ಡಿ.ಕೆ.ಶಿವಕುಮಾರ್​ ಹೆಸರು ಬಳಸಿ ವಂಚನೆ.. ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಉಚ್ಚಾಟನೆ

ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಉಚ್ಚಾಟನೆ ಮಾಡಿ ಹು-ಧಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಮ್ರಾನ್ ಎಲಿಗಾರ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ ಶಿವಕುಮಾರ್​ರವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇನೆಂದು ಜನರಿಗೆ ನಂಬಿಸಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಕೇಳಿಬಂದಿದೆ.

  • TV9 Web Team
  • Published On - 9:31 AM, 28 Feb 2021
ಡಿ.ಕೆ.ಶಿವಕುಮಾರ್​ ಹೆಸರು ಬಳಸಿ ವಂಚನೆ.. ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಉಚ್ಚಾಟನೆ
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ಪೂರ್ಣಿಮಾ ಸವದತ್ತಿ ಉಚ್ಚಾಟನೆ ಮಾಡಿ ಹು-ಧಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಮ್ರಾನ್ ಎಲಿಗಾರ ಆದೇಶ ಹೊರಡಿಸಿದ್ದಾರೆ. ಡಿಕೆ ಶಿವಕುಮಾರ್​ರ ಕಪ್ಪು ಹಣದಿಂದ ಸಾಲ ಕೊಡಿಸುವುದಾಗಿ ಕೇಳಿ ವಂಚನೆ ಮಾಡಿರುವ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಎಚ್ಚೆತ್ತ ಕಾಂಗ್ರೆಸ್‌ ಹುಬ್ಬಳ್ಳಿ-ಧಾರವಾಡದ ಪೂರ್ಣಿಮಾ ಸವದತ್ತಿ ಉಚ್ಚಾಟನೆ ಮಾಡಿ ಆದೇಶ ನೀಡಿದೆ.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ ಶಿವಕುಮಾರ್​ರವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡುತ್ತೇನೆಂದು ಜನರಿಗೆ ನಂಬಿಸಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ಕೇಳಿಬಂದಿದೆ. ‘‘ನಾನು ಕೆಪಿಸಿಸಿ ಕಚೇರಿಯಿಂದ ಕರೆ ಮಾಡುತ್ತಿದ್ದೇನೆ. ನನಗೆ 10,000 ಸಾವಿರ ಹಣವನ್ನು ನೀಡಿದರೆ ಡಿಕೆಶಿಯವರ ಕಪ್ಪು ಹಣದಿಂದ ನಿಮಗೆ ಸಾಲವನ್ನು ಕೊಡುತ್ತೇವೆ’’ ಎಂದು ಹೇಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿ ಸುಮಾರು 35ಕ್ಕೂ ಹೆಚ್ಚು ಜನರಿಗೆ ಮಹಾಮೋಸ ಮಾಡಿರುವ ಆರೋಪಗಳು ಕೇಳಿಬಂದಿತ್ತು.

ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಡಿ.ಕೆ. ಶಿವಕುಮಾರ್ ಹೆಸರಿನ ಜೊತೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹೆಸರು ಕೂಡಾ ಬಳಕೆ ಮಾಡಿ ಜನರಿಗೆ ವಂಚಿಸಿದ್ದಾರೆ. ನನ್ನ ಮನೆಗೆ 5 ಲಕ್ಷ ಸಾಲಬೇಕಿತ್ತು. ಇದಕ್ಕೆ ಸಾಲ ನೀಡಬೇಕಾದರೆ 10 ಸಾವಿರ ರೂ. ಹಣವನ್ನು ನೀಡಿ ಎಂದು ಪೂರ್ಣಿಮಾ ಸವದತ್ತಿ ಹೇಳಿದ್ದರು. ನಿಜವೆಂದು ನಂಬಿ ಕೇಳಿದಷ್ಟು ಹಣವನ್ನು ನೀಡಿದ್ದೆ. ಆದರೆ ಯಾವುದೇ ಹಣವನ್ನು ನೀಡದೇ ನಂಬಿಕೆಯ ದ್ರೋಹ ಮಾಡಿದ್ದಾರೆಂದು ಮೋಸ ಹೋದ ಅಕಾಶ್ ತಿಳಿಸಿದ್ದರು.

ಸಾಲವನ್ನು ಕೊಡಿ ಎಂದು ಕೇಳಿದರೆ ನನಗೆ ನೀವು ಹಣವನ್ನೇ ನೀಡಿಲ್ಲ ಎಂದು ಹೇಳಿದ್ದ ಪೂರ್ಣಿಮಾ ಇದೀಗ ಪರಾರಿಯಾಗಿದ್ದಾರೆ. ಹಣವನ್ನು ನೀಡಿ ಎರಡು ವರ್ಷವಾದರೂ ಸಾಲವನ್ನು ಪಡೆಯದ ಜನರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪೂರ್ಣಿಮಾ ಸವದತ್ತಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಅಲ್ಲದೇ ಸಾಲ ಮಾಡಿ ಹಣ ನೀಡಿದವರು ನಮ್ಮ ಹಣ ನಮಗೆ ಕೊಡಿಸಿ ಎಂದು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: ಡಿ.ಕೆ.ಶಿವಕುಮಾರ್​ ಕಪ್ಪು ಹಣ ನೀಡಿ ಸಾಲ ನೀಡುತ್ತೇನೆಂದು ಜನರಿಗೆ ಪಂಗನಾಮ ಹಾಕಿದ ‘ಕೈ’ ನಾಯಕಿ