ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್‌ಗೆ ಜೈಲು: ವಿನಯ್ ಕುಲಕರ್ಣಿ ನಿವಾಸಕ್ಕೆ ನಟ ದರ್ಶನ್ ಭೇಟಿ

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್ ‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಡಿ ಬಾಸ್​ ದರ್ಶನ್​ ಭಾನುವಾರ ಬೆಳಗ್ಗೆಯೇ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಳಿಗ್ಗೆಯಿಂದ ಕುಲಕರ್ಣಿ ನಿವಾಸದ ಬಳಿ ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ತಡರಾತ್ರಿ ಭೇಟಿ ನೀಡಿದ ದರ್ಶನ್, ಕುಲಕರ್ಣಿ ಕುಟುಂಬದವರಿಗೆ ಧೈರ್ಯ ಹೇಳಿದರು.

  • TV9 Web Team
  • Published On - 10:36 AM, 1 Mar 2021
ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್‌ಗೆ ಜೈಲು: ವಿನಯ್ ಕುಲಕರ್ಣಿ ನಿವಾಸಕ್ಕೆ ನಟ ದರ್ಶನ್ ಭೇಟಿ
ವಿನಯ್​​ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ದರ್ಶನ್​

ಧಾರವಾಡ: ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಜೈಲುಪಾಲಾಗಿದ್ದು, ಚಿತ್ರ ನಟ ದರ್ಶನ್​ ಅವರು ನಗರದ ಶಿವಗಿರಿ ಬಡಾವಣೆಯಲ್ಲಿರುವ ಕುಲಕರ್ಣಿ ನಿವಾಸಕ್ಕೆ ಭಾನುವಾರ ತಡರಾತ್ರಿ ಭೇಟಿ ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್ ‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಡಿ ಬಾಸ್​ ದರ್ಶನ್​ ಭಾನುವಾರ ಬೆಳಗ್ಗೆಯೇ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಳಿಗ್ಗೆಯಿಂದ ಕುಲಕರ್ಣಿ ನಿವಾಸದ ಬಳಿ ಅಭಿಮಾನಿಗಳು ಕಾದು ಕುಳಿತಿದ್ದರು. ಆದ್ರೆ ತಡರಾತ್ರಿ ಭೇಟಿ ನೀಡಿದ ದರ್ಶನ್, ಕುಲಕರ್ಣಿ ಕುಟುಂಬದವರಿಗೆ ಧೈರ್ಯ ಹೇಳಿದರು.

Actor Darshan visits Vinay Kulkarni house

ವಿನಯ್​​ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ದರ್ಶನ್​

Actor Darshan visits Vinay Kulkarni house

ವಿನಯ್​​ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ದರ್ಶನ್​

ಅಂತೆಯೇ, ನಿನ್ನೆ ರಾಬರ್ಟ್​ ಚಿತ್ರ ಬಿಡುಗಡೆಯ ಸಲುವಾಗಿ ಹುಬ್ಬಳ್ಳಿಯಲ್ಲಿ ನಡೆದ ಪ್ರೀ-ರಿಲೀಸ್ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಡಿ ಬಾಸ್​ ದರ್ಶನ್​, ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳನ್ನು ರಂಜಿಸಿದರು. ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್​​ ಮಾಡಿರುವ ದರ್ಶನ್​​, ನಮ್ಮ #Roberrt ಚಿತ್ರದ ಟ್ರೈಲರ್ ಹಾಗೂ ಎಲ್ಲಾ ಹಾಡುಗಳನ್ನು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವ ಪ್ರೀತಿಯ ಜನತೆಗೆ ನನ್ನ ನಮನಗಳು. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆದ ಪ್ರೀ-ರಿಲೀಸ್ ಸಂಭ್ರಮಾಚರಣೆಗೆ ಅತಿ ದೊಡ್ಡ ಸಂಖ್ಯೆಯಲ್ಲಿ ಬಂದು ನಮ್ಮ ಚಿತ್ರ ತಂಡಕ್ಕೆ ಆಶೀರ್ವದಿಸಿದ ಸೆಲೆಬ್ರಿಟಿಗಳ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಚಿರಋಣಿ ಎಂದು ಹೇಳಿಕೊಂಡಿದ್ದಾರೆ.

DBOSS DARSHAN

ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡ ದರ್ಶನ್​

ಇದನ್ನೂ ಓದಿ:

ಯೋಗೀಶ್ ಗೌಡ ಹತ್ಯೆ ಕೇಸ್: ವಿನಯ್​​​ ಸಾಕ್ಷ್ಯನಾಶ ಪ್ರಕರಣ ಜನಪ್ರತಿನಿಧಿಗಳ ಕೋರ್ಟ್​​ಗೆ ವರ್ಗಾವಣೆ

ಗುಂಡು-ತುಂಡು ಆಯ್ತು, ಈಗ ಜೈಲಲ್ಲಿ ರೌಡಿಶೀಟರ್ ಜತೆ ವಿನಯ್ ಕುಲಕರ್ಣಿ ಕಾಲಹರಣ!