದ ಹೆಸರಿದೆ. ಮೇಲಾಗಿ ಅಡಿಕೆ, ಭತ್ತ, ಮಾವು ಬೆಳೆಯ ಸಮೃದ್ಧ ಪ್ರದೇಶ. ಇಂತಹ ಗ್ರಾಮ ಇನ್ನೂ ಬಸ್ಸನ್ನೇ (Bus facility) ಕಂಡಿಲ್ಲ ಎನ್ನುವುದೇ ವಿಚಿತ್ರ. ಬಸ್ಸು ಬರಬೇಕು ಅಂದರೆ ರಸ್ತೆ ಬೇಕು. ಆದರೆ ಆಸ್ತಿ ಮಾಡಬೇಕು ಎನ್ನುವುದು ಕೆಲ ಜಮೀನ್ದಾರರ ತರಕಾರರು. ಹೀಗೆ ನೊಂದ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದಿದ್ದಾರೆ.

ಅತ್ಯಂತ ಶ್ರೀಮಂತ ತಾಲೂಕು ಎಂದು ಪ್ರಸಿದ್ಧವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಅಬ್ಬಿಗೇರೆ ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಹದಗೆಟ್ಟ ರಸ್ತೆ. ಹೀಗಾಗಿ ಸ್ಥಿತಿವಂತರು ತಮ್ಮ ಮಕ್ಕಳನ್ನು ಬೈಕ್​ನಲ್ಲಿ ಶಾಲೆಗೆ ಬಿಟ್ಟು ಬರುತ್ತಾರೆ. ಉಳಿದವರು ಮಕ್ಕಳನ್ನು ಶಾಲೆಯೇ ಬಿಡಿಸಿದ್ದಾರೆ. ಗ್ರಾಮದಲ್ಲಿ ಇರುವುದು ಐದನೇ ಕ್ಲಾಸ್​ವರೆಗೆ ಮಾತ್ರ ಎನ್ನುವುದು ವಿಪರ್ಯಾಸ.

ಮಕ್ಕಳು ರಸ್ತೆ ಬೇಕು ರಸ್ತೆ ಬೇಕು ಎಂದು ಕೂಗಾಡುತ್ತಿದ್ದಾರೆ. ಈಗ ಕೂಗು ಕೇವಲ ಗ್ರಾಮಕ್ಕೆ ಮಾತ್ರ ಕೇಳಿಸುತ್ತಿದೆ. ಎಂಟು ನೂರು ಜನ ಮತದಾರರಿದ್ದಾರೆ. 125 ಮನೆಗಳಿಗೆ. ಬಹುತೇಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗ್ರಾಮ ಸ್ಥಾಪನೆ ಆಗಿ 150 ವರ್ಷವಾಗಿದೆ. ಬ್ರಿಟಿಷ್ ಕಾಲದಲ್ಲಿ ನಂತರ ಮೈಸೂರು ಸಂಸ್ಥಾನದ ದಾಖಲೆಗಳಲ್ಲಿ ಗ್ರಾಮದ ಹೆಸರಿದೆ. ಗ್ರಾಮಕ್ಕೆ ದಾರಿ ಇಲ್ಲಾ ಅಂದರೆ ಯಾವ ನ್ಯಾಯ. ಗರ್ಭೀಣಿಯರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದು ಅಂದರೆ ದೊಡ್ಡ ನರಕ. ಎಷ್ಟೋ ಜನ ಇಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಚುನಾವಣೆ ಬಂದಾಗ ಮಾತ್ರ ಮತದಾನ ಮಾಡಿಸಿಕೊಂಡು ಸುಮ್ಮನಾಗುವ ಜನಪ್ರತಿನಿಧಿಗಳಿಗೆ ಬಡವರ ಕಷ್ಟ ಅರ್ಥವಾಗಲ್ಲ. ಇಷ್ಟು ವರ್ಷದ ಬಳಿಕ ಈಗ ರಸ್ತೆ ಬೇಕು, ಬಸ್ಸು ಬೇಕು, ಹಿರಿಯ ಪ್ರಾಥಮಿಕ ಶಾಲೆ ಬೇಕು ಎಂದು ಮಕ್ಕಳ ಸಹಿತ ಗ್ರಾಮಸ್ಥರು ನಿತ್ಯ ಹೋರಾಟ ಶುರು ಮಾಡಿದ್ದೇವೆ ಎಂದು ಸ್ಥಳೀರು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿ ಬಹುತೇಕರು ಅಡಿಕೆ, ಮಾವು ಭತ್ತ ಬೆಳೆಯುತ್ತಾರೆ. ಆರ್ಥಿಕವಾಗಿ ಸ್ಥಿತಿವಂತರು. ಮೇಲಾಗಿ ಶೇಖಡಾ 98 ರಷ್ಟು ದಲಿತರೇ ಇಲ್ಲಿ ವಾಸ ಇರುವುದು. ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇರುವುದು ಮಾತ್ರ ಸ್ಪಷ್ಟವಾಗಿಲ್ಲ. ಹೀಗಾಗಿ ಕೆಲ ಜಮೀನ್ದಾರರು ಉದ್ದೇಶ ಪೂರ್ವಕವಾಗಿ ರಸ್ತೆ ಮಾಡಲು ಬಿಡುತ್ತಿಲ್ಲ. ಅವರೆಲ್ಲಾ ಸಂತೆ ಬೆನ್ನೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಜೊತೆಗೆ ನಿರಂತರವಾಗಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಆದರೂ ಕೂಡಾ ಅದನ್ನ ರದ್ದು ಮಾಡಲಾಗಿದೆ. ಜಮೀನ್ದಾರರಿಗೆ ಪರಿಹಾರ ಬೇಕಿದ್ದರೂ ಕೊಡಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಕುಡಿಯುವ ನೀರು, ವಾಸಕ್ಕೆ ಮನೆ, ಉತ್ತಮ ಬೆಳೆ, ಮನುಷ್ಯ ಬದುಕಲು ಬೇಕಾದ ಬಹುತೇಕ ಸೌಲಭ್ಯಗಳು ಈ ಗ್ರಾಮದಲ್ಲಿವೆ. ಆದರೆ ಶಿಕ್ಷಣ, ಆರೋಗ್ಯ, ಸಾರಿಗೆ ಬಗ್ಗೆ ಮಾತ್ರ ಫಲಿತಾಂಶ ಶೂನ್ಯವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: ಓಡಾಡಲು ಬಸ್​ ಇಲ್ಲ.. ಕೆಲಸಗಳು ಆಗ್ತಿಲ್ಲ: ಗ್ರಾಮೀಣ ಪ್ರದೇಶದವರ ಗೋಳು ಕೇಳೋರು ಯಾರು?

ಕೊಪ್ಪಳದಲ್ಲಿ ಬಸ್​ಗಳಿಲ್ಲದೆ ಪರದಾಟ; ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

Published On - 1:28 pm, Tue, 16 November 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್