AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯೂ ಹಾವಳಿ: 5 ಸಾವಿರ ಗಡಿ ದಾಟಿದ ಕೇಸ್

ಬರದಿಂದ ಕಂಗೆಟ್ಟಿದ್ದ ಜನ್ರ ಮೊಗದಲ್ಲಿ ಮಳೆ ಮಂದಹಾಸ ಮೂಡಿದೆ. ಮಳೆ ಖುಷಿ ತಂದ ಹೊತ್ತಲ್ಲೇ ಜನರ ಆರೋಗ್ಯವೂ ಕೈಕೊಡುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಡಂಗುರ ಸಾರಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ 1,230 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 5 ಸಾವಿರ ಡೆಂಗ್ಯೂ ಕೇಸ್ ಗಡಿ ದಾಟಿದೆ.

ಮಳೆಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯೂ ಹಾವಳಿ: 5 ಸಾವಿರ ಗಡಿ ದಾಟಿದ ಕೇಸ್
ಮಳೆಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯೂ ಹಾವಳಿ: 5 ಸಾವಿರ ಗಡಿ ದಾಟಿದ ಕೇಸ್
ವಿನಯ್​ ಕಾಶಪ್ಪನವರ್​
| Edited By: |

Updated on:Jun 22, 2024 | 6:41 PM

Share

ಬೆಂಗಳೂರು, ಜೂನ್​ 22: ಕ್ಷಣ ಕ್ಷಣಕ್ಕೂ ರಾಜ್ಯದ ಹವಮಾನ ಬದಲಾವಣೆ ಆಗುತ್ತಿದೆ. ಹೀಗಾಗಿ ಜನರು ಪುಲ್ ಹೈರಾಣಾಗಿದ್ದಾರೆ. ಇನ್ನು ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಘೀ/ಡೆಂಗ್ಯೂ ಹಾವಳಿ ಕೂಡ ಶುರುವಾಗಿದ್ದು, ರಾಜ್ಯದಲ್ಲಿ ಡೆಂಗ್ಯೂ (Dengue) ಕೇಸ್​ 5 ಸಾವಿರ ಗಡಿ ದಾಟಿದೆ. ಈ ಕುರಿತಾಗಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಾಹಿತಿ ನೀಡಿದೆ. ರಾಜ್ಯದಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 5187 ಡೆಂಗ್ಯೂ ಕೇಸ್ ಪತ್ತೆ ಆಗಿವೆ.

ಸದ್ಯ ಡೆಂಗ್ಯೂ ಹಾವಳಿಗೆ ಜನರು ಹೈರಾಣಾಗಿದ್ದು, ರಾಜಧಾನಿಯಲ್ಲಿ ಜ್ವರ, ನೆಗಡಿ ಹೆಚ್ಚಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ 1,230 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಜನವರಿಯಿಂದ 3975 ಕೇಸ್ ಪತ್ತೆ ಆಗಿದ್ದು, ಜೂನ್ ತಿಂಗಳಿನಿಂದ ಕೇಸ್​ಗಳ ಸಂಖ್ಯೆ ಏರಿಕೆ ಕಂಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಘೀ, ಚಿಕನ್ ಗುನ್ಯಾ ಹಾವಳಿ; ವಾರಕ್ಕೆ 80 ಕೇಸ್ ಪತ್ತೆ

ರಾಜ್ಯದಲ್ಲಿ 37144 ಜನರ ರಕ್ತ ಮಾದರಿ ಪಡೆಯಲಾಗಿದೆ. ಇದರಲ್ಲಿ 3957 ಜನರಿಗೆ ಪಾಸಿಟಿವ್ ಪತ್ತೆ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4063 ಜನರ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗಿದ್ದು, ಈ ಪೈಕಿ 1230 ಜನರಲ್ಲಿ ಡೆಂಗ್ಯೂ ಪಾಸಿಟಿವ್​ ಕಾಣಿಸಿಕೊಂಡಿವೆ. ಇಲ್ಲಿಯವರೆಗೆ ಒಟ್ಟು 5187 ಡೆಂಘಿ ಕೇಸ್ ಪತ್ತೆ ಆಗಿವೆ.

ಡೆಂಗ್ಯೂ ಕೇಸ್​​ಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಹಾವೇರಿ ಇದ್ದು, 389 ಪ್ರಕರಣ ಪತ್ತೆಯಾಗಿದೆ. 12 ಜನ್ರಿಗೆ ಚಿಕಿತ್ಸೆ ಮುಂದುವರೆದಿದೆ. ಮೈಸೂರಿನಲ್ಲಿ 358, ಚಿಕ್ಕಮಗಳೂರಲ್ಲಿ 346, ಕಲಬುರಗಿಯಲ್ಲಿ 153 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಅತೀ ಕಡಿಮೆ ಅಂದ್ರೆ, ಯಾದಗಿರಿಯಲ್ಲಿ ಕೇವಲ 4 ಪ್ರಕರಣಗಳು ಮಾತ್ರ ಕಂಡು ಬಂದಿವೆ.

ಡೆಂಗ್ಯೂ ಕಂಟ್ರೋಲ್​ಗೆ ಆರೋಗ್ಯ ಇಲಾಖೆ ಕ್ರಮ

ಇನ್ನು, ಡೆಂಗ್ಯೂ ಕಂಟ್ರೋಲ್​ಗೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ನೀಡದಂತೆ ಸ್ವಚ್ಛತೆ ಕಾಪಾಡಿಕೊಳ್ಳಿ. ಸಂಜೆ, ರಾತ್ರಿ ವೇಳೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು ಅಂತ ಜನರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಜನರಲ್ಲಿ ಹೆಚ್ಚಾಗಿದೆ ಸಾಂಕ್ರಾಮಿಕ ರೋಗಗಳು; ಜ್ವರ, ನೆಗಡಿ, ಡೆಂಗ್ಯೂ ಹಾವಳಿ

ಹಾಗೆ ಇಲಾಖೆಯಿಂದ ಸೊಳ್ಳೆಗಳ ಕಂಟ್ರೋಲ್​ಗೆ ಫಾಗಿಂಗ್, ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸೋ ಕೆಲಸ ನಡೀತಿದೆ. ಜೊತೆಗೆ ನೀರು ಸಂಗ್ರಹಣ ತೊಟ್ಟಿಗಳಲ್ಲಿ ಗಪ್ಪಿ ಅಥವಾ ಲಾರ್ವಾಹಾರಿ ಮೀನುಗಳನ್ನ ಬಿಟ್ಟು ಸೊಳ್ಳೆಗಳ ಉತ್ಪತ್ತಿ ತಡೆಗೆ ಮುಂದಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:24 pm, Sat, 22 June 24

Follow Us
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ