ಬೆಳಗಾವಿ: ಅಲ್ಲಿ ಭಂಡಾರದೋಕುಳಿ ಮೇಳೈಸಿತ್ತು. ಕೇರಿ ಕೇರಿಯೂ ಅರಿಶಿನದಿಂದ ಕಂಗೊಳಿಸಿತ್ತು. ಬೀದಿಯಲ್ಲಿ ಮೆರವಣಿಗೆ ಸಾಗ್ತಿದ್ರೆ ಭಕ್ತರು ಸಡಗರದಲ್ಲಿ ಮುಳುಗಿ ಸಂತಸದಲ್ಲಿ ತೇಲಿದ್ರು. ಅದ್ರಲ್ಲೂ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರ ರಾಣಿ ಆರಾಧಿಸುತ್ತಿದ್ದ ದೇವಿಯನ್ನ ಹೊತ್ತು ಕುಣಿದ್ರು. ಕಿತ್ತೂರು ರಾಣಿ ಚೆನ್ನಮ್ಮ ಆರಾಧಿಸುತ್ತಿದ್ದ ದ್ಯಾಮಮ್ಮ ಮತ್ತು ದುರಗಮ್ಮ ದೇವಿ ಜಾತ್ರೆಯ ವೈಭವವಿದು.
ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆಯ ಗ್ರಾಮ ದೇವತೆಗಳಾದ ದ್ಯಾಮಮ್ಮ, ದುರಗಮ್ಮ ದೇವಿ ಜಾತ್ರೆಯನ್ನ ದಶಮಾನಗಳ ಬಳಿಕ ಈಗ ಆಚರಿಸಲಾಗ್ತಿದೆ. ಮೇ 4 ರಿಂದ ಜಾತ್ರೆ ಶುರುವಾಗಿದ್ದು, 7 ಹಳ್ಳಿಗಳ ಗ್ರಾಮಸ್ಥರು ಪಲ್ಲಕ್ಕಿಯನ್ನ ಕಿತ್ತೂರಿಗೆ ತಂದ್ರು. ಉತ್ಸವದ ವಿಶೇಷತೆ ಅಂದ್ರೆ ಭಂಡಾರ ಎರಚುತ್ತಾ ಭಕ್ತರು ಹೊನ್ನಾಟದಲ್ಲಿ ತೊಡಗಿ ಭಕ್ತಿ ಅರ್ಪಿಸಿದ್ರು. ಬೆಳಗಾವಿಯ ಜಾತ್ರೆ ಇಷ್ಟಾದ್ರೆ ಕೋಟೆನಾಡಲ್ಲೂ ಕುಲದೇವಿಯ ಉತ್ಸವ ಅದ್ಧೂರಿಯಾಗಿ ನಡೆದಿತ್ತು.
ಭಂಡಾರದೋಕುಳಿಯಲ್ಲಿ ಸಂಭ್ರಮಿಸಿದ ಭಕ್ತರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಚಿತ್ರದುರ್ಗದಲ್ಲಿ ಕೋಟೆ ಆಳಿದ ಪಾಳೇಗಾರರ ಕುಲದೇವತೆ ಉತ್ಸವಾಂಬಾ ದೇವಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಏಳುಸುತ್ತಿನ ಕೋಟೆ ರಸ್ತೆಯಲ್ಲಿ ದೇವಿ ಉತ್ಸವ ಮೂರ್ತಿಯನ್ನ ಮೆರವಣಿಗೆ ಮಾಡಿದ್ರು. ಎತ್ತಿನ ಬಂಡಿಯಲ್ಲಿ ರಥೋತ್ಸವ ಮಾಡಿ ಪಾಳೇಗಾರರ ಆರಾಧ್ಯ ದೇವಿಗೆ ಭಕ್ತಿ ಅರ್ಪಿಸಿದ್ರು. ಯುಗಾದಿ ಹಬ್ಬವಾದ 1ತಿಂಗಳ ಬಳಿಕ ದೇವಿ ಜಾತ್ರೆ ನಡೆದಿದ್ದು, ಭಕ್ತರು ಹರಕೆ ಕೂಡ ಸಲ್ಲಿಸಿದ್ರು. ರಾಜ ಮನೆತನದವರು ಆಳಿದ ಕಿತ್ತೂರು ಮತ್ತು ಚಿತ್ರದುರ್ಗದಲ್ಲಿ ಕುಲದೇವರ ಜಾತ್ರೆ ಅದ್ಧೂರಿಯಾಗಿ ನಡೆದಿದೆ. ಕೊವಿಡ್ನಿಂದ ಮಂಕಾಗಿದ್ದ ಜಾತ್ರೆಗಳಿಗೆ ಮತ್ತೆ ಜೀವಕಳೆ ಬಂದಿದೆ.
ಚಿತ್ರದುರ್ಗದಲ್ಲಿ ಉತ್ಸವಾಂಬಾ ದೇವಿ ಜಾತ್ರೆ
ವರದಿ: ಬೆಳಗಾವಿ ಸಹದೇವ್ ಜತೆ ಬಸವರಾಜ್ ಮುದನೂರು ಟಿವಿ9 ಚಿತ್ರದುರ್ಗ