ಉತ್ತರ ಕರ್ನಾಟಕ ಭಾಗದ ಜೆಡಿಎಸ್ನ ಮತ್ತೊಂದು ಬಿಗ್ ವಿಕೆಟ್ ಪತನ; ಬಿಜೆಪಿ ಸೇರೋದು ಖಚಿತ ಎಂದ ಬಸವರಾಜ ಹೊರಟ್ಟಿ

ಉತ್ತರ ಕರ್ನಾಟಕ ಭಾಗದ ಜೆಡಿಎಸ್ನ ಮತ್ತೊಂದು ಬಿಗ್ ವಿಕೆಟ್ ಪತನ; ಬಿಜೆಪಿ ಸೇರೋದು ಖಚಿತ ಎಂದ ಬಸವರಾಜ ಹೊರಟ್ಟಿ
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಸತತ ಆರು ಭಾರಿ ಪರಿಷತ್ ಸದಸ್ಯರಾಗಿದ್ದ ಹೊರಟ್ಟಿ. ಈ ಭಾರಿ ಕಮಲ ಚಿಹ್ನೆಯಡಿ ಕಣಕ್ಕಿಳಿಯೋಕೆ ಮುಂದಾಗಿದ್ದಾರೆ. ಶೀಘ್ರದಲ್ಲೆ ಬಿಜೆಪಿ ಸೇರೋದಾಗಿ ಬಸವರಾಜ ಹೊರಟ್ಟಿ ಘೋಷಣೆ ಮಾಡಿದ್ದಾರೆ.

TV9kannada Web Team

| Edited By: Ayesha Banu

Apr 03, 2022 | 3:43 PM

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜೆಡಿಎಸ್ನ ಮತ್ತೊಂದು ಬಿಗ್ ವಿಕೆಟ್ ಪತನಗೊಳ್ಳಲಿದೆ. ಜೆಡಿಎಸ್ಗೆ ಗುಡ್ ಬೈ ಹೇಳಲು ಹೊರಟ್ಟಿ ಸಜ್ಜಾಗಿದ್ದಾರೆ. ತಾನು ಬಿಜೆಪಿ ಸೇರುವ ಬಗ್ಗೆ ಬಸವರಾಜ ಹೊರಟ್ಟಿ ಖಚಿತ ಪಡಿಸಿದ್ದಾರೆ. ನಾನು ಬಿಜೆಪಿ ಸೇರೋದು ಖಚಿತ. ಈಗಾಗಲೇ ಬಿಜೆಪಿ ವರಿಷ್ಠರ ಜೊತೆಗೆ ಮಾತುಕತೆಯಾಗಿದೆ ಎಂದು ಹುಬ್ಬಳ್ಳಿಯಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಸತತ ಆರು ಭಾರಿ ಪರಿಷತ್ ಸದಸ್ಯರಾಗಿದ್ದ ಹೊರಟ್ಟಿ. ಈ ಭಾರಿ ಕಮಲ ಚಿಹ್ನೆಯಡಿ ಕಣಕ್ಕಿಳಿಯೋಕೆ ಮುಂದಾಗಿದ್ದಾರೆ. ಶೀಘ್ರದಲ್ಲೆ ಬಿಜೆಪಿ ಸೇರೋದಾಗಿ ಬಸವರಾಜ ಹೊರಟ್ಟಿ ಘೋಷಣೆ ಮಾಡಿದ್ದಾರೆ. ಇಷ್ಟು ದಿನದ ಉಹಾಪೋಹಗಳಿಗೆ ಫುಲ್ ಸ್ಟಾಫ್ ಇಟ್ಟಿದ್ದಾರೆ. ಈ ಮೂಲಕ ಜೆಡಿಎಸ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಎನ್. ಹೆಚ್. ಕೋನರೆಡ್ಡಿ ಬಳಿಕ ಹೊರಟ್ಟಿ ಕೂಡಾ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಹೊರಟ್ಟಿ ಪಕ್ಷಾಂತರ ಮಾಡಲು ಮುಂದಾಗಿದ್ದಾರೆ.

ಜೂನ್-ಜುಲೈನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ. ಪರಿಷತ್ ಚುನಾವಣೆಗೂ ಮೊದಲೇ ಬಿಜೆಪಿ ಸೇರುತ್ತೇನೆ. ಈಗಾಗಲೇ ಬಿಎಸ್ ಯಡಿಯೂರಪ್ಪ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರ್ಪಡೆಗೆ ಹೆಚ್ಡಿ ಕುಮಾರಸ್ವಾಮಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಬೇರೆಯವರು ಪ್ರಚಾರ ಮಾಡ್ತಿದ್ರೆ ಏನೂ ಮಾಡೋಕ್ಕಾಗಲ್ಲ. ಎಷ್ಟು ದಿನ ಮುಚ್ಚಿಟ್ಟುಕೊಳ್ಳುವುದು, ನಾನು ಬಿಜೆಪಿ ಸೇರುತ್ತೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೂರು ಮದುವೆಯಾಗಿದ್ದವನ ಅಸ್ತಿಪಂಜರ ದಟ್ಟಾರಣ್ಯದ ಬಾವಿಯಲ್ಲಿ ಸಿಕ್ತು; ಕೊಲೆ ಮಾಡಿದ್ಯಾರು?-ಆರೋಪಿಗಳಿಗಾಗಿ ಹುಡುಕಾಟ

ಸಮಾಜವನ್ನ ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ; ಅವರವರು ಅವರ ಪದ್ಧತಿ ಮುಂದುವರಿಸಿಕೊಂಡು ಹೋಗಲಿ -ಸಚಿವ ಕೆ.ಎಸ್. ಈಶ್ವರಪ್ಪ

Follow us on

Related Stories

Most Read Stories

Click on your DTH Provider to Add TV9 Kannada