Old Hubballi Treason riots: ದೇಶದ್ರೋಹದ ಕಾನೂನು ವಾಪಸ್ ಪಡೆದು, ಕಾಂಗ್ರೆಸ್​ ಸರ್ಕಾರ ಆ 150 ಮಂದಿಗೆ ಜೈಲಿನಿಂದ ಮುಕ್ತಿ ಕೊಡುತ್ತದಾ?

ಹಳೇ ಹುಬ್ಬಳ್ಳಿ ಗಲಾಟೆ ಮತ್ತೆ ಮುನ್ನೆಲೆಗೆ ಬಂದಿದೆ. ಹೋರಾಟಗಾರರು ಅಮಾಯಕರೆಂದರೆ ಪೊಲೀಸರು ಸುಖಾಸುಮ್ಮನೆ ಅರೆಸ್ಟ್ ಮಾಡಿ‌ ಜೈಲಿಗೆ ಹಾಕಿಲ್ಲ ಅನ್ನೋ ಮಾತಿದೆ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅಮಾಯಕ ಮೇಲಿನ ಕೇಸ್ ಕೈ ಬಿಟ್ಟು ಅವರನ್ನು ಬಿಡುಗಡೆ ಮಾಡಬೇಕು ಅನ್ನೋ ಕೂಗು ಕೇಳಿ ಬಂದಿರೋದಂತೂ ನಿಜ.

Old Hubballi Treason riots: ದೇಶದ್ರೋಹದ ಕಾನೂನು ವಾಪಸ್ ಪಡೆದು, ಕಾಂಗ್ರೆಸ್​ ಸರ್ಕಾರ ಆ 150 ಮಂದಿಗೆ ಜೈಲಿನಿಂದ ಮುಕ್ತಿ ಕೊಡುತ್ತದಾ?
ದೇಶದ್ರೋಹದ ಕಾನೂನು ವಾಪಸ್ ಪಡೆಯುತ್ತದಾ ಕಾಂಗ್ರೆಸ್​ ಸರ್ಕಾರ?
Follow us
| Updated By: ಸಾಧು ಶ್ರೀನಾಥ್​

Updated on: Jun 11, 2023 | 9:33 AM

ಅದು ಇಡೀ ದೇಶದಲ್ಲಿ ಸುದ್ದಿಯಾದ ಗಲಾಟೆ ಪ್ರಕರಣ.. ಆ ಗಲಾಟೆಯಲ್ಲಿ ಭಾಗಿಯಾದವರಲ್ಲಿ ಕೆಲವರು ಇನ್ನೂ ಜೈಲಿನಲ್ಲಿದ್ದಾರೆ. ಪೊಲೀಸ್ ಠಾಣೆಗೆ ಕಲ್ಲು ತೂರಿ ಗಲಾಟೆ ಮಾಡಿದ್ದ ಕೆಲವರು ವರ್ಷದಿಂದ ಜೈಲಿನಲ್ಲಿದ್ದಾರೆ. ಇದೀಗ ಆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗ ಸುಮ್ಮನಿದ್ದವರು ಕಾಂಗ್ರೆಸ್ ಸರ್ಕಾರ ಬರುತ್ತಲೇ ಎದ್ದು ಕೂತಿದ್ದಾರೆ. ಅವರ ಮೇಲೆ ಹಾಕಿರೋ ದೇಶದ್ರೋಹದ ಕಾನೂನು (Treason) ವಾಪಸ್ ಪಡೆಯಬೇಕೆಂಬ ಕೂಗು ಕೇಳಿ ಬಂದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ (Karnataka Congress Government) ಬರುತ್ತಲೇ ಗಲಾಟೆ ಮಾಡಿದವರ ಪರ ಲಾಬಿ ಜೋರಾಗಿದೆ. ಹಾಗಾದ್ರೆ ಇಡೀ ದೇಶದಲ್ಲಿ ಸುದ್ದಿಯಾದ ಗಲಾಟೆ ಯಾವುದು ಅಂತೀರಾ ಈ ಸ್ಟೋರಿ ನೋಡಿ. ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ (Old Hubballi riots) ಯಾರಿಗೆ ಗೊತ್ತಿಲ್ಲ ಹೇಳಿ. ವರ್ಷಗಳ ಕೆಳಗೆ ನಡೆದ ಗಲಾಟೆ ಇಡೀ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಒಂದು ವಾಟ್ಸಪ್ ಸ್ಟೇಟಸ್ ನಿಂದ ಹೊತ್ತಿಕೊಂಡ ಬೆಂಕಿ, ಪೊಲೀಸ್ ಠಾಣೆಗೆ ಕಲ್ಲು ತೂರೋದು, ಪೊಲೀಸ್ ಜೀಪ್ ಮೇಲೆ ನಿಂತು ಗಲಾಟೆ ಮಾಡೋ ಮಟ್ಟಕ್ಕೆ ಹೋಗಿತ್ತು. ಅವತ್ತು ರಾತ್ರಿ ಇಡೀ ಹಳೇ ಹುಬ್ಬಳ್ಳಿ ಕೊತ ಕೊತ ಕುದಿಯುತ್ತಿತ್ತು. ಅದಾದ ಮೇಲೆ ಗಲಾಟೆ ಮುಗಿದು ವರ್ಷಗಳು ಕಳೆದರೂ ಸುಮಾರು 150 ಕ್ಕೂ ಅಧಿಕ ಜನ ಇನ್ನು ಜೈಲಿನಲ್ಲಿದ್ದಾರೆ.

ಇದೀಗ ಆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಮಾನವ ಹಕ್ಕುಗಳ ಹೋರಾಟಗಾರು ಹಳೇ ಹುಬ್ಬಳ್ಳಿ ಗಲಭೆಯನ್ನ ಮುನ್ನೆಲೆಗೆ ತಂದಿದ್ದಾರೆ. ಹುಬ್ಬಳ್ಳಿಯಲ್ಲಿ ನಿನ್ನೆ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ತಾರತಮ್ಯದ ವಿಷಬೀಜವನ್ನು ಬಿತ್ತುವ ಯತ್ನವಾಗಿ ಹಳೇ ಹುಬ್ಬಳ್ಳಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಎಷ್ಟು ಅಸತ್ಯದಿಂದ ಕೂಡಿದೆ ಎಂಬುದಕ್ಕೆ ಈ ಪ್ರಕರಣದಲ್ಲಿ ದಾಖಲಿಸಿರುವ ದೇಶದ್ರೋಹದ ಕಲಂ ಸಾಕ್ಷಿಯಾಗಿದೆ.

ಈ ಪ್ರಕರಣದಲ್ಲಿ ಬಂಧಿತರಾಗಿರುವ 155 ಜನರಲ್ಲಿ 8 ಜನ ಮಾತ್ರ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. 148 ಜನ, ಜೈಲಿನಿಂದ ಹೊರಬರದಂತೆ ದುರುದ್ದೇಶಪೂರ್ವಕವಾಗಿ ದೇಶದ್ರೋಹದ ಕೇಸ್ ದಾಖಲಿಸಿದ್ದಾರೆ. 14 ತಿಂಗಳಿನಿಂದ 148 ಜನ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ದೇಶದ್ರೋಹದ ಕಲಂ ಆಡಿ 148 ಜನರ ಕುಟುಂಬಗಳು, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತುಂಬಲಾರದ ನಷ್ಟಕ್ಕೆ ಒಳಗಾಗಿದ್ದಾರೆಂದರು. ದೇಶದ್ರೋಹದ ಕಾನೂನಿನ ಹೆಸರಿನಲ್ಲಿ ದುರುಪಯೋಗವಾಗುತ್ತಿರುದನ್ನು ತಡೆಯಲು ಕಾನೂನಿನ ತಿದ್ದುಪಡಿ ಮಾಡುವುದು ದೇಶದ ಹಿತದೃಷ್ಟಿಯಿಂದ ಅತ್ಯವಶ್ಯವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಸುನೀಲ್ ಸಾಂಡ್ರಾ ಒತ್ತಾಯಿಸಿದರು.

ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದಿನಾಂಕ 16-04-2022 ರಂದು 156 ಜನರ ಮೇಲಿರುವ ಸ್ಪೆಷಲ್ ಸಿ.ನಂ. 2263/22 ರ ಪ್ರಕರಣ ಹಿಂಪಡೆಯಲು ಸಿ.ಆರ್.ಪಿ.ಸಿ. ಕಲಂ 371 ರ ಅಡಿ ಆವಕಾಶವಿದೆ. ಆದ್ದರಿಂದ ಈ ಪ್ರಕರಣದ ಕುರಿತು ಗಂಭೀರ ಗಮನ ನೀಡಿ, 156 ಜನರ ಮೇಲಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲರಿಗೆ ಪತ್ರ ಬರೆದಿರುವುದಾಗಿ ಹೇಳಿದರು.

ಇಂಥ ಪ್ರಕರಣಗಳಲ್ಲಿ 321ರ ಅಡಿ ಆರೋಪಿತರನ್ನು ಬಿಡುಗಡೆ ಗೊಳಿಸಿದಂತಹ ಸಾಕಷ್ಟು ಉದಾಹರಣೆಗಳಿವೆ. ಉತ್ತರ ಪ್ರದೇಶದ ಮುಜಪ್ಪುರನಗರದಲ್ಲಿ 2013ರಲ್ಲಿ ನಡೆದ ಪ್ರಕರಣದಲ್ಲಿ 60 ಜನ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದು ಹಾಗೂ 50 ಸಾವಿರ ಜನ ಸ್ಥಳಾಂತರಗೊಂಡಿದ್ದರು. ಆ ಪ್ರಕರಣದಲ್ಲಿ ಮಾಜಿ ಕೇಂದ್ರ ಮಂತ್ರಿ ಸಂದೀಪ ಬಾಲಿಯನ, ವಿ.ಎಚ್.ಪಿ. ಧುರೀಣಿ ಸಾದ್ವಿ ಪ್ರಾಚಿ, ಬಿ.ಜೆ.ಪಿ. ಶಾಸಕ ಉಮೇಶ ಮಲ್ಲಿಕ, ಸಂಗೀತ ಸೋಮ ಹಾಗೂ ಬಿ.ಜೆ.ಪಿ ಸಂಸದರಾದ ಸುರೇಶ ರಾಣಾ ಹಾಗೂ ಬರ್ತೇಂದ್ರ ಸಿಂಗ್ ಇವರೆಲ್ಲ ಆರೋಪಿಗಳಾಗಿದ್ದರು.

ದಳ್ಳುರಿ ಪ್ರಕರಣದ ಹಿನ್ನೆಲೆಯಲ್ಲಿ ಮುಜಪ್ಪುರನಗರ ಹಾಗೂ ಶಾಮಿಲಿ ನಗರದಲ್ಲಿ 1450 ಜನರ ಮೇಲೆ 500 ವಿವಿಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಪ್ರಕರಣದಲ್ಲಿ 131 ಪ್ರಕರಣಗಳನ್ನು ಹಿಂಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಆದೇಶ ನೀಡಿದ್ದರು ಎಂದರು‌. ಅದನ್ನೇ ಮಾದರಿಯಾಗಿಟ್ಟುಕೊಂಡು ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಭಾಗಿಯಾದ ಅಮಾಯಕರನ್ನು ಕೈಬಿಡಬೇಕೆಂದು ಗುರುನಾಥ ಉಳ್ಳಿಕಾಶಿ, ಸಮತಾ ಸೇನೆ ರಾಜ್ಯಾಧ್ಯಕ್ಷ ಆಗ್ರಹಿಸಿದರು.

ಒಟ್ಟಾರೆ ಹಳೇ ಹುಬ್ಬಳ್ಳಿ ಗಲಾಟೆ ಮತ್ತೆ ಮುನ್ನೆಲೆಗೆ ಬಂದಿದೆ. 156 ಜನರಲ್ಲಿ 8 ಜನ ಮಾತ್ರ ಬೇಲ್ ಮೇಲೆ ಹೊರಗೆ ಬಂದಿದ್ದು, ಉಳಿದವರೆಲ್ಲ ಜೈಲಲ್ಲಿ ಇದ್ದಾರೆ. ಹೋರಾಟಗಾರರು ಅಮಾಯಕರೆಂದರೆ ಪೊಲೀಸರು ಸುಖಾಸುಮ್ಮನೆ ಅರೆಸ್ಟ್ ಮಾಡಿ‌ ಜೈಲಿಗೆ ಹಾಕಿಲ್ಲ ಅನ್ನೋ ಮಾತಿದೆ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅಮಾಯಕ ಮೇಲಿನ ಕೇಸ್ ಕೈ ಬಿಟ್ಟು ಅವರನ್ನು ಬಿಡುಗಡೆ ಮಾಡಬೇಕು ಅನ್ನೋ ಕೂಗು ಕೇಳಿ ಬಂದಿರೋದಂತೂ ನಿಜ.

ಇದನ್ನೂ ಓದಿ: Karnataka Breaking Kannada News Live: ಧಾರವಾಡ ರಸ್ತೆ ಅಪಘಾತದಲ್ಲಿ ಮೂವರ ಸಾವು

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ