ಜಲ ಮಂಡಳಿಯ ಅಸಹಕಾರ ನೀತಿ! ಹುಬ್ಬಳ್ಳಿ ಧಾರವಾಡದ ಭಾಗದಗಳಲ್ಲಿ 15 ದಿನ ಕಳೆದರೂ ಕುಡಿಯಲು ನೀರು ಬರುತ್ತಿಲ್ಲ

ಈಗಾಗಲೇ ಮಹಾನಗರ ಪಾಲಿಕೆ ಅಸಮಾಧಾನ ನಿವಾರಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸಭೆ ಮಾಡಿದೆ. ಜೊತೆಗೆ ಎಲ್ ಆ್ಯಂಡ್ ಟಿ ಕಂಪನಿಗೆ ನೀರಿನ ಸರಬರಾಜು ಹಸ್ತಾಂತರ ಕಾರ್ಯ ಕೂಡ ಮಾಡಲಾಗಿದೆ. ಹೀಗಿದ್ದರೂ ಜನರ ನೀರಿನ ಬವಣೆ ಮಾತ್ರ ಬಗೆಹರಿಯುತ್ತಿಲ್ಲ.

ಜಲ ಮಂಡಳಿಯ ಅಸಹಕಾರ ನೀತಿ! ಹುಬ್ಬಳ್ಳಿ ಧಾರವಾಡದ ಭಾಗದಗಳಲ್ಲಿ 15 ದಿನ ಕಳೆದರೂ ಕುಡಿಯಲು ನೀರು ಬರುತ್ತಿಲ್ಲ
ಹುಬ್ಬಳ್ಳಿ ಧಾರವಾಡದ ಭಾಗದಲ್ಲಿ 15 ದಿನ ಕಳೆದರೂ ಕುಡಿಯಲು ನೀರು ಬರುತ್ತಿಲ್ಲ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 13, 2022 | 6:19 PM

ವಿಶ್ವದರ್ಜೆಯ ನಗರವನ್ನಾಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ನಗರಳಿಗೆ ಕೋಟಿ ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದೆ. ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿದೇಶಿ ಕಂಪನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಟೆಂಡರ್ ನೀಡಲಾಗಿದೆ. ಹೀಗಿದ್ದರೂ ಹುಬ್ಬಳ್ಳಿ ಮಂದಿಗೆ ನೆಮ್ಮದಿ ಮಾತ್ರ ಸಿಗುತ್ತಿಲ್ಲ.‌ ದುಡ್ಡು ಕೊಡತ್ವಿ ಅಂದ್ರೂ ಹನಿ ನೀರು ಬೇಕು (drinking water problem) ಅಂದರೆ 15 ರಿಂದ 20 ದಿನ ಕಾಯಕಬೇಕು.. ಈಗ ಅದು ಸಹ ಸಿಗುತ್ತಿಲ್ಲ… ಅಂತಾರೆ ಇಲ್ಲಿನ ಮಂದಿ.

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ (hubballi, dharwad) ಜನರು ಕುಡಿಯುವ ನೀರಿಗಾಗಿ ದಿನವೂ ಹೋರಾಟ ನಡೆಸುವಂತಾಗಿದೆ. ಜಲಮಂಡಳಿಯಿಂದ ನೀರು ಸರಬರಾಜು ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದೆ. ಈಗ ಇದೇ ಜನರಿಗೆ ಮುಳುವಾಗಿದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬುವಂತೇ ಜಲಮಂಡಳಿ ಸಿಬ್ಬಂದಿ ಮತ್ತು ಎಲ್ ಆ್ಯಂಡ್ ಟಿ ತಿಕ್ಕಾಟದಲ್ಲಿ ಹುಬ್ಬಳ್ಳಿ ಮಂದಿ ಹೈರಾಣಾಗಿದ್ದು,15 ದಿನಗಳಿಂದ ಕುಡಿಯುವ ನೀರಿಗಾಗಿ (water problem) ಪರದಾಡುವಂತಾಗಿದೆ.

Also Read: ಚಿತ್ರದುರ್ಗ ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ IAS ಅಧಿಕಾರಿ ವಸ್ತ್ರದ್ ನೇಮಕ

ಬಿಸಿಲುನಾಡಿನ ಜನ ಅನುಭವಿಸಿದ ಯಾತನೆಯನ್ನು ಸ್ಮಾರ್ಟ್ ಸಿಟಿ ಮಂದಿ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಸರಬರಾಜು ಜವಾಬ್ದಾರಿಯನ್ನು ಎಲ್ ಆ್ಯಂಡ್ ಟಿ ಕಂಪನಿಗೆ ಕೊಟ್ಟಿರುವುದನ್ನು ಮೊದಲಿಂದಲೂ ವಿರೋಧಿಸುತ್ತಿರುವ ಜಲ ಮಂಡಳಿ ಸಿಬ್ಬಂದಿ, ಈಗ ಕಂಪನಿಗೆ ಅಸಹಕಾರ ನೀಡುತ್ತಿದ್ದಾರೆ. ಈ ಪರಿಣಾಮ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಕೊಡದೆ ಹೋದ್ರೆ ನಾವು ಹೋರಾಟ ಮಾಡ್ತೀವಿ ಅಂತೀದಾರೆ ಸ್ಥಳೀಯರು.

ಈಗಾಗಲೇ ಮಹಾನಗರ ಪಾಲಿಕೆ ಅಸಮಾಧಾನ ನಿವಾರಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಸಭೆ ಮಾಡಿದೆ. ಜೊತೆಗೆ ಎಲ್ ಆ್ಯಂಡ್ ಟಿ ಕಂಪನಿಗೆ ನೀರಿನ ಸರಬರಾಜು ಹಸ್ತಾಂತರ ಕಾರ್ಯ ಕೂಡ ಮಾಡಲಾಗಿದೆ. ಹೀಗಿದ್ದರೂ ಜನರ ನೀರಿನ ಬವಣೆ ಮಾತ್ರ ಬಗೆಹರಿಯುತ್ತಿಲ್ಲ. drinking water problem intensifies in hubballi and dharwad twin cities ಹಳೇ ಹುಬ್ಬಳ್ಳಿ, ಬೀಡಿ ಕಾರ್ಮಿಕರ ನಗರ, ಸ್ವರಾಜನಗರ, ಪಂಪನಗರ, ಬಂಜಾರ ಕಾಲೊನಿ, ಜಗದೀಶ ನಗರ, ಹುಬ್ಬಳ್ಳಿ, ಅಯೋಧ್ಯಾನಗರ, ಎಸ್‌.ಎಂ. ಕೃಷ್ಣ ನಗರ, ವೀರಾಪುರ ಓಣಿ, ಬಿಡನಾಳ, ಕರ್ಕಿ ಬಸವೇಶ್ವರನಗರ, ಗೋಕುಲ ರಸ್ತೆ, ಹೊಸುರು, ವಿದ್ಯಾನಗರ ಸೇರಿದಂತೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಬಹುತೇಕ ಕಡೆಯಲ್ಲಿ ಸುಮಾರು 15 ದಿನ ಕಳೆದರೂ ಕುಡಿಯುವ ನೀರು ಬರುತ್ತಿಲ್ಲ. ಅಲ್ಲದೇ ಉಣಕಲ್ ಗ್ರಾಮದ ವೀರಭದ್ರೇಶ್ವರ ಕಾಲೋನಿಯಲ್ಲಿ ವಾಟರ್ ಟ್ಯಾಂಕ್ ಬರದೇ ಇದ್ದರೆ ಜನರು ಕುಡಿಯಲು ನೀರು ಕಾಣುವುದೇ ದೊಡ್ಡ ಸವಾಲಾಗಿದೆ. ಇನ್ನು ದುಡ್ಡು ಕೊಟ್ಟು ನೀರು ಕುಡಿಯೋ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಿನಲ್ಲಿ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಮಂಡಳಿ ಧ್ವನಿ ಎತ್ತಬೇಕಿದೆ‌. ಕೂಡಲೇ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿರುವುದು ಶೋಭೆ ತರುವ ಸಂಗತಿಯಲ್ಲ.

ವರದಿ: ಶಿವಕುಮಾರ್ ಪತ್ತಾರ್, ಟಿವಿ 9, ಹುಬ್ಬಳ್ಳಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ