ಶೇ.1ರಷ್ಟಿರೋ ಮಂಗಳಮುಖಿಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳದವರು ರಾಜ್ಯ ಹೇಗೆ ಆಳ್ತಾರೆ? ಪ್ಯಾಕೇಜ್ ನೀಡದ್ದಕ್ಕೆ ಸಿಎಂ ವಿರುದ್ಧ ಆಕ್ರೋಶ

ನಮ್ಮನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕಿದೆ. ಈ ಸಂಬಂಧ ಸುಪ್ರಿಂಕೋರ್ಟ್‌ನಿಂದಲೇ ಆದೇಶವೂ ಆಗಿದೆ. ಆದರೂ ಶೇ.1ರಷ್ಟು ಇರುವ ನಮ್ಮನ್ನು ಕಡೆಗಣಿಸಲಾಗಿದೆ. ಶೇ.1ರಷ್ಟಿರೋ ನಮಗೆ ಸರ್ಕಾರದ ಪ್ಯಾಕೇಜ್‌ನಲ್ಲಿ ಏನೂ ಇಲ್ಲ. ಮಂಗಳಮುಖಿಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳದವರು ರಾಜ್ಯ ಹೇಗೆ ಆಳ್ತಾರೆ? ಎಂದು ಸರ್ಕಾರದ ವಿರುದ್ಧ ಮಂಗಳಮುಖಿಯರು ಆಕ್ರೋಶ ಹೊರ ಹಾಕಿದ್ದಾರೆ.

ಶೇ.1ರಷ್ಟಿರೋ ಮಂಗಳಮುಖಿಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳದವರು ರಾಜ್ಯ ಹೇಗೆ ಆಳ್ತಾರೆ? ಪ್ಯಾಕೇಜ್ ನೀಡದ್ದಕ್ಕೆ ಸಿಎಂ ವಿರುದ್ಧ ಆಕ್ರೋಶ
ಮುಖ್ಯಮಂತ್ರಿ ಯಡಿಯೂರಪ್ಪ

ಧಾರವಾಡ: ಮಹಾಮಾರಿ ಕೊರೊನಾಗೆ ಸಿಲುಕಿ ಜನ ನರಳುತ್ತಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಬದುಕು ಸಾಗಿಸುವುದೇ ದೊಡ್ಡ ಸವಾಲಾಗಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಸದ್ಯ ಬಿಎಸ್ ಯಡಿಯೂರಪ್ಪ ಲಾಕ್ಡೌನ್ ಪ್ಯಾಕೇಜ್ ಘೋಷಿಸಿದ್ದು ತಮಗೆ ಪ್ಯಾಕೇಜ್ ನೀಡದ್ದಕ್ಕೆ ಮಂಗಳಮುಖಿಯರು ಆಕ್ರೋಶ ಹೊರ ಹಾಕಿದ್ದಾರೆ. ಧಾರವಾಡದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ನಮ್ಮನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕಿದೆ. ಈ ಸಂಬಂಧ ಸುಪ್ರಿಂಕೋರ್ಟ್‌ನಿಂದಲೇ ಆದೇಶವೂ ಆಗಿದೆ. ಆದರೂ ಶೇ.1ರಷ್ಟು ಇರುವ ನಮ್ಮನ್ನು ಕಡೆಗಣಿಸಲಾಗಿದೆ. ಶೇ.1ರಷ್ಟಿರೋ ನಮಗೆ ಸರ್ಕಾರದ ಪ್ಯಾಕೇಜ್‌ನಲ್ಲಿ ಏನೂ ಇಲ್ಲ. ಮಂಗಳಮುಖಿಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳದವರು ರಾಜ್ಯ ಹೇಗೆ ಆಳ್ತಾರೆ? ಎಂದು ಸರ್ಕಾರದ ವಿರುದ್ಧ ಮಂಗಳಮುಖಿಯರು ಆಕ್ರೋಶ ಹೊರ ಹಾಕಿದ್ದಾರೆ.

ತಾವು ಕಷ್ಟದಲ್ಲಿದ್ದು ನೆರವು ನೀಡುವಂತೆ ಮಂಗಳಮುಖಿಯರು ಕೇಳಿಕೊಂಡಿದ್ದರು. ಈ ಹಿನ್ನೆಲೆ ಕಿಟ್ ವಿತರಿಸಲು ಕುಬೇರಗೌಡ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್‌ ಸೇರಿ ಸ್ವಯಂ ಸೇವಾ ಸಂಸ್ಥೆಯಿಂದ ಕಿಟ್ ಕೊಡಲು ಬಂದಾಗ ಕಿಟ್ ಪಡೆದ ಬಳಿಕ ಮಂಗಳಮುಖಿಯರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಇದನ್ನೂ ಓದಿ: Sundar Pichai Birthday: ಗೂಗಲ್​ ಸಿಇಓ ಸುಂದರ್​ ಪಿಚೈ ಅವರ ನಿಜವಾದ ಹೆಸರೇನು ಗೊತ್ತಾ? ಪಿಚೈ ಕುರಿತಾದ ಅಪರೂಪದ 5 ಸಂಗತಿಗಳು ಇಲ್ಲಿವೆ