ದುರ್ವಿಧಿ.. ಅಡ್ಡ ಬಂದ ನಾಯಿಗೆ ಬೈಕ್​ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆಯೂ ಸಾವು, ನಾಯಿನೂ ಸಾವು

ನಿಗದಿ ಗ್ರಾಮದ ಗಿರಿಶಾದ್ ಚಪ್ಪರಾರ್(43) ಮೃತಪಟ್ಟಿದ್ದು, ಕೂಲಿ ಕೆಲಸಕ್ಕೆಂದು ಧಾರವಾಡಕ್ಕೆ ಹೊರಟ್ಟಿದ್ದ ಮಹಿಳೆ ಪ್ರಕಾಶ್ ಅವರಲ್ಲಿ ಡ್ರಾಪ್ ಕೇಳಿದ್ದರು, ಇದಕ್ಕೆ ಒಪ್ಪಿದ ಪ್ರಕಾಶ್ ಆಕೆಯನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗುವಾಗ ಬೈಕ್​ಗೆ ನಾಯಿ ಅಡ್ಡ ಬಂದಿದೆ.

  • TV9 Web Team
  • Published On - 12:48 PM, 21 Jan 2021
ದುರ್ವಿಧಿ.. ಅಡ್ಡ ಬಂದ ನಾಯಿಗೆ ಬೈಕ್​ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆಯೂ ಸಾವು, ನಾಯಿನೂ ಸಾವು
ಬೈಕ್​ ಡಿಕ್ಕಿ: ಡ್ರಾಪ್ ತೆಗೆದುಕೊಂಡಿದ್ದ ಮಹಿಳೆಯೂ ಸಾವು, ನಾಯಿನೂ ಸಾವು

ಧಾರವಾಡ: ನಾಯಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ.

ನಿಗದಿ ಗ್ರಾಮದ ಗಿರಿಶಾದ್ ಚಪ್ಪರಾರ್(43) ಮೃತಪಟ್ಟಿದ್ದು, ಕೂಲಿ ಕೆಲಸಕ್ಕೆಂದು ಧಾರವಾಡಕ್ಕೆ ಹೊರಟ್ಟಿದ್ದ ಮಹಿಳೆ ಪ್ರಕಾಶ್ ಎಂಬುವವ ಬೈಕ್​​ನಲ್ಲಿ ಡ್ರಾಪ್ ಕೇಳಿದ್ದರು. ಅದಕ್ಕೆ ಒಪ್ಪಿದ ಪ್ರಕಾಶ್ ಆಕೆಯನ್ನು ಬೈಕ್​ನಲ್ಲಿ ಕರೆದುಕೊಂಡು ಹೋಗುವಾಗ ಬೈಕ್​ಗೆ ನಾಯಿ ಅಡ್ಡ ಬಂದಿದೆ. ಈ ಪರಿಣಾಮ ಅಪಘಾತ ಸಂಭವಿಸಿದೆ. ಇನ್ನು, ನಾಯಿ ಕೂಡ ಸಾವನ್ನಪ್ಪಿದ್ದು, ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್- ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು