ಅಂಗವೈಕಲ್ಯ ಮೆಟ್ಟಿನಿಂತ ಹುಬ್ಬಳ್ಳಿಯ ಚಿತ್ರಕಲಾ ವಿದ್ಯಾರ್ಥಿಗೆ ಒಲಿದು ಬಂತು ಲಲಿತ ಕಲಾ ಅಕಾಡೆಮಿ ಪ್ರಶಸ್ತಿ!

ಕಿರಣ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಪದವಿ ಪೂರೈಸಿದ್ದಾರೆ. ಕಳೆದ ಎಂಟು 8 ವರ್ಷಗಳಿಂದ ಫ್ರಿ ಲ್ಯಾನ್ಸರ್ ಆಗಿ ವಿಶಿಷ್ಟ ಶೈಲಿಯ ಚಿತ್ರಕಲಾಕೃತಿಗಳ ಮೂಲಕ ಗಮನ ಸೆಳೆದಿರುವ ಈತ ಆರಂಭದಲ್ಲಿ ಜಲವರ್ಣದಲ್ಲಿ ಲ್ಯಾಂಡ್ ಸ್ನೇಪ್ ಶೈಲಿಯ ಚಿತ್ರಕಲಾಕೃತಿಯಿಂದ ಎಲ್ಲರ ಮನ ಗೆದಿದ್ದಾರೆ.

  • ದತ್ತಾತ್ರೇಯ ಪಾಟೀಲ್
  • Published On - 11:04 AM, 11 Apr 2021
ಅಂಗವೈಕಲ್ಯ ಮೆಟ್ಟಿನಿಂತ ಹುಬ್ಬಳ್ಳಿಯ ಚಿತ್ರಕಲಾ ವಿದ್ಯಾರ್ಥಿಗೆ ಒಲಿದು ಬಂತು ಲಲಿತ ಕಲಾ ಅಕಾಡೆಮಿ ಪ್ರಶಸ್ತಿ!
ಕಿರಣ್ ಶೇರಖಾನೆ

ಹುಬ್ಬಳ್ಳಿ: ಮನುಷ್ಯ ಎಂದ ಮೇಲೆ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ನಾವು ಮೊದಲು ಕಂಡುಕೊಳ್ಳಬೇಕು ಎನ್ನುವುದು ಹಿರಿಯರ ಮಾತು. ಅದರಂತೆ ತನ್ನ ಅಂಗವೀಕಲತೆಯನ್ನು ಆಧಾರವಾಗಿಟ್ಟುಕೊಂಡ ಹುಬ್ಬಳ್ಳಿಯ ಯುವಕನೊಬ್ಬ ತನ್ನ ವಿಶೇಷ ಕಲೆಯಿಂದ ಹಲವಾರು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಹುಬ್ಬಳ್ಳಿ ಸರ್ವಧರ್ಮ ಕಾಲೋನಿ ನಿವಾಸಿಯಾದ ಕಿರಣ್ ಹುಟ್ಟುತ್ತಲೇ ವಿಶೇಷ ಚೇತನರಾಗಿದ್ದರು. ಕಿರಣ್ ಶೇರಖಾನೆ ಸ್ಥಿತಿ ನೋಡಿ ಹೇಗಪ್ಪಾ ಇವನನ್ನು ಸಾಕುವುದು, ದೊಡ್ಡವನಾದ‌ ಮೇಲೆ ಏನು ಮಾಡುತ್ತಾನೆ, ಎಂಬ ಚಿಂತೆಯಲ್ಲಿದ್ದ ಕುಟುಂಬಸ್ಥರಿಗೆ ದಿಗಿಲು ಬಡಿಯುವ ಹಾಗೆ ತನ್ನ ಚಿತ್ರಕಲೆ ಮೂಲಕ ಕಿರಣ್ ಧೈರ್ಯ ಹುಟ್ಟಿಸಿದ್ದಾರೆ.

ಡ್ರಾಯಿಂಗ್ ಕ್ಷೇತ್ರದಲ್ಲಿ ಕಿರಣ್ ಬೆಳೆದು ನಿಂತಿದ್ದು, ಇನ್ನೂ ಈತ ಮಾಡುವ ಡ್ರಾಯಿಂಗ್ ಮತ್ತು ಪೇಂಟಿಂಗ್ ಚಿತ್ರಕ್ಕೆ ಬಾರಿ ಬೇಡಿಕೆಯ ಜೊತೆಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ 2020 ನೇ ಸಾಲಿನ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. 49 ನೇ ವಾರ್ಷಿಕ ಕಲಾ ಪ್ರದರ್ಶನದ ಬಹುಮಾನ ದೊರೆತಿದೆ.

ಈತ ಪರಿಸರ ಸಂರಕ್ಷಣೆ, ಗಿಡಮರ ರಕ್ಷಣೆಗಿಡಮರಗಳನ್ನು ಕಡಿದು ಹಾಕಿದರೆ ಅದರಿಂದಾಗುವ ದುಷ್ಪರಿಣಾಮಗಳನ್ನು ಕೇಂದ್ರ ವಿಷಯವಾಗಿಟ್ಟುಕೊಂಡು ರಚನೆ ಮಾಡಿದ ಕಲಾಕೃತಿಗೆ ಸದ್ಯ ಹಲವು ಪ್ರಶಸ್ತಿ ಸಿಕ್ಕಿದೆ. ಹೀಗಾಯೇ ಇಷ್ಟು ದಿನದ ಕನಸು ಸದ್ಯ ನನಸಾಗಿದೆ ಎಂದು ಕಿರಣ್ ಶೇರಖಾನೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

drawing

ಕಿರಣ್ ಬಿಡಿಸಿದ ಚಿತ್ರಕಲೆಯ ದೃಶ್ಯ

ಕಿರಣ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆ ಪದವಿ ಪೂರೈಸಿದ್ದಾರೆ. ಕಳೆದ ಎಂಟು ವರ್ಷಗಳಿಂದ ಫ್ರಿ ಲ್ಯಾನ್ಸರ್ ಆಗಿ ವಿಶಿಷ್ಟ ಶೈಲಿಯ ಚಿತ್ರಕಲಾಕೃತಿಗಳ ಮೂಲಕ ಗಮನ ಸೆಳೆದಿರುವ ಈತ ಆರಂಭದಲ್ಲಿ ಜಲವರ್ಣದಲ್ಲಿ ಲ್ಯಾಂಡ್ ಸ್ನೇಪ್ ಶೈಲಿಯ ಚಿತ್ರಕಲಾಕೃತಿಯಿಂದ ಎಲ್ಲರ ಮನ ಗೆದಿದ್ದಾರೆ. ಇನ್ನೂ ಈತನ ಕಲೆ ಮೆಚ್ಚಿದ ಗಣ್ಯರು, ಚಿಣ್ಣರ ಚೇತನ , ಜಿಲ್ಲಾಡಳಿತದ ಗಣರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ಪಿ.ಆರ್.ತಿಪ್ಪೇಸ್ವಾಮಿ ಕಲಾ ಪ್ರದರ್ಶನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಕಿರಣ್ ಚಿತ್ರಕಲೆಗೆ ನಮ್ಮ ರಾಜ್ಯದಲ್ಲಷ್ಟೆಲ್ಲದೇ ಆಂಧ್ರ, ತಮಿಳುನಾಡಿನಲ್ಲೂ ತುಂಬಾ ಬೇಡಿಕೆ ಇದೆ ಎನ್ನುವುದು ವಿಶೇಷ.

kiran

ಕಿರಣ್ ಶೇರಖಾನೆ

ನನ್ನ ಶ್ರಮವನ್ನ ನೋಡಿ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ ಘೋಷಣೆ ಮಾಡಿದ್ದು, ಸಂತಸ ನೀಡಿದೆ. ವಾರ್ಷಿಕ ಕಲಾ ಪ್ರದರ್ಶನ ವಿಭಾಗದಲ್ಲಿ ನನ್ನ ಚಿತ್ರಕಲೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇದರಿಂದ ಬಹಳ ಖುಷಿಯಾಗಿದೆ ಅಲ್ಲದೆ ನನಗೆ ಪ್ರೋತ್ಸಾಹ ನೀಡಿದಂತಾಗಿದೆ. ಹೀಗಾಯೇ ಮುಂದೆಯೂ ಇನ್ನಷ್ಟು ಹೆಚ್ಚು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಕಲಾವಿದ ಕಿರಣ್ ಶೇರಖಾನೆ ಹೇಳಿದ್ದಾರೆ.

ಒಟ್ಟಿನಲ್ಲಿ ಏನೆನೋ ಕಾರಣ ಹೇಳಿ ಕೆಲಸ ಮಾಡದೇ ನುಣುಚಿಕೊಳ್ಳುವ ಈಗಿನ ಯುವಕರ ನಡುವೆ ವಿಶೇಷ ಚೇತನರಾಗಿದ್ದರು ಅದನ್ನು ಮೆಟ್ಟಿನಿಂತು ಎಲ್ಲಾ ಯುವಕರಿಗೆ ಮಾದರಿಯಾಗಿರುವ ಕಿರಣ್ ಸಾಧನೆ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂಬುವುದೇ ಟಿವಿ9 ಡಿಜಿಟಲ್​ನ ಆಶಯ

ಇದನ್ನೂ ಓದಿ:

IPL 2021: ಆರ್​ಸಿಬಿ ಚಾಂಪಿಯನ್​ ಕನಸಿಗೆ ಅವರ ನಿರ್ಧಾರಗಳೇ ಮುಳುವಾಗ್ತಿದೆ.. ಐಪಿಎಲ್​ನಲ್ಲಿ ರೋಹಿತ್​ ಮಾಡಿದ ಸಾಧನೆ ಕೊಹ್ಲಿಯಿಂದ ಆಗಲಿಲ್ಲವೇಕೆ?

ಕಿಸಾನ್ ಮೇಳದಲ್ಲಿ ಧೋನಿ ಹಸುಗಳದ್ದೇ ಕಾರುಬಾರು.. ಅತ್ಯುತ್ತಮ ಗೋಪಾಲಕ ಪ್ರಶಸ್ತಿ ಪಡೆದ ಕ್ಯಾಪ್ಟನ್​ ಕೂಲ್​, ಫೋಟೋ ನೋಡಿ!

(Disability student won lalitha kala akademi award for drawing in Hubli)