10 ವರ್ಷಗಳಲ್ಲಿ ಹೃದಯಾಘಾತ ಶೇ 22 ರಷ್ಟು ಹೆಚ್ಚಳ: ಡಾ ಸಿಎನ್ ಮಂಜುನಾಥ್ ಕೊಟ್ಟ ಕಾರಣ ಇಲ್ಲಿದೆ

ಮಾಲಿನ್ಯದಿಂದಲೂ ಹೃದಯಘಾತ ಸಮಸ್ಯೆ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ, ಅತಿಯಾದ ಒತ್ತಡ, ವಿಶ್ರಾಂತಿ ರಹಿತ ಕೆಲಸ, ಸಕ್ಕರೆ ಕಾಯಿಲೆ, ಥೈರಾಯ್ಡ್ ಸಮಸ್ಯೆ, ಪಿಒಸಿಡಿ, ರಕ್ತ ಹೆಪ್ಪು ಕಟ್ಟುವ ಅಂಶ, ಫ್ಯಾಟಿ ಲಿವರ್, ಕೊಕ್ಕೇನ್, ಹುಕ್ಕಾ ಬಾರ್ ಇವೆಲ್ಲವೂ ಹೃದಯಘಾತಕ್ಕೆ ಕಾರಣವಾಗುತ್ತಿವೆ ಎಂದು ಡಾ. ಸಿಎನ್ ಮಂಜುನಾಥ್ ತಿಳಿಸಿದ್ದಾರೆ.

10 ವರ್ಷಗಳಲ್ಲಿ ಹೃದಯಾಘಾತ ಶೇ 22 ರಷ್ಟು ಹೆಚ್ಚಳ: ಡಾ ಸಿಎನ್ ಮಂಜುನಾಥ್ ಕೊಟ್ಟ ಕಾರಣ ಇಲ್ಲಿದೆ
ಡಾ ಸಿಎನ್ ಮಂಜುನಾಥ್ (ಟಿವಿ9 ಸಂಗ್ರಹ ಚಿತ್ರ)
Follow us
| Updated By: ಗಣಪತಿ ಶರ್ಮ

Updated on:Oct 31, 2023 | 4:49 PM

ಬೆಂಗಳೂರು, ಅಕ್ಟೋಬರ್ 31: ಕಳೆದ 10 ವರ್ಷಗಳಲ್ಲಿ ಹೃದಯಾಘಾತ (Heart Attack) ಪ್ರಮಾಣ ಶೇ 22 ರಷ್ಟು ಹೆಚ್ಚಳವಾಗಿದೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ (Jayadeva Hospital) ನಿರ್ದೇಶಕ ಡಾ. ಸಿಎನ್ ಮಂಜುನಾಥ್ (Dr CN Manjunath) ಮಾಹಿತಿ ನೀಡಿದ್ದಾರೆ. ಕೋವಿಡ್​ನಿಂದ ಚೇತರಿಸಿಕೊಂಡವರು ಸ್ವಲ್ಪ ಸಮಯದವರೆಗೆ ಕಠಿಣ ಕೆಲಸದಿಂದ ದೂರವಿರಬೇಕು ಮತ್ತು ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬಾರದು ಎಂದು ಐಸಿಎಂಆರ್ ಸಂಶೋಧನೆ ಆಧಾರಿತವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಡಾ. ಸಿಎನ್ ಮಂಜುನಾಥ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಕೋವಿಡ್ ಬಂದು ಎರಡು ವರ್ಷಗಳಾಗಿವೆ. ಕೋವಿಡ್ ಲಸಿಕೆಯಿಂದ ಹೃದಯಾಘಾತ ಜಾಸ್ತಿಯಾಗಿಲ್ಲ. ಕೋವಿಡ್ ಬಂದವರು ಹೆಚ್ಚು ಕೆಲಸ ಮಾಡಬಾರದು, ಜಿಮ್ ಮಾಡಬಾರದು ಎನ್ನುವ ಬಗ್ಗೆ ಯಾವುದೇ ಅಧ್ಯಯನ ಮಾಡಿಲ್ಲ. ಆದರೆ, ನಾವು 18 ವರ್ಷದಿಂದ 40 ವರ್ಷ ವಯಸ್ಸಿನ ಜನರ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಈ ಅಧ್ಯಯನದಲ್ಲಿ, ಮಹಿಳೆಯರಲ್ಲಿಯೂ ಕೂಡ ಹೃದಯಾಘಾತ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಧೂಮಪಾಮ ಮಾಡಿದವರಲ್ಲಿ ಶೇ 57 ರಷ್ಟು ಹೃದಯಘಾತ ಕಂಡುಬಂದಿತ್ತು. ಶೇ 25 ರಷ್ಟು ಜನರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಇದ್ದರು ಹೃದಯಘಾತ ಹೆಚ್ಚಾಗಿತ್ತು. ಯುವಕರು ಹೆಚ್ಚು ಕೆಲಸ ಮಾಡಬಾರದು ಎನ್ನುವುದರ ಬಗ್ಗೆ ಯಾವುದೇ ಅಧ್ಯಯನ ಮಾಡಿಲ್ಲ. ಅತಿಹೆಚ್ಚು ಕೆಲಸ ಮಾಡಿದರೆ ಅಧಿಕ ರಕ್ತದ ಒತ್ತಡ, ಹೃದಯದ ಆಘಾತದಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ರೆ ಕಠಿಣ ಕೆಲಸಗಳನ್ನ ಮಾಡಲೇಬಾರದು ಅಂದರೆ ಕಷ್ಟವಾಗುತ್ತದೆ. ನಿಗಧಿತ ಅವಧಿಗಿಂತ ಎರಡು ಗಂಟೆಗಳು ಹೆಚ್ಚು ಕೆಲಸ ಮಾಡಿದರೆ ಏನೂ ಸಮಸ್ಯೆ ಇಲ್ಲ. ಆದರೆ ಇದನ್ನು ಮೀರಿ ಹೆಚ್ಚು ಕೆಲಸ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಮಾಲಿನ್ಯದಿಂದಲೂ ಹೃದಯಘಾತ ಸಮಸ್ಯೆ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ, ಅತಿಯಾದ ಒತ್ತಡ, ವಿಶ್ರಾಂತಿ ರಹಿತ ಕೆಲಸ, ಸಕ್ಕರೆ ಕಾಯಿಲೆ, ಥೈರಾಯ್ಡ್ ಸಮಸ್ಯೆ, ಪಿಒಸಿಡಿ, ರಕ್ತ ಹೆಪ್ಪು ಕಟ್ಟುವ ಅಂಶ, ಫ್ಯಾಟಿ ಲಿವರ್, ಕೊಕ್ಕೇನ್, ಹುಕ್ಕಾ ಬಾರ್ ಇವೆಲ್ಲವೂ ಹೃದಯಘಾತಕ್ಕೆ ಕಾರಣವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​​ನಿಂದ ಬಳಲಿದವರು ಕಠಿಣ ವ್ಯಾಯಾಮ, ಕೆಲಸ ಮಾಡಬೇಡಿ: ಮನ್ಸುಖ್ ಮಾಂಡವಿಯಾ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಇತ್ತೀಚೆಗೆ ಒಂದು ವಿವರವಾದ ಅಧ್ಯಯನವನ್ನು ಮಾಡಿದೆ. ಆ ಅಧ್ಯಯನವು ತೀವ್ರವಾದ ಕೋವಿಡ್ ಹೊಂದಿರುವವರು ಹೆಚ್ಚುವರಿ ಚಟುವಟಿಕೆಗಳಿಂದ ದೂರವಿರಬೇಕು ಎಂದು ಶಿಫಾರಸು ಮಾಡಿದೆ. ನಿರ್ದಿಷ್ಟಪಡಿಸಿದ ಅವಧಿಗೆ, ಅಂದರೆ ಒಂದು ವರ್ಷ ಅಥವಾ ಎರಡು ವರ್ಷಗಳ ಕಾಲ ನಿರಂತರ ಶ್ರಮ, ಶ್ರಮದಾಯಕ ವ್ಯಾಯಾಮಗಳು ಇತ್ಯಾದಿಗಳಿಂದ ದೂರವಿರಬೇಕು. ಇದರಿಂದ ಹೃದಯಾಘಾತವನ್ನು ತಡೆಯಬಹುದು ಎಂದು ಸಲಹೆ ನೀಡಿದೆ ಎಂದು ಕೇಂದ್ರ ಸಚಿವ ಮಾಂಡವೀಯ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:44 pm, Tue, 31 October 23