Hubballi bit coin trade | ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಅನಾಹುತಕಾರಿ ಬಿಟ್ ಕಾಯಿನ್ ದಂದೆ! ಏನಿದರ ವೃತ್ತಾಂತ?

Hubballi bit coin trade | ಅಮಿತಾಬ್ ಬಚ್ಚನ್ ಮತ್ತು ರತನ್ ಟಾಟಾ ಮುಂತಾದ ಖ್ಯಾತನಾಮರೆಲ್ಲಾ ಬಿಟ್ ಕಾಯಿನ್ ನಲ್ಲಿ ಇನ್ವೆಸ್ಟ್ ಮಾಡಿ ಕೋಟ್ಯಾಂತರ ಗಳಿಕೆ ಮಾಡಿದ್ದಾರೆ ಎಂದು ಖದೀಮರು ಇವರಿಗೆಲ್ಲಾ ನಂಬಿಸಿದ್ದಾರೆ. ದೆಹಲಿ ಮೂಲದ ಐದು ಮಂದಿ ಹುಬ್ಬಳ್ಳಿಯ ವಾಪಪ್ಪ ಲೋಕಪ್ಪ ಎಂಬ ವ್ಯಾಪಾರಿಗೆ ಈ ರೀತಿ 45 ಲಕ್ಷ ರೂ ಮೋಸ ಮಾಡಿದ್ದಾರೆ.

  • TV9 Web Team
  • Published On - 10:55 AM, 15 Feb 2021
Hubballi bit coin trade | ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಅನಾಹುತಕಾರಿ ಬಿಟ್ ಕಾಯಿನ್ ದಂದೆ! ಏನಿದರ ವೃತ್ತಾಂತ?
ಅಮಿತ್ ಭಾರದ್ವಾಜ್(ಎಡ)

ಹುಬ್ಬಳ್ಳಿ: ಛೋಟಾ ಮುಂಬಯಿ ಎಂದೇ ಪರಿಗಣಿತವಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಬಿಟ್ ಕಾಯಿನ್ ದಂಧೆ ನಡೆಯುತ್ತಿದೆ. ಡಿಜಿಟಲ್ ಕರೆನ್ಸಿ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ ಹಾಕಲಾಗಿದೆ. ಟಿವಿ9 ಬಿಟ್ ಕಾಯಿನ್ ದಂಧೆಯ ಕರಾಳ ಲೋಕವನ್ನು ಇದೀಗ ಬಿಚ್ಚಿಟ್ಟಿದೆ. ಹುಬ್ಬಳ್ಳಿಯ ತೊರವಿಹಕ್ಕಲ ವ್ಯಾಪಾರಿಗೆ ಬರೋಬ್ಬರಿ 45 ಲಕ್ಷ ಮಕ್ಮಲ್ ಟೋಫಿ ಹಾಕಲಾಗಿದೆ. ಇದು ಕಳೆದ 5 ವರ್ಷದಿಂದ ನಗರದಲ್ಲಿ ನಡೆಯುತ್ತಿರುವ ಮೋಸದ ಮಯಾಜಾಲವಾಗಿದೆ. ಮನಿ ಡಬ್ಲಿಂಗ್ ಹೆಸರಿನಲ್ಲಿ ಉದ್ಯಮಿಗಳಯ ಮತ್ತು ವ್ಯಾಪಾರಿಗಳಿಗೆ ಹೀಗೆ ಬಿಗ್ ಚೀಟಿಂಗ್ ಮಾಡಲಾಗುತ್ತಿದೆ.

ಅಮಿತಾಬ್ ಬಚ್ಚನ್ ಮತ್ತು ರತನ್ ಟಾಟಾ ಹೆಸರಿನಲ್ಲಿಯೂ ಮೋಸ ನಡೆದಿರುವುದು ಗಮನಾರ್ಹವಾಗಿದೆ. ಈ ಖ್ಯಾತನಾಮರೆಲ್ಲಾ ಬಿಟ್ ಕಾಯಿನ್ ನಲ್ಲಿ ಇನ್ವೆಸ್ಟ್ ಮಾಡಿ ಕೋಟ್ಯಾಂತರ ಗಳಿಕೆ ಮಾಡಿದ್ದಾರೆ ಎಂದು ಖದೀಮರು ಹೂಡಿಕೆದಾರರಿಗೆ ನಂಬಿಸಿದ್ದಾರೆ. ದೆಹಲಿ ಮೂಲದ ಐದು ಮಂದಿ ಹುಬ್ಬಳ್ಳಿಯ ವಾಪಪ್ಪ ಲೋಕಪ್ಪ ಎಂಬ ವ್ಯಾಪಾರಿಗೆ ಈ ರೀತಿ 45 ಲಕ್ಷ ರೂ ಮೋಸ ಮಾಡಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಆರಂಭದಲ್ಲಿ ಆರೋಪಿಯು ಪ್ರತಿಷ್ಠಿತ ಖಾಸಗಿ ಹೋಟೆಲ್ ನಲ್ಲಿ ಉದ್ಯಮಿಗಳನ್ನ ಸೇರಿಸಿ ಸೆಮಿನಾರ್ ಮಾಡಿ, ಜನರನ್ನು ನಂಬಿಸಲೆತ್ನಿಸಿದ್ದಾನೆ. ಸೆಮಿನಾರ್ ನಲ್ಲಿ ಬ್ರೈನ್ ವಾಶ್ ಮಾಡಿ ಲಕ್ಷ ಲಕ್ಷ ಹೂಡಿಕೆಗೆ ಪುಸಲಾಯಿಸಲಾಗಿದೆ. ಹುಬ್ಬಳ್ಳಿಯ ಎಜೆಂಟ್ ಚೇತನ್ ಎಂಬ ವ್ಯಕ್ತಿಯ ಮೂಲಕ ಈ ಸೆಮಿನಾರ್​ ಆಯೋಜನೆಯಾಗಿತ್ತು. ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್ ಸೇರಿದಂತೆ ಐವರು ಈ ಮೋಸ ಜಾಲದಲ್ಲಿ ದೋಖಾ ಮಾಡಿದ್ದಾರೆ ಎಂದು ದೂರುದಾರರು ಟಿವಿ 9ಗೆ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ನಗರವೊಂದರಲ್ಲೇ ಅಂದಾಜು 10 ಕೋಟಿ ರೂ ಪ್ರಮಾಣದ ವಂಚನೆಯಾಗಿದೆ. ಐವರ ಖದೀಮರ ಮಾತು ಕೇಳಿ ಸಾಕಷ್ಟು ಜನ ದುಡ್ಡು ಹಾಕಿರೋ ಬಗ್ಗೆ ಮಾಹಿತಿಯಿದೆ.

ಕಳೆದ ಡಿಸೆಂಬರ್ ನಲ್ಲೂ ಬಿಟ್ ಕಾಯಿನ್ ದಂಧೆಯ ಸದ್ದು ಕೇಳೀಬಂದಿತ್ತು. ಹುಬ್ಬಳ್ಳಿಯ ವಿನಾಯಕ ಲಾಡ್ಜ್ ನಲ್ಲಿ ವ್ಯಕ್ತಿಯೊಬ್ಬರು ಸುಸೈಡ್ ಮಾಡಿಕೊಂಡಿದ್ದರು. ಡಿಸೆಂಬರ್ 17ರಂದು ನೇಣಿಗೆ ಶರಣಾಗಿದ್ದ ಆಂಧ್ರ ಮೂಲದ ಡಿ.ರಾಜೇಂದ್ರ ಎಂಬ ವ್ಯಕ್ತಿ ಸಾವಿಗೂ ಮುನ್ನ ಬರೆದ ಡೆತ್ ನೋಟ್ ಬಗ್ಗೆ ಎಫ್‌ಐಆರ್ ನಲ್ಲಿ ಉಲ್ಲೇಖವಾಗಿತ್ತು.

ಆತ್ಮಹತ್ಯೆ ಮಾಡಿಕೊಂಡಿದ್ದ ರಾಜೇಂದ್ರ ತನಗೆ ಜೀವ ಬೆದರಿಕೆ ಇರುವ ಬಗ್ಗೆ ಡೆತ್ ನೋಟ್ ಬರೆದು, ಮಗನಿಗೆ ಮೇಸೆಜ್ ಮಾಡಿದ್ದರು. ಹುಬ್ಬಳ್ಳಿಯ ಶಿವ, ಬೆಂಗಳೂರಿನ ರಾಜೇಶ್​, ಚೆನ್ನೈನ ಹರಿನಾರಾಯಣ ಮತ್ತು ಜುನೇದ್ ಹೆಸರುಗಳನ್ನು ರಾಜೇಂದ್ರ ಡೆತ್ ನೋಟ್​ನಲ್ಲಿ ಉಲ್ಲೇಖಿಸಿದ್ದರು. ಮಾನಸಿಕ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ದೂರು ದಾಖಲಾಗಿತ್ತು. ಈ ಕೇಸ್ ನಲ್ಲೂ ಬಿಟ್ ಕಾಯಿನ್ ದಂದೆಯ ಕರಿನೆರಳು ಸೋಕಿತ್ತು. ರಾಜೇಂದ್ರ ಪುತ್ರ ಭುವನಕುಮಾರ್ ರಿಂದ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪೊಲೀಸರು ಆ ಕೇಸ್ ನ ತನೀಖೆ ನಡೆಸುತ್ತಿರೊವಾಗಲೇ ಇದೀಗ ಮತ್ತೊಂದು ಕೇಸ್ ಬಯಲಿಗೆ ಬಂದಿದೆ.

ಇದನ್ನೂ ಓದಿ: ಹ್ಯಾ”ಕಿಂಗ್” ಶ್ರೀಕಿ ಬಳಿ ಇದ್ದ ₹9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ.. ಬಯಲಾಯ್ತು ಮತ್ತಷ್ಟು ಕೃತ್ಯ