ಇಟ್ಟಿಗಟ್ಟಿ ಅಪಘಾತ; ಮುಂದುವರಿದ ಸಾವಿನ ಸರಣಿ

ದಾವಣಗೆರೆಯಿಂದ ಗೆಳತಿಯರ ಜೊತೆಗೆ ಗೋವಾಕ್ಕೆ ತೆರಳುತ್ತಿದ್ದಾಗ ನಡೆದಿದ್ದ ಅಪಘಾತದಲ್ಲಿ ಒಂಬತ್ತು ಮಹಿಳೆಯರು ಸೇರಿ ಒಟ್ಟು ಹನ್ನೊಂದು ಜನ ಸಾವನ್ನಪ್ಪಿದ್ದರು.

  • TV9 Web Team
  • Published On - 17:46 PM, 24 Jan 2021
ಇಟ್ಟಿಗಟ್ಟಿ ಅಪಘಾತ; ಮುಂದುವರಿದ ಸಾವಿನ ಸರಣಿ
ಟೆಂಪೋ ಟ್ರಾವೆಲರ್​ಗೆ ಟಿಪ್ಪರ್​ ಡಿಕ್ಕಿ (ಸಂಗ್ರಹ ಚಿತ್ರ)

ಧಾರವಾಡ: ಜನವರಿ 15 ರಂದು ತಾಲೂಕಿನ ಇಟ್ಟಿಗಟ್ಟಿ ಬಳಿ ಟೆಂಪೋ ಟ್ರ್ಯಾವೆಲರ್​ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಇಂದು (ಜನವರಿ 24)  ಸಾವನ್ನಪ್ಪಿದ್ದಾರೆ.

ದಾವಣಗೆರೆಯಿಂದ ಗೆಳತಿಯರ ಜೊತೆಗೆ ಗೋವಾಕ್ಕೆ ತೆರಳುತ್ತಿದ್ದಾಗ ನಡೆದಿದ್ದ ಅಪಘಾತದಲ್ಲಿ ಒಂಬತ್ತು ಮಹಿಳೆಯರು ಸೇರಿ ಒಟ್ಟು ಹನ್ನೊಂದು ಜನರು ಸಾವನ್ನಪ್ಪಿದ್ದರು. ಈ ವೇಳೆ ತೀವ್ರಾ ಗಾಯಗೊಂಡಿದ್ದ ವೇದಾ ಮಂಜುನಾಥ ಎಂಬುವವರನ್ನು ಅಂಬ್ಯುಲೇನ್ಸ್ ಮೂಲಕ ಬೆಂಗಳೂರಿಗೆ ಸಾಗಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಮಹಿಳೆ ಶಿವಮೊಗ್ಗದ ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರ್​ರವರ ಸಂಬಂಧಿಯಾಗಿದ್ದು, ಕುಟುಂಬ ಸದಸ್ಯರು ಮಹಿಳೆಯ ಅಂಗಾಂಗಗಳನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾನ ಮಾಡಿದರು.

ಸವದತ್ತಿ ಸಮೀಪ ಬಸ್-ಕಾರು ಮುಖಾಮುಖಿ: ನಾಲ್ವರ ಸಾವು