ಗದಗ: ಇಡೀ ಪ್ರಪಂಚವನ್ನ ಛಿದ್ರ ಮಾಡಿದ ಕಿಲ್ಲರ್ ಕೊರೊನಾ ವೈರಸ್ ಮಾನವನಿಗೆ ಮಾತ್ರವಲ್ಲ ಪ್ರಾಣಿ ಪ್ರಪಂಚವನ್ನೂ ಅಲ್ಲೋಲ ಕಲ್ಲೋಲ ಮಾಡಿದೆ. ಪ್ರವಾಸಿಗರಿಲ್ಲದೆ ಮೃಗಾಲಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಪ್ರಾಣಿಗಳ ಆಹಾರಕ್ಕೂ ಈಗ ಸಂಕಷ್ಟ ಬಂದಿದೆ.
ಗದಗ ತಾಲೂಕಿನ ಬಿಂಕದಕಟ್ಟಿ ಕಿರು ಮೃಗಾಲಯ ಈಗ ಸಂಕಷ್ಟಕ್ಕೆ ಗುರಿಯಾಗಿದೆ. ಈ ಮೃಗಾಲಯಕ್ಕೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ ಪ್ರಿಯರು ಬರ್ತಾಯಿದ್ರು. ಆದ್ರೆ, ಈ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೀಗಾಗಿ ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ.
ನಾಲ್ಕು ಚಿರತೆಯನ್ನು ದತ್ತು ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ..
ಇದರಿಂದ ಇಲ್ಲಿನ ಪ್ರಾಣಿಗಳನ್ನ ಸಾಕುವುದು ಅರಣ್ಯ ಇಲಾಖೆಗೆ ಕಷ್ಟವಾಗಿದೆ. ಅದರಲ್ಲೂ ಮಾಂಸಾಹಾರಿ ಪ್ರಾಣಿಗಳನ್ನು ಸಲಹುವುದು ದೊಡ್ಡ ಸವಾಲಾಗಿದೆ. ಈಗಾಗಲೇ ಒಂದು ಹುಲಿ ಹಾಗೂ ಎರಡು ಚಿರತೆಗಳನ್ನು ಪ್ರಾಣಿ ಪ್ರಿಯರು ದತ್ತು ಪಡೆದುಕೊಂಡಿದ್ದಾರೆ. ಉಳಿದ ಒಂದು ಹುಲಿ ಹಾಗೂ ನಾಲ್ಕು ಚಿರತೆಯನ್ನು ದತ್ತು ಪಡೆಯುವಂತೆ ಡಿಎಫ್ಒ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಒಂದು ಹುಲಿಗೆ ಪ್ರತಿ ತಿಂಗಳು 4 ಲಕ್ಷ ದಿಂದ 4.50 ಲಕ್ಷದವರೆಗೆ ಹಣ ಖರ್ಚಾಗುತ್ತದೆ. ಒಂದು ಹುಲಿಗೆ 8-9 ಕೆಜಿ ಮಾಂಸ ಬೇಕು. ಚಿರತೆಗೂ ಬರೊಬ್ಬರಿ 3 ರಿಂದ 3.50 ಲಕ್ಷ ಬೇಕು. ಇಷ್ಟೊಂದು ಹಣ ಆದ್ರೆ ದತ್ತು ಪಡೆಯಲು ಜನ ಮುಂದೆ ಬರಲ್ಲ ಅಂತ, ಹುಲಿಗೆ ಒಂದು ಲಕ್ಷ, ಚಿರತೆಗೆ 35 ಸಾವಿರ ಅಂತ ಫಿಕ್ಸ್ ಮಾಡಿದ್ದಾರೆ.
ಒಂದು ವರ್ಷದ ಆಹಾರ, ಆರೈಕೆಗೆ 1 ಕೋಟಿ ಖರ್ಚಾಗುತ್ತದೆ.. ಈ ಮೃಗಾಲಯದ ಕರಡಿ, ಹೆಬ್ಬಾವು, ಮೊಸಳೆ, ಜಿಂಕೆ, ನರಿ ಸೇರಿ ಇಲ್ಲಿರುನ ಪ್ರಾಣಿ ಪಕ್ಷಿಗಳ ಒಂದು ವರ್ಷದ ಆಹಾರ, ಆರೈಕೆಗೆ ಬರೋಬ್ಬರಿ 1 ಕೋಟಿ ಖರ್ಚಾಗುತ್ತದೆ. ಕೊರೊನಾ ಬಂದ ಮೇಲೆ ವರ್ಷದ ಆಹಾರದ ವ್ಯವಸ್ಥೆಗೆ ಅಧಿಕಾರಿಗಳು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಪ್ರಾಣಿ ಪ್ರಿಯರು ಪ್ರಾಣಿಗಳನ್ನ ದತ್ತು ಪಡೆಯಲು ಮುಂದಾಗಬೇಕಿದೆ.
ಸಸ್ಯಾಹಾರಿ ಪ್ರಾಣಿಗಳನ್ನು ದತ್ತು ಪಡೆಯಬಹುದು. ಆದ್ರೆ, ಪ್ರಮುಖವಾಗಿ ಮಾಂಸಾಹಾರಿ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮೃಗಾಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರ ಕೂಡ ಇತ್ತ ಗಮನ ಹರಿಸಿ ಅನುದಾನ ಬಿಡುಗಡೆ ಮಾಡಬೇಕು. ಇದರ ಜೊತೆಗೆ ಸ್ಥಿತಿವಂತರು ಕೂಡಾ ನೆಚ್ಚಿನ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಹೊಟ್ಟೆ ತಂಪು ಮಾಡಬೇಕಿದೆ.
ಹಾವು ಹರಿದಾಡಲು ಮೇಲುಸೇತುವೆ: ಉತ್ತರಾಖಂಡ ಅರಣ್ಯಾಧಿಕಾರಿ ಕ್ರಿಯೆಟಿವ್ ಚಿಂತನೆ