ಹಿಂದಿನ ವ್ಯಾಕ್ಸಿನ್ ಬಳಸಬೇಡಿ; ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ಬರಲಿದೆ: ದಿನೇಶ್ ಗುಂಡೂರಾವ್
ಕೋವಿಡ್ ಹರಡುವ ಭೀತಿ ನಡುವೆ ರಾಜ್ಯದಲ್ಲಿ ಮಂಗನಕಾಯಿಲೆ ಹೆಚ್ಚಳವಾಗುತ್ತಿದೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ. ಹೊಸ ವ್ಯಾಕ್ಸಿನ್ ಬಳಕೆ ಬಗ್ಗೆ ಐಸಿಎಂಆರ್ ಜೊತೆ ಚರ್ಚೆ ನಡೆಯುತ್ತಿದೆ ಎಂದರು. ಅಲ್ಲದೆ, ರಾಜ್ಯದಲ್ಲಿ ಕೊವಿಡ್ ನಿಯಂತ್ರಣದಲ್ಲಿದೆ. ಎಳೆಪ್ರಾಯದವರಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿವೆ ಎಂದರು.
ಉಡುಪಿ, ಫೆ.10: ರಾಜ್ಯದಲ್ಲಿ ಮಂಗನ ಕಾಯಿಲೆ (Monkey Disease) ಹೆಚ್ಚಳವಾಗುತ್ತಿರುವ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ. ಹೊಸ ವ್ಯಾಕ್ಸಿನ್ ಬಳಕೆ ಬಗ್ಗೆ ICMR ಜೊತೆ ಚರ್ಚೆ ನಡೆಯುತ್ತಿದೆ ಎಂದರು. ಹೈದರಾಬಾದ್ ಸಂಸ್ಥೆ ಐಸಿಎಂಆರ್ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸಲು ಒಪ್ಪಿಗೆ ನೀಡಿದೆ. ಮುಂದಿನ ವರ್ಷಕ್ಕೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದರು.
ಉಡುಪಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ. ಮಾರ್ಚ್ ವರೆಗೆ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ರಾಜ್ಯದಲ್ಲಿ 2 ಸಾವಾಗಿದೆ, ಇಬ್ಬರು ಐಸಿಯುನಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟು 70 ಕೆಎಫ್ಡಿ ಪ್ರಕರಣ ದಾಖಲಾಗಿದೆ. ಒಟ್ಟು 20 ಸಕ್ರಿಯ ಪ್ರಕರಣಗಳು ಇವೆ. ಪರಿಹಾರ ನೀಡುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ಸಾವು ಆಗದೆ ಇರುವ ಬಗ್ಗೆ ಮುನ್ನೆಚ್ಚರಿ ಕಾರ್ಯಕ್ರಮ ಕೈಗೊಳ್ಳುತ್ತೇವೆ. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ಇದನ್ನೂ ಓದಿ: Monkeypox: ಮಂಗನ ಕಾಯಿಲೆಯಿಂದ ಯಾರಿಗೆ ಅಪಾಯ ಜಾಸ್ತಿ?; ಮಂಕಿಫಾಕ್ಸ್ನಿಂದ ಪಾರಾಗುವುದು ಹೇಗೆ?
ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಎಳೆ ಪ್ರಾಯದ ಹೃದಯಘಾತ ಪ್ರಕರಣ ಹೆಚ್ಚುತ್ತದೆ. ಹೃದಯಾಘಾತಕ್ಕೆ ಬೇರೆ ಬೇರೆ ಕಾರಣಗಳು ಇರುತ್ತದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಬಿಪಿ, ಶುಗರ್ ಹೆಚ್ಚಾಗಿ ಬಾಧಿಸುತ್ತಿದೆ. ಜಂಕ್ ಫುಡ್, ಸಂಸ್ಕರಣೆ ಆದ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಯುವಕರಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿದೆ. ಆಹಾರ, ಸಿಹಿ ಪದಾರ್ಥ ಮಾಲಿನ್ಯದಿಂದ ಹೃದಯಾಘಾತ ಬರುವ ಸಾಧ್ಯತೆ ಹೆಚ್ಚು ಎಂದರು.
ಕೋವಿಡ್ ವ್ಯಾಕ್ಸಿನ್ ಬಗ್ಗೆ ಸಂಶಯ ಪಡುವವರು ತುಂಬಾ ಜನ ಇರುತ್ತಾರೆ. ಆದರೆ ಅಧಿಕೃತ ಆದಂತಹ ಯಾವುದೇ ವರದಿಗಳು ಇಲ್ಲ. ಕೋವಿಡ್ ಬಂದವರಿಗೆ ಸಮಸ್ಯೆ ಇರುತ್ತದೆ, ಆದರೆ ವ್ಯಾಕ್ಸಿನ್ನಿಂದ ಅಲ್ಲ. ಕೋವಿಡ್ ಆಫ್ಟರ್ ಎಫೆಕ್ಟ್ ಹೃದಯಾಘಾತ ಆಗಬಹುದು. ಸುಸ್ತು ಮೈಕೈ ನೋವು ಸಮಸ್ಯೆಗಳು ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Sat, 10 February 24