ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್​ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ

ಧಾರವಾಡದ ವೀರನಾರಾಯಣ ಕುಲಕರ್ಣಿ ಎಂಬುವರು ಡಯಾಬಿಟಿಸ್ ಮೆಡಿಸಿನ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರಗೆ ಸೈಕಲ್​ ಯಾತ್ರೆ ಮಾಡಿದ್ದಾರೆ.

ಸಕ್ಕರೆ ಕಾಯಿಲೆ ವಿರುದ್ಧ ಜಾಗೃತಿ: 40 ದಿನಗಳಲ್ಲಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್​ ಯಾತ್ರೆ ಮಾಡಿದ ಧಾರವಾಡದ ವ್ಯಕ್ತಿ
ಸೈಕಲ್​ ಯಾತ್ರಿಕ ವೀರನಾರಾಯಣ ಕುಲಕರ್ಣಿ
Follow us
ವಿವೇಕ ಬಿರಾದಾರ
|

Updated on:Mar 20, 2023 | 8:07 AM

ಹುಬ್ಬಳ್ಳಿ: ಧಾರವಾಡದ (Dharwad) ವೀರನಾರಾಯಣ ಕುಲಕರ್ಣಿ ಎಂಬುವರು ಡಯಾಬಿಟಿಸ್ ಮೆಡಿಸಿನ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ (Diabetes Reversal) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರಗೆ (Kashmir to Kanyakumari) ಸೈಕಲ್​ ಯಾತ್ರೆ ಮಾಡಿದ್ದಾರೆ. ಗುರುವಾರ (ಮಾ.16) ರ ಸಂಜೆ ಕನ್ಯಾಕುಮಾರಿ ತಲುಪಿದ್ದು, 4,061 ಕಿಮೀ ದೂರವನ್ನು ಕೇವಲ 40 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವೀರನಾರಾಯಣ ಕುಲಕರ್ಣಿ ಕಾಶ್ಮೀರ-ಕನ್ಯಾಕುಮಾರಿ ಸೈಕಲ್​ ಯಾತ್ರೆ ಬಗ್ಗೆ 2013ರಲ್ಲೇ ನನ್ನ ಸ್ನೇಹಿತರೊಂದಿಗೆ ಚರ್ಚಿಸಿದ್ದೆ, ಆದರೆ ಒಂದಲ್ಲಾ ಒಂದು ಕಾರಣಕ್ಕೆ ಮುಂದುಡೂತ್ತಾ ಬಂದೆ. ಈಗ ಕಾಲ ಕೂಡಿ ಬಂದಿದ್ದು, ಸೈಕಲ ಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡು 2023ರ ಜನವರಿ 24 ರಂದು ನನ್ನ ಪತ್ನಿ ಪೂರ್ಣಿಮಾ, ಮಗಳು ಅಮೋದಿನಿ ಮತ್ತು ಸ್ನೇಹಿತ ಪೃತ್ವಿಯೊಂದಿಗೆ ಕಾರಿನಲ್ಲಿ ಶ್ರೀನಗರಕ್ಕೆ ಹೋದೆ. ನಂತರ ಫೆಬ್ರವರಿ 4ರಂದು ಲಾಲ್​ ಚೌಕ್​​ನಿಂದ ಸೈಕಲ ಯಾತ್ರೆ ಆರಂಭಿಸಿದೆ ಎಂದು ಹೇಳಿದರು.

ಅಲ್ಲಿಂದ ಪ್ರತಿದಿನ 100 ಕಿಮೀ ದೂರವನ್ನು ಕ್ರಮಿಸುತ್ತಾ, ಪ್ರತಿಕೂಲ ವಾತಾವರಣವನ್ನು ಎದುರಿಸುತ್ತಾ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾದು ಅಂತಿಮವಾಗಿ ಕ್ಯನ್ಯಾಕುಮಾರಿ ತಲುಪಿದ್ದೇನೆ. ಯಾತ್ರೆಯ 10 ದಿವಸಗಳು ಕಳೆದ ನಂತರ ವಿಶ್ರಾಂತಿ ಪಡೆಯುತ್ತಿದ್ದೆ. ಈ ವೇಳೆ ಡಯಾಬಿಟಿಸ್ ಮೆಡಿಸಿನ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ  ಕುರಿತು ಅರಿವು ಮೂಡಿಸಲು ಚರ್ಚೆ ಮತ್ತು ಸಭೆಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಟ್ರೆಕ್ಕಿಂಗ್​​ ಅಥವಾ ದೂರ ಪ್ರಯಾಣ ಮಾಡುವಾಗ ಈ ಆಹಾರಗಳಿಂದ ದೂರವಿರಿ

ನನ್ನ ಸೈಕಲ್​ ಯಾತ್ರೆಯ ಉದ್ದೇಶ ಡಯಾಬಿಟಿಸ್ ಮೆಡಿಸಿನ್‌ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಧುಮೇಹ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯವಾಗಿ ಇರುವುದು ಹೇಗೆ ಎಂಬುವುದರ ಕುರಿತು. ನಮ್ಮ ಯಾತ್ರೆ ಉದ್ದಕ್ಕೂ ಅನೇಕರು ಸಹಾಯ ಮಾಡಿದರು. ನಮ್ಮ ಯಾತ್ರೆಯ ಉದ್ದೇಶ ತಿಳಿದು ಪುಣೆಯ ವ್ಯಕ್ತಿಯೊಬ್ಬರು ಯಾತ್ರೆ ಸಂಬಂಧ ಬಹಳಷ್ಟು ಸಹಾಯ ಮಾಡಿದರು. ನಮಗೆ ಎಲ್ಲಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸೈಕ್ಲಿಂಗ್ ಗುಂಪುಗಳು, ಕೃಷಿಕರು, ರೋಟೇರಿಯನ್‌ಗಳು, ಧರ್ಮಶಾಲಾಗಳಲ್ಲಿ ಒಳ್ಳೆ ಸ್ವಾಗತ ಮತ್ತು ಆತಿಥ್ಯವನ್ನು ಸ್ವೀಕರಿಸಿದ್ದೇವೆ. ಇದು ನಮ್ಮ ಖರ್ಚನ್ನು ಕಡಿಮೆ ಮಾಡಲು ಸಹಾಯ ಮಾಡಿತು ಎಂದರು.

ನಮ್ಮ ಯಾತ್ರೆಯ ಸಮಯದಲ್ಲಿ ನಾವು ಮಧುಮೇಹದ ವಿರುದ್ಧ 30 ಭಾಷಣಗಳನ್ನು ನೀಡಿದ್ದೇವೆ. ಇದಲ್ಲದೆ, ನಾವು 1,000 ಕರಪತ್ರಗಳನ್ನು ವಿತರಿಸಿದ್ದೇವೆ. ಸ್ಮರಣೀಯ ಘಟನೆ ಎಂದರೇ ರಾಜಸ್ಥಾನದ ನಾಗೌರ್ ಗ್ರಾಮದ ವ್ಯಾಪಾರಿ ಬಾಬುಲಾಲ್ ಚೌದರಿ ಅವರು ತಮ್ಮ ಮಲಗುವ ಕೋಣೆಯನ್ನು ಬಳಸಲು ನಮಗೆ ಅವಕಾಶ ಮಾಡಿಕೊಟ್ಟರು. ಅವರು ತಮ್ಮ ಚಿಕ್ಕ ಮನೆಯ ಅಡುಗೆಮನೆಯಲ್ಲಿ ಮಲಗಿದ್ದರು. ಇನ್ನೊಂದು ಬಾರಿ, ನಮ್ಮ ಉದ್ದೇಶದ ಬೋರ್ಡ್ ನೋಡಿ, ಕಾಶ್ಮೀರಿ ಪಂಡಿತರೊಬ್ಬರು ಕಾರು ನಿಲ್ಲಿಸಿ, ನಮ್ಮ ಬಳಿಗೆ ಬಂದು ಕನ್ನಡದಲ್ಲಿ ಮಾತನಾಡಿದರು. ಅವರು ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಯಾತ್ರೆಯ ಅನುಭವ ಹಂಚಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:00 am, Mon, 20 March 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ