Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಸ್ಕಾಂನ ವಿದ್ಯುತ್ ಗ್ರಿಡ್ ವಿವಾದ: ಧಾರವಾಡದ ಪಾರಂಪರಿಕಾ ಕಟ್ಟಡಗಳಿಗೆ ಧಕ್ಕೆ ಆತಂಕ

ಧಾರವಾಡದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ ಹೆಸ್ಕಾಂನವರು ವಿದ್ಯುತ್ ಪ್ರಸರಣದ ಗ್ರಿಡ್ ಮಾಡಲು ನಿರ್ಧರಿಸಿದ್ದಾರೆ. ಅವರ ನಿರ್ಧಾರವೀಗ ಅನೇಕರ ಕಣ್ಣನ್ನು ಕೆಂಪಾಗಿಸಿದೆ.

ಹೆಸ್ಕಾಂನ ವಿದ್ಯುತ್ ಗ್ರಿಡ್ ವಿವಾದ: ಧಾರವಾಡದ ಪಾರಂಪರಿಕಾ ಕಟ್ಟಡಗಳಿಗೆ ಧಕ್ಕೆ ಆತಂಕ
ಹೆಸ್ಕಾಂನ ವಿದ್ಯುತ್ ಗ್ರಿಡ್ ವಿವಾದ: ಧಾರವಾಡದ ಪಾರಂಪರಿಕಾ ಕಟ್ಟಡಗಳಿಗೆ ಧಕ್ಕೆ ಆತಂಕ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: Ganapathi Sharma

Updated on:Aug 07, 2023 | 5:06 PM

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ (Dharawad) ಸಾಕಷ್ಟು ಪುರಾತನ ಕಟ್ಟಡಗಳಿವೆ. ಅಂಥ ಕಟ್ಟಡಗಳಲ್ಲಿ (Heritage Buildings) ವಿವಿಧ ಸರಕಾರಿ ಕಚೇರಿಗಳು ನಡೆಯುತ್ತಿವೆ. ಈ ಕಟ್ಟಡಗಳಿಂದಲೇ ನಗರದ ಸೌಂದರ್ಯ ಹೆಚ್ಚಿದೆ ಅಂದರೆ ತಪ್ಪಾಗಲಾರದು. ಇದೀಗ ಧಾರವಾಡದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆವರಣದಲ್ಲಿ ಹೆಸ್ಕಾಂನವರು ವಿದ್ಯುತ್ ಪ್ರಸರಣದ ಗ್ರಿಡ್ ಮಾಡಲು ನಿರ್ಧರಿಸಿದ್ದಾರೆ. ಅವರ ನಿರ್ಧಾರವೀಗ ಅನೇಕರ ಕಣ್ಣನ್ನು ಕೆಂಪಾಗಿಸಿದೆ.

ಧಾರವಾಡ ನಗರದ ಕಾಲೇಜು ರಸ್ತೆಯಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಕಟ್ಟಡ ತುಂಬಾನೇ ಹಳೆಯದು. ಈ ಕಟ್ಟಡವನ್ನು 1856 ರಲ್ಲಿಯೇ ನಿರ್ಮಿಸಲಾಗಿತ್ತು. ಇದೀಗ ಪ್ರದೇಶವೆಲ್ಲಾ ಶಾಲಾ ಶಿಕ್ಷಣ ಇಲಾಖೆಗೆ ಸೇರಿದೆ. ಇದನ್ನು 1856 ರಲ್ಲಿಯೇ ನಿರ್ಮಾಣ ಮಾಡಲಾಗಿತ್ತು. ಈ ಆವರಣದಲ್ಲಿ ಇಂಥ ಹಲವಾರು ಕಟ್ಟಡಗಳಿದ್ದು, ಧಾರವಾಡದ ಸೌಂದರ್ಯಕ್ಕೆ ಇದೂ ಒಂದು ಕಾರಣ. ಆದರೆ ಇದೀಗ ಈ 17 ಎಕರೆ ಪ್ರದೇಶದಲ್ಲಿ ಹೆಸ್ಕಾಂನವರು ವಿದ್ಯುತ್ ಪ್ರಸರಣದ ಗ್ರಿಡ್ ಹಾಕಲು ನಿರ್ಧರಿಸಿದ್ದಾರೆ. ಅದರಲ್ಲೂ ಒಳಭಾಗದ ಮೂಲೆಯಲ್ಲಿ ಗ್ರಿಡ್ ನಿರ್ಮಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಜಿಲ್ಲಾಡಳಿತವನ್ನು ಹೆಸ್ಕಾಂ ಕೇಳಿಕೊಂಡಿದೆ. ಆದರೆ ಹೆಸ್ಕಾಂನ ಗ್ರಿಡ್ಗೆ ಇದೀಗ ಭಾರೀ ವಿರೋಧ ವ್ಯಕ್ತವಾಗಿದೆ. ಇದೊಂದು ಪಾರಂಪರಿಕೆ ಕಟ್ಟಡಗಳು ಇರುವಂಥ ಪ್ರದೇಶ. ಇಲ್ಲಿ ಗ್ರಿಡ್ ನಿರ್ಮಾಣವಾದರೆ, ಈ ಪ್ರದೇಶಕ್ಕೆ ಧಕ್ಕೆ ಆಗುತ್ತೆ ಅನ್ನೋದು ಸ್ಥಳೀಯರ ಆಕ್ರೋಶ.

ಈ ಗ್ರಿಡ್ ನಿರ್ಮಾಣಕ್ಕೆ 20 ಗುಂಟೆ ಜಮೀನು ಬೇಕಾಗಿದೆ. ಅಲ್ಲದೇ ಈ ಪ್ರದೇಶ ಧಾರವಾಡ ನಗರದ ಹೃದಯ ಭಾಗದಲ್ಲಿ ಇರೋದ್ರಿಂದ ಇಲ್ಲಿ ಗ್ರಿಡ್ ನಿರ್ಮಾಣವಾದರೆ ಮುಂದಿನ ಮೂರು ದಶಕಗಳವರೆಗೆ ನಗರಕ್ಕೆ ವಿದ್ಯುತ್ ಸಮಸ್ಯೆ ಇರೋದಿಲ್ಲ ಅನ್ನೋದು ಹೆಸ್ಕಾಂನವರ ಲೆಕ್ಕಾಚಾರ. ಆದರೆ ಗ್ರಿಡ್ ನಿರ್ಮಾಣಕ್ಕೆ ಸಾಕಷ್ಟು ಮರಗಳನ್ನು ಕತ್ತರಿಸಬೇಕಾಗುತ್ತದೆ. ಈ ಗ್ರಿಡ್ 220 ಕಿಲೋ ವ್ಯಾಟ್ ಸಾಮರ್ಥ್ಯದ್ದಾಗಿದ್ದರಿಂದ ಸುತ್ತಮುತ್ತಲಿನವರಿಗೆ ಆತಂಕ ಶುರುವಾಗಿದೆ. ಇದೇ ಆವರಣದಲ್ಲಿ ಡಯಟ್ ಆದರ್ಶ ಪ್ರಾಥಮಿಕ ಶಾಲೆಯೂ ಇದೆ. ಅಲ್ಲದೆ ಈ ಆವರಣದ ಸುತ್ತಮುತ್ತಲೆಲ್ಲಾ ಮನೆಗಳಿರೋದ್ರಿಂದ ಇಲ್ಲಿ ಗ್ರಿಡ್ ಬೇಡ ಅನ್ನೋ ಬೇಡಿಕೆ ಕೇಳಿ ಬಂದಿದೆ.

ಆದರೆ ಮುಂದಿನ 30 ವರ್ಷದ ಲೆಕ್ಕ ಮುಂದಿಟ್ಟುಕೊಂಡು ಇದೇ ಪ್ರದೇಶದಲ್ಲಿ ಗ್ರಿಡ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅನೇಕ ವರ್ಷಗಳಿಂದ ನಗರದಲ್ಲಿ ವಿದ್ಯುತ್ ಸಮಸ್ಯೆ ಆಗುತ್ತಿದ್ದು, ಆ ಸಮಸ್ಯೆ ನೀಗಿಸಲು ಡಿಸಿ ಕಚೇರಿ ಸುತ್ತಮುತ್ತವೇ ಈ ಗ್ರಿಡ್ ನಿರ್ಮಾಣದ ಅವಶ್ಯಕತೆ ಇದೆ. ಇದೀಗ ಡಯಟ್ ಆವರಣದಲ್ಲಿಯೇ ಇದಕ್ಕೆ ಜಾಗ ಕೊಡಲು ನಿರ್ಧರಿಸಲಾಗಿದೆ ಅನ್ನೋದು ಜಿಲ್ಲಾಡಳಿತದ ವಾದ.

ಇದನ್ನೂ ಓದಿ: ಗೋಲ್ಡ್ ಕ್ರೌನ್ ಸಬ್‌ಲೈಮ್ ಬಿಲ್ಡರ್ಸ್‌ಗೆ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದ ಗ್ರಾಹಕರ ಆಯೋಗ

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಡಯಟ್ ಸಂಸ್ಥೆಯ ನಿವೃತ್ತ ಅಧಿಕಾರಿ ಗುರುಮೂರ್ತಿ ಯರಗಂಬಳಮಠ, ಗ್ರಿಡ್ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಈ ಆವರಣದಲ್ಲಿ ಈ ಮುಂಚೆಯೂ ಬೇರೆ ಬೇರೆ ಇಲಾಖೆಯವರು ಜಾಗವನ್ನು ಕೇಳಿದ್ದರು. ಇಲ್ಲಿ ಸಂಸ್ಥೆಗೆ ಈ ಜಾಗ ಬೇಕೇ ಬೇಕು. ಮುಂದಿನ ದಿನಗಳಲ್ಲಿ ಸಂಸ್ಥೆಯ ಬೇರೆ ಬೇರೆ ಕೆಲಸಗಳಿಗೆ ಜಾಗದ ಅವಶ್ಯಕತೆ ಇದೆ. ಕೇಳಿದವರಿಗೆಲ್ಲಾ ಜಾಗ ನೀಡುತ್ತಾ ಹೋದರೆ, ನಾಳೆ ಸಂಸ್ಥೆಗೆ ಜಾಗವೇ ಉಳಿಯೋದಿಲ್ಲ. ಇದೇ ಕಾರಣಕ್ಕೆ ಇಲ್ಲಿ ಗ್ರಿಡ್ ನಿರ್ಮಾಣಕ್ಕೆ ಅವಕಾಶ ಕೊಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಲ್ಲದೇ ಈ ಪ್ರದೇಶದಲ್ಲಿ ಮನೆ, ಆಸ್ಪತ್ರೆ, ಶಾಲೆಗಳಿವೆ. ಇಂಥ ಜನನಿಬಿಡ ಪ್ರದೇಶದಲ್ಲಿ ಗ್ರಿಡ್ ಮಾಡೋದು ಎಷ್ಟು ಸರಿ ಅಂತಾ ಅವರು ಪ್ರಶ್ನಿಸುತ್ತಾರೆ.

ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಗ್ರಿಡ್ ನಿರ್ಮಾಣಕ್ಕೆ 20 ಗುಂಟೆಯಷ್ಟೇ ಬೇಕು. ಇದು ನಗರದ ಹೃದಯ ಭಾಗದಲ್ಲಿ ಇರೋದ್ರಿಂದ ಇಲ್ಲಿಯೇ ಮಾಡಿದರೆ ಒಳ್ಳೆಯದು ಅನ್ನೋದು ಹೆಸ್ಕಾಂ ಅಧಿಕಾರಿಗಳ ಲೆಕ್ಕಾಚಾರ. ಮುಂದಿನ ಮೂರು ದಶಕಗಳವರೆಗೆ ಈ ಗ್ರಿಡ್ ಸಾಕಷ್ಟು ಪ್ರಯೋಜನಕ್ಕೆ ಬರುತ್ತದೆ. ಈಗಾಗಲೇ ಇಲ್ಲಿ ಗ್ರಿಡ್ ಬೇಡ ಅಂತಾ ಅನೇಕರು ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಹೆಸ್ಕಾಂನವರು ಒಪ್ಪುವಂಥ ಜಾಗ ಬೇರೆ ಕಡೆಗೆ ಸಿಕ್ಕರೆ ಅಲ್ಲಿಯೇ ಗ್ರಿಡ್ ನಿರ್ಮಾಣ ಮಾಡಲಾಗುತ್ತದೆ. ಇಲ್ಲವಾದಲ್ಲಿ ಇಲ್ಲಿಯೇ ಗ್ರಿಡ್ ನಿರ್ಮಾಣ ಅನಿವಾರ್ಯ ಅನ್ನುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Mon, 7 August 23