ಮಂದಗತಿಯಲ್ಲಿ ಸಾಗುತ್ತಿರುವ ಧಾರವಾಡ ಬಸ್​ ಸೇತುವೆ ಕಾಮಗಾರಿ; ಸ್ಥಳೀಯರ ಆಕ್ರೋಶ

ಕಳೆದ ವರ್ಷ ಧಾರವಾಡದ ನವಲೂರು ಬಡಾವಣೆ ಬಳಿಯ ಸೇತುವೆ ಬಸ್ ಓಡಾಡುವ ಮುಂಚೆಯೇ ಕುಸಿದು ಬೀಳುವುದಕ್ಕೆ ಶುರುವಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಖುದ್ದು ಸಿಎಂ ಯಡಿಯೂರಪ್ಪನವರೇ ಆದೇಶ ನೀಡಿದರೂ ಕಿವಿಗೊಡದ ಅಧಿಕಾರಿಗಳು ಈಗ ಸದ್ದಿಲ್ಲದೇ ಸೇತುವೆಗೆ ತರಾತುರಿಯಲ್ಲಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

  • ನರಸಿಂಹಮೂರ್ತಿ ಪ್ಯಾಟಿ
  • Published On - 7:00 AM, 12 Apr 2021
ಮಂದಗತಿಯಲ್ಲಿ ಸಾಗುತ್ತಿರುವ ಧಾರವಾಡ ಬಸ್​ ಸೇತುವೆ ಕಾಮಗಾರಿ; ಸ್ಥಳೀಯರ ಆಕ್ರೋಶ
ಸೇತುವೆ ಕಾಮಗಾರಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಧ್ಯೆ ತ್ವರಿತಗತಿ ಬಸ್ ಸೇವೆ ನೀಡುವ ಬಿಆರ್​ಟಿಎಸ್ ಯೋಜನೆಗೆ ಕೊನೆಯೇ ಇಲ್ಲದಂತಾಗಿದೆ. ಕಳೆದ ವರ್ಷ ಧಾರವಾಡದ ನವಲೂರು ಬಡಾವಣೆ ಬಳಿಯ ಸೇತುವೆ, ಬಸ್ ಓಡಾಡುವ ಮುಂಚೆಯೇ ಕುಸಿದು ಬೀಳುವುದಕ್ಕೆ ಶುರುವಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಖುದ್ದು ಸಿಎಂ ಯಡಿಯೂರಪ್ಪನವರೇ ಆದೇಶ ನೀಡಿದರೂ ಕಿವಿಗೊಡದ ಅಧಿಕಾರಿಗಳು ಈಗ ಸದ್ದಿಲ್ಲದೇ ಸೇತುವೆಗೆ ತರಾತುರಿಯಲ್ಲಿ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯೆ ತ್ವರಿತಗತಿ ಬಸ್ ಸೇವೆ ನೀಡುವ ಉದ್ದೇಶದಿಂದ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಆರಂಭಿಸಲಾಗಿರುವ ಈ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎನ್ನುವುದಕ್ಕೆ ಈ ಸೇತುವೆಯೇ ಸಾಕ್ಷಿ. ಈ ವಿಚಾರ ಮುಖ್ಯಮಂತ್ರಿವರೆಗೂ ಹೋಗಿತ್ತು, ಈ ಬಗ್ಗೆ ವರದಿ ಸಲ್ಲಿಸುವಂತೆ ಖುದ್ದು ಸಿಎಂ ಯಡಿಯೂರಪ್ಪ ಸೂಚಿಸಿದ್ದರು. ಆದರೆ ಮುಖ್ಯಮಂತ್ರಿ ಹೇಳಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದಿದ್ದು ವಿಪರ್ಯಾಸ.

ಮತ್ತೆ ಸೇತುವೆ ಕಾಮಗಾರಿ ಆರಂಭವಾಗಿದೆ. ಆದರೆ ಕಡಿಮೆ ಕೆಲಸಗಾರರನ್ನು ಬಳಸುತ್ತಿದ್ದಾರೆ. ಹೀಗಾಗಿ ಜಾಸ್ತಿ ಕೆಲಸಗಾರರನ್ನು ಇಟ್ಟುಕೊಂಡು ವೇಗಗತಿಯಲ್ಲಿ ಕಾಮಗಾರಿ ನಿರ್ವಹಿಸಲು ತಿಳಿಸಿದ್ದೇನೆ. ಬಿಆರ್​ಟಿಎಸ್ ಕಂಪನಿ ಈ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಅವರು ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುವ ಆರೋಪ ಇತ್ತು ಹೀಗಾಗಿ ಬಿಆರ್​ಟಿಎಸ್ ಕಂಪನಿಗೆ ಈ ಬಗ್ಗೆ ತಿಳಿಸಲಾಗಿದೆ. ಇನ್ನು ಮುಂದೆ ಸೇತುವೆ ಕಾಮಗಾರಿ ಉತ್ತಮ ನಿರ್ವಹಣೆಯಲ್ಲಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹೇಳಿದ್ದಾರೆ.

bridge construction

ನಿಧಾನಗತಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿ

ಈ ಸೇತುವೆಯ ಕುರಿತಾದ ತನಿಖೆ ಏನಾಯ್ತು ಎನ್ನವುದು ಯಾರಿಗೂ ಗೊತ್ತಿಲ್ಲ. ಅಲ್ಲದೇ ಯಾರ ಮೇಲೆ ಕ್ರಮವೂ ಆಗಿಲ್ಲ. ಹೀಗಾಗಿ ಈ ಸೇತುವೆ ಗುಣಮಟ್ಟದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಈ ರೀತಿ ತೇಪೆ ಹಚ್ಚುವ ಕಾಮಗಾರಿ ಆರಂಭಿಸುತ್ತಿದ್ದಾರೆ. ಏಕೆಂದರೆ ಸಿಎಂ ಯಡಿಯೂರಪ್ಪ ತನಿಖೆ ನಡೆಸಿ ವರದಿ ಸಲ್ಲಿಸಲು ಮೂರು ತಿಂಗಳ ಗಡುವು ನೀಡಿದ್ದರು. ಆದರೆ ಇದೀಗ ಸೂಚನೆ ನೀಡಿ ಆರು ತಿಂಗಳಾದರೂ ವರದಿಯನ್ನೇ ಸಲ್ಲಿಸಿದ ಅಧಿಕಾರಿಗಳು ಈ ಸೇತುವೆಯ ದುರಸ್ತಿಯನ್ನು ಅದೆಷ್ಟು ಸರಿಯಾಗಿ ಮಾಡುತ್ತಾರೆ ಎಂದು ಸ್ಥಳೀಯರಾದ ಶ್ರೀನಿವಾಸ ಇಂಚೂರು ತಿಳಿಸಿದ್ದಾರೆ.

ಇದನ್ನೂ ಓದಿ:

ಕೊರೊನಾ ಮಧ್ಯೆಯೇ ಗದಗದಲ್ಲಿ ಸೈಟ್‌ ಹರಾಜು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ದೇಹ ಸೇರುತ್ತಿದೆ ವಿಷ; ಬಾಗಲಕೋಟೆಯಲ್ಲಿ ಚರಂಡಿ ನೀರಲ್ಲಿ ತರಕಾರಿ ಬೆಳೆಯುತ್ತಿರುವ ಬೆಳೆಗಾರರ ವಿರುದ್ಧ ಸ್ಥಳೀಯರ ಆಕ್ರೋಶ

(Dharwad bus bridge construction not completed and people angry on officers)